ಪರಿಷ್ಕಂತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

ಪರಿಷ್ಕಂತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

ಅಶ್ವಸೂರ್ಯ/ಶಿವಮೊಗ್ಗ: ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ ಸಾಲಿಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿ ಕೊಳಗಳ ನಿರ್ಮಾಣ ಒಟ್ಟು 12.00 ಹೆಕ್ಟೇರ್‍ಗಳು. ಇದರಲ್ಲಿ ಸಾಮಾನ್ಯ 02, ಮಹಿಳೆ 05, ಪರಿಶಿಷ್ಟ ಜಾತಿ 05 ಮತ್ತು ಪರಿಶಿಷ್ಟ ಪಂಗಡ 01 ಹೆಕ್ಷೇರ್ ಪ್ರದೇಶಕ್ಕೆ ಸೌಲಭ್ಯ ನೀಡುವ ಗುರಿ ನೀಡಲಾಗಿದೆ.

ಮೀನು ಕೃಷಿಕೊಳಗಳ ನಿರ್ಮಾಣ ಮಾಡಿಕೊಂಡು ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆ ವೆಚ್ಚದ ಮೇಲೆ ಸಹಾಯ 10 ಹೆಕ್ಟೇರ್‍ಗೆ ನೀಡಲಾಗುವುದು. ಇದರಲ್ಲಿ ಸಾಮಾನ್ಯ 05, ಮಹಿಳೆ 03, ಪರಿಶಿಷ್ಟ ಜಾತಿ 01 ಮತ್ತು ಪರಿಶಿಷ್ಡ ಪಂಗಡ 01 ಹೆಕ್ಷೇರ್. ಮೀನು ಕೃಷಿಗಾಗಿ ಬಯೋಪ್ಲಾಕ್ ಘಟಕ ನಿರ್ಮಾಣಕ್ಕೆ ಸಹಾಯ ಹೂಡಿಕೆ ವೆಚ್ಚ ಸೇರಿಸಿದಂತೆ ಪ್ರತಿ ಘಟಕ ವೆಚ್ಚ ರೂ.4.00 ಲಕ್ಷ ನೀಡಲಾಗುವುದು. ಸಾಮಾನ್ಯ 01 ಗುರಿ ನೀಡಲಾಗಿದೆ.

ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಸಾಂಪ್ರದಾಯಿಕ ಮೀನುಗಾರಿಕೆಗೆ ಎಫ್‍ಆರ್‍ಪಿ ದೋಣಿ ನಿರ್ಮಾಣಕ್ಕಾಗಿ ಸಹಾಯ ಘಟಕಕ-02 ಸಾಮಾನ್ಯ 01, ಮಹಿಳೆ 01. ಮೀನು ಮರಿ ಪಾಲನಾ ಘಟಕ ನಿರ್ಮಾಣದ ಸಹಾಯ ಒಟ್ಟು 6.50 ಹೆಕ್ಟೇರ್ ಗುರಿ ಇದ್ದು ಸಾಮಾನ್ಯ 03, ಮಹಿಳೆ 02, ಮತ್ತು ಪರಿಶಿಷ್ಡ ಪಂಗಡ 1.70 ಹೆಕ್ಷೇರ್, ಮೋಟಾರ್ ಸೈಕಲ್ ವಿತ್ ಐಸ್ ಬಾಕ್ಸ್ ಪರಿಶಿಷ್ಟ ಪಂಗಡ 02 ಗುರಿ ಹಾಗೂ ಹೊಸದಾದ ಮೀನುಮಾರಾಟ ಕಿಯೋಸ್ಕ್ ನಿರ್ಮಾಣಕ್ಕಾಗಿ ಅಲಂಕಾರಿಕ ಮೀನು ಮಾರಾಟ ಮಳಿಗೆ ಪರಿಶಿಷ್ಟ ಜಾತಿ 01 ಗುರಿ ನೀಡಲಾಗಿದೆ.

ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 9 ರೊಳಗಾಗಿ ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!