ಕುಂದಾಪುರ ಮಣೂರಿನ ಉದ್ಯಮಿ ಮನೆಗೆ ಬಂದ ಆಗಂತುಕರು!:ದರೋಡೆಗೆ ಬಂದಿದ್ದರಾ? ಇನ್ನಾವುದೋ ಕ್ರೈಮ್ ಮಾಡಲು ಸಜ್ಜಾಗಿ ಬಂದಿದ್ದರಾ? ಜಸ್ಟ್ ಮಿಸ್.!
ಕುಂದಾಪುರ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಗೆ 2 ಕಾರಿನಲ್ಲಿ ಬಂದ ಆಗುಂತಕರು.! ಮನೆಯವರು ಬಾಗಿಲು ತೆಗೆಯಲಿಲ್ಲಿ.!ಬಂದಷ್ಟೆ ವೇಗವಾಗಿ ಹಿಂತಿರುಗಿದ ಆಗುಂತಕರು? ಹಾಗಾದರೆ ಪೋಲಿಸರ ಸೋಗಿನಲ್ಲಿ ಬಂದವರು ಯಾರು? ತನಿಖೆಗೆ ಎರಡು ಪ್ರತ್ಯೇಕ ತಂಡವನ್ನು ರಚಿಸಿದ ಪೋಲಿಸ್ ಅಧಿಕಾರಿಗಳು
ಅಶ್ವಸೂರ್ಯ/ಶಿವಮೊಗ್ಗ: ಕುಂದಾಪುರದ ಹೊರವಲಯ ಮಣೂರಿನಲ್ಲಿ ಇಂದು ಮುಂಜಾನೆ ಎರಡು ಕಾರುಗಳಲ್ಲಿ ಪೊಲೀಸರು ಮತ್ತು ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಮಾಡಿದ್ದಾರೆ!. ಈ ತಂಡದ ಚಲನವಲನಗಳ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದು ಕೋಟ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ದೂರು ನೀಡಿರುವ ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಅವರು ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಯಿತು.ಆಗ ಅನುಮಾನ ಬಂದು ಬಾಗಿಲು ತೆರೆಯದೆ ನಿರ್ಲಕ್ಷಿಸಿದೆ,ನಂತರ 9 ಗಂಟೆ ಸುಮಾರಿಗೆ ಹೊರಗಡೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದಾರೆ. ಗೆಟ್ ತೆಗೆಯಲು ಸಾಧ್ಯವಾಗದ ಕಾರಣಕ್ಕೆ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದರು. ಅಪರಿಚಿತರು ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ವಾಪಸ್ ಹೋಗಿರುವುದಾಗಿ ತಿಳಿಸಿದ್ದಾರೆ.
ಘಟನೆ ಸಂಬಂದಿಸಿದಂತೆ
ಒಂದು ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೂಂದು ಕಾರಿನಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಒಬ್ಬ ಹಾಗೂ ಇತರರು ಸೇರಿ ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದ್ದು. 6 ಜನ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಣ್ಣಗೆ ತುಂತುರು ಮಳೆ ಹನಿಯುತ್ತಿತ್ತು.ಇತ್ತ ಯಾವುದೋ ಸ್ಕೆಚ್ ಹಾಕಿ ಬಂದ ಆಗುಂತಕರ ತಂಡ ಕಾರಿನಿಂದ ಇಳಿದು ಮನೆಯ ಗೇಟು ತೆರೆಯಲು ಪ್ರಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಬಲವಾಗಿ ಗುದ್ದಿ ಸದ್ದು ಮಾಡಿದ್ದಾರೆ.! ಆ ಬಳಿಕ ಇನ್ನೊಂದು ಕಡೆಯಿಂದ ಹೋಗಿ ಕಾಂಪೌಂಡ್ ಹಾರಿ ಬಾವಿಕಟ್ಟಯ ಮೇಲೆ ಕಾಲಿಟ್ಟು ಒಳಕ್ಕೆ ಇಳಿದು ಅಂಗಳದ ಮುಖಾಂತರ ಮುಖ್ಯ ಬಾಗಿಲ ಬಳಿಗೆ ಹೋಗಿ ಬಾಗಿಲು ತಟ್ಟಿದ್ದಾರೆ ಕೆಲವು ಸಮಯ ಕಳೆದರು ಬಾಗಿಲು ತೆರೆಯದ ಕಾರಣಕ್ಕೆ ಆಗುಂತಕರ ತಂಡ ಸ್ಥಳದಿಂದ ಕಣ್ಮರೆಯಾಗಿದೆ.!
ಭದ್ರತಾ ಸಂಸ್ಥೆಯಿಂದ ಬಂತು ಕರೆ?
ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಿಬ್ಬಂದಿ ಉದ್ಯಮಿ ಮನೆಯ ಸಿಸಿಟಿವಿಯ ಲೈವ್ ವೀಕ್ಷಣೆ ಮಾಡುತ್ತಿದ್ದಾಗ ಎರಡು ವಾಹನಗಳಲ್ಲಿ ಆಗಂತುಕರು ಆಗಮಿಸಿದ್ದು ಗೊತ್ತಾಗಿದೆ. ಕೂಡಲೇ ಕಾರ್ಯನಿರ್ವಹಿಸುತ್ತಿದ್ದ ಸಿಬಂದಿಯು ಎಚ್ಚೆತ್ತುಕೊಂಡು ತಕ್ಷಣ ಮನೆಯವರಿಗೆ ಕರೆ ಮಾಡಿದ್ದಾರೆ, ಆ ಸಂಧರ್ಭದಲ್ಲಿ ಕರೆಯನ್ನು ಮನೆ ಯವರು ಸ್ವೀಕರಿಸಲಿಲ್ಲ. ಬಳಿಕ ಸಂಸ್ಥೆಯ ಮಾಲಿಕ ಕೃಷ್ಣ ಕರೆ ಮಾಡಿದಾಗ ಮನೆಯವರು ಕರೆಯನ್ನು ಸ್ವೀಕರಿಸಿದ್ದು, ಮನೆಯ ಹೊರಗಡೆ ನಡೆಯುತ್ತಿರುವ ಸಂಗತಿಯನ್ನು ತಿಳಿಸಿದ್ದಾರೆ. ಆಗಮಿಸಿದ ತಂಡ ಐಟಿ, ಇ.ಡಿ.ಯವರು ಆಗಿರಬಹುದು ಎಂಬ ಅನುಮಾನ ಮನೆಯವರಲ್ಲಿತ್ತು.
ಮನೆಯವರು ಬಾಗಿಲು ತೆರೆಯದ ಕಾರಣ ಮರಳಿದ ಆಗಂತುಕರು ಸಾಸ್ತಾನ ಟೋಲ್ ಮಾರ್ಗದಲ್ಲಿ ಸಾಗದೆ, ಬಾರ್ಕೂರು ಮಾರ್ಗದ ಮೂಲಕ ಟೋಲ್ ತಪ್ಪಿಸಿ ಹೋಗಿದ್ದಾರೆ.!? ವಾಹನ ಅತಿವೇಗದಲ್ಲಿ ಸಾಗಿದೆ ಎಂದೂ ಹೇಳಲಾಗುತ್ತಿದ್ದು ಕಾರಿನ ನಂಬರ್ ಪ್ಲೇಟ್‌ಗಳ ಗುರುತು ಪತ್ತೆ ಹಚ್ಚಲೂ ಸಾಧ್ಯವಿಲ್ಲದಂತೆ ತಂಡ ಸಿದ್ಧತೆ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ.!
ಅದೇನೇ ಇರಲಿ ಬಾರಿ ಅನಾಹುತ ಒಂದು ತಪ್ಪಿದಂತಾಗಿದೆ.
ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್‌ನಿಂದಾಗಿ ಸಂಭಾವ್ಯ ಅನಾಹುತವೊಂದು ತಪ್ಪಿದೆ. ಈವರೆಗೆ 30ಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನು ಲೈವ್ ಮಾನಿಟರಿಂಗ್ ಮೂಲಕ ತಡೆದ ಈ ಸಂಸ್ಥೆ ಇತ್ತೀಚೆಗೆ ಕಮಲಶಿಲೆ ದೇವಸ್ಥಾನದ ಗೋ ಶಾಲೆಯಲ್ಲಿ ಗೋಕಳ್ಳತನ ಹಾಗೂ ಮುಳ್ಳಿಕಟ್ಟೆಯಲ್ಲಿ ಸಹಕಾರಿ ಸಂಸ್ಥೆಯ ಕಳ್ಳತನ ಯತ್ನವನ್ನು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ವಿಫಲಗೊಳಿಸಿತ್ತು. ಎರಡೂ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈಗ ಪೊಲೀಸ್ ಇಲಾಖೆಗೆ ಈ ಒಂದು ಪ್ರಕರಣ ಚಾಲೆಂಜ್ ಆಗಿದೆ. ಉದ್ಯಮಿಯ ಮನೆಗೆ ಬಂದವರು
ಯಾರಿರಬಹುದು?ಬಂದದ್ದಾದರು ಏಕೆ?
ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕು ಗೋಳಿಸಿದ್ದಾರೆ.ಪೋಲಿಸ್ ಹಿರಿಯ ಅಧಿಕಾರಿಗಳು ಊ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಬೇರೆ ಬೇರೆ ಮಾರ್ಗವಾಗಿ ಹೋಗಿ ತನಿಖೆ ಮುಂದಾಗಿದ್ದಾರೆ. ದರೋಡೆ ಮಾಡುವ ಉದ್ದೇಶ ಇತ್ತೇ ಎನ್ನುವುದು ಸದ್ಯದ ಅನುಮಾನ. ಐಟಿ, ಇಡಿ ಮೊದಲಾದ ಸರಕಾರಿ ಇಲಾಖೆ ಅಧಿಕಾರಿಗಳೇ ಆಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆಸುತ್ತಿದ್ದರು ಅಥವಾ ಬಾಗಿಲು ತೆರೆಯಲು ಬೇಕಾದ ಸೂಕ್ತ ಕಾನೂನು ವ್ಯವಸ್ಥೆ ಮಾಡುತ್ತಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವ ಕಾರಣ ಆಗಮಿಸಿದ್ದು ಸರಕಾರಿ ಇಲಾಖೆ ತನಿಖಾಧಿಕಾರಿಗಳಲ್ಲ ಎನ್ನುವುದು ಬಹುತೇಕ ಖಚಿತ. ಹಾಗಾದರೆ ಬಂದಂತ ಆಗುಂತಕರು ಯಾರು? ಬಂದದ್ದಾದರು ಏಕೆ? ಎಂಬ ಸಾಲು ಸಾಲು ಪ್ರಶ್ನೆಗಳು ವಿಷಯ ತಿಳಿದ ಪ್ರತಿಯೊಬ್ಬರನ್ನು ಕಾಡುತ್ತಿದೆ