ಅಕೇಶಿಯ ಮರ ಬಿದ್ದು ಮೃತನಾದ ಸಚಿನ್ ಮನೆಗೆ ಆರ್ ಎಂ ಮಂಜುನಾಥ್ ಗೌಡ ಭೇಟಿ, ದುಃಖ ತಪ್ತರಿಗೆ ಸಾಂತ್ವನ

ಅಕೇಶಿಯ ಮರ ಬಿದ್ದು ಮೃತನಾದ ಸಚಿನ್ ಮನೆಗೆ ಆರ್ ಎಂ ಮಂಜುನಾಥ್ ಗೌಡ ಭೇಟಿ, ದುಃಖ ತಪ್ತರಿಗೆ ಸಾಂತ್ವನ

ಅಶ್ವಸೂರ್ಯ/ತೀರ್ಥಹಳ್ಳಿ :ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪದಲ್ಲಿ ಶುಕ್ರವಾರ ತಡರಾತ್ರಿ ಅಕೇಶಿಯ ಮರ ಬಿದ್ದು ಮೃತಪಟ್ಟ ಸಚಿನ್ ಮನೆಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ .ಆರ್ ಎಂ ಮಂಜುನಾಥ್ ಗೌಡ ಭೇಟಿ ನೀಡಿ ಅವರ ಕುಟುಂಬಕ್ಕೆ ದೈರ್ಯ ತುಂಬಿ.ಮೃತ ಸಚಿನ್ ಮನೆಯಿಂದಲೇ ಜಿಲ್ಲಾಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ ತಕ್ಷಣವೇ ಪರಿಹಾರದ ಚೆಕ್ ನೀಡಿವಂತೆ ಹೇಳಿದ್ದಾರೆ.

ಮೊದಲೇ ಬಡಕುಟುಂಬ ಅಧಾರವಾಗಿದ್ದ ಮಗನನ್ನು ಕಳೆದುಕೊಂಡು ದಿಕ್ಕೆ ತೊಚದಂತಾಗಿ ಮಗನನ್ನು ನೆನೆದು ದುಃಖಿಸುತ್ತಿದ್ದರು. ಮೃತ ಸಚಿನ್ ತಂದೆ ರಾಮಪ್ಪ ನವರ ಜೊತೆಗೆ ಮಾತನಾಡಿದ ಮಂಜುನಾಥ್ ಗೌಡ್ರು ಜಿಲ್ಲಾ ಮಂತ್ರಿಗಳಾದ ಮಧುಬಂಗಾರಪ್ಪ ಕೂಡ ಇಲ್ಲಿಗೆ ಬರ್ತಾರೆ ಎಂದು ಯುವಕನ ತಂದೆ ರಾಮಪ್ಪ ಅವರಿಗೆ ಧೈರ್ಯತುಂಬಿ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ .

ಈ ಸಂಧರ್ಭದಲ್ಲಿ ಕೊಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಗಳಾ ಗೋಪಿ, ಹಾದಿಗಲ್ಲು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರವೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪರಮೇಶ್ ,ಕಾಂಗ್ರೆಸ್ ಪಕ್ಷದ ಯುವ ಮುಖಂಡ ಕುರುವಳ್ಳಿ ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

ವಿಧಿ ಆಟ!

ಸಾವು ಅನ್ನೋದು ವಿಧಿಯ ಆಟ. ಯಾರು? ಎಲ್ಲಿ? ಯಾವಾಗ? ಹೇಗೆ? ಎಂದು ನಿರೀಕ್ಷೆ ಮಾಡುವ ಮೊದಲೇ ಸಾವಿನಮನೆ ಸೇರುತ್ತಾರೆ.!ಸಾವನ್ನು ಊಹಿಸಲು ಸಾಧ್ಯವಿಲ್ಲ..!ಎಲ್ಲವೂ ಸರಿಯಾಗಿದೆ ಎಂದು ಅಂದು ಕೊಂಡಾಗಲೆ ಯಾವ ರೂಪದಲ್ಲಾದರು ಸಾವು ಎದುರಾಗಬಹುದು. ಈ ರೀತಿಯ ವಿಧಿ ಆಟದ ಸಾವಿಗೆ ಉಸಿರು ಚೆಲ್ಲಿದವನು ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಸಮಿಪದ ಮೀನ್ಮನೆಕೊಪ್ಪದ ಹುಡುಗ ಸಚಿನ್! ಇನ್ನೂ ಕಿರಿವಯಸ್ಸು (26) ಪ್ರಕೃತಿಯ ಅಟ್ಟಹಾಸಕ್ಕೆ ಸಾವು ಬಹುಬೇಗನೆ ಬಂದು ಆತನ ಉಸಿರನ್ನು ಕಸಿದುಕೊಂಡು ಹೋಗಿದೆ? ವಿಧಿಯ ಕ್ರೂರ ನರ್ತನದಿಂದ ಕ್ಷಣಾರ್ಧದಲ್ಲಿ ನಗುವಿನ ವಾತಾವರಣವಿದ್ದ ಆತನ ಮನೆಯಲ್ಲಿ ಆಕ್ರಂದನ,ನರಳಾಟ ಕೇಳ ತೊಡಗಿದೆ.ಮನೆಗೆ
ಅಧಾರವಾಗಿದ್ದ ಮಗನನ್ನು ಕಳೆದುಕೊಂಡ ಮನೆಯಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟಿದೆ. ಸಚಿನ್ ಸಾವನ್ನು ಅರಗಿಸಿ ಕೊಳ್ಳಲಾಗದ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಹೌದು ಇಂತಹದೊಂದು ಘಟನೆ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಸಮೀಪದ ಮೀನ್ಮನೆಕೊಪ್ಪದಲ್ಲಿ ಶುಕ್ರವಾರ ನಡೆದು ಹೋಗಿದೆ!

ಘಟನೆಯ ಹಿನ್ನಲೆ :

ಎಂದಿನಂತೆ ಕೋಣಂದೂರಿಗೆ ಕೆಲಸದ ನಿಮಿತ್ತ ತೆರಳಿದ್ದ ಸಚಿನ್‌ (26 ) ಮಳೆ ಜೋರಾಗಿ ಸುರಿಯುತ್ತಿದ್ದರು ತಿರುಗಿ ಮನಗೆ ಹೋಗಲು ಬೈಕ್ ಏರಿ ಹೊರಟಿದ್ದಾನೆ ಒಂದು ಕಡೆ ಕತ್ತಲು ಅವರಿಸಿದರೆ ಇನ್ನೊಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅದರೂ ಮನೆ ಸೇರುವ ಅತುರದಲ್ಲಿ ಮೀನ್ಮನೆಕೊಪ್ಪ ಗ್ರಾಮದಕಡೆ ಬೈಕಿನಲ್ಲಿ ಚಲಿಸುತ್ತಿರುವಾಗಲೇ ರಸ್ತೆಯ ಇಕ್ಕೆಲದಲ್ಲಿ ಬೆಳೆದು ನಿಂತಿದ್ದ ಆಕೇಶಿಯ ಮರವೊಂದು ಆತನ ಮೇಲೆ ಬಿದ್ದಿದೆ. ಬಲವಾಗಿ ಬೆಳೆದ ಮರ ಆತನ ಮಲೆ ಅಪ್ಪಳಿಸಿದ ರಭಸಕ್ಕೆ ಸ್ಥಳದಲ್ಲೇ ಸಾವಿನಮನೆ ಸೇರಿದ್ದಾನೆ ಸಚಿನ್! ಎಂದಿನಂತೆ ಕೆಲಸ‌ ಮುಗಿಸಿಕೊಂಡು ಮನೆಗೆ‌ ಬರಬೇಕಾಗಿದ್ದ ಮಗ ಸಮಯ ಉರುಳಿದರು ಮನೆಗೆ ಬಾರದೆ ಇರುವುದನ್ನು ನೋಡಿ ಹೆತ್ತವರಿಗೆ ಗಾಬರಿಯಾಗಿದೆ. ಅಕ್ಕಪಕ್ಕದವರು ಮತ್ತು ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ.ಆಗ ರಸ್ತೆಯಲ್ಲಿ ಮರಬಿದ್ದು ಸಚಿನ್ ಸಾವಿಗೀಡಾಗಿರುವುದು ಕಂಡುಬಂದಿದೆ.! ಇನ್ನೂ ಕಿರಿ ವಯಸ್ಸಿನ ಹುಡುಗ ಸಚಿನ್ ರಕ್ತದ ಮಡುವಿನಲ್ಲಿ ಶವವಾಗಿ ಮಲಗಿರುವುದನ್ನು ಕಂಡು ಹೆತ್ತವರ ಮತ್ತು ಕುಟುಂಬಸ್ಥರಿಗೆ ಮಾತು ಬಾರದಾಗಿದೆ. ದುಃಖ ಮುಗಿಲು ಮುಟ್ಟಿದೆ.ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಹೇಳತೀರದಾಗಿದೆ…

Leave a Reply

Your email address will not be published. Required fields are marked *

Optimized by Optimole
error: Content is protected !!