ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಶಿವಮೊಗ್ಗ ಜಿಲ್ಲಾ ಅರಣ್ಯ ಭೂಮಿ ಒತ್ತುವರಿ, ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಚರ್ಚಿಸಿದ ಸಚಿವ ಮಧು ಬಂಗಾರಪ್ಪ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಶಿವಮೊಗ್ಗ ಜಿಲ್ಲಾ ಅರಣ್ಯ ಭೂಮಿ ಒತ್ತುವರಿ, ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ರೈತರ ಅನೇಕ ಸಮಸ್ಯೆಗಳ ಕುರಿತು” ಚರ್ಚಿಸಿದ ಸಚಿವ ಮಧು ಬಂಗಾರಪ್ಪ

ಅಶ್ವಸೂರ್ಯ/ಶಿವಮೊಗ್ಗ: ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಮಧು ಬಂಗಾರಪ್ಪ ಅವರ ವಿಧಾನಸೌಧದ ಕಚೇರಿಯಲ್ಲಿ ಅರಣ್ಯ ಇಲಾಖೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲ್ಲೂಕುಗಳ “ಅರಣ್ಯ ಭೂಮಿ ಒತ್ತುವರಿ, ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ರೈತರ ಅನೇಕ ಸಮಸ್ಯೆಗಳ ಕುರಿತು” ಸಮಗ್ರವಾಗಿ ಚರ್ಚಿಸಿದರು…

ಪ್ರತಿನಿಧಿಗಳನ್ನು ಉದ್ದೇಶಿಸಿ ಮಾನ್ಯ ಅರಣ್ಯ ಸಚಿವರು ಮಾತನಾಡುತ್ತ ಕಳೆದ ಐದು ದಶಕಗಳ ಸಮಸ್ಯೆ ಇದಾಗಿದ್ದು ಚುನಾವಣಾ ಪೂರ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ನೀಡಿದ ಆಶ್ವಾಸನೆಯಂತೆ ಶರಾವತಿ ಹಾಗೂ ಬಗರ್ ಹುಕುಂ ರೈತರ ಸಮಸ್ಯೆಗಳ ನಿವಾರಣೆ ನಮ್ಮ ಕರ್ತವ್ಯವಾಗಿದ್ದು ಈಗಾಗಲೇ ಯಾರನ್ನು ತೆರವುಗೊಳಿಸಿದಂತೆ ಜಿಲ್ಲೆಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲ ಸಭೆಯಲ್ಲಿ ಸೂಚಿಸಿದ್ದು ಸುಪ್ರೀಂ ಕೋರ್ಟಿನಲ್ಲಿ ಐ.ಎ ಸಲ್ಲಿಸಲಾಗಿದೆ 15 ದಿನಗಳಲ್ಲಿ ಜಿಲ್ಲೆಯ ಬಗರ್ ಹುಕುಂ ಹಾಗೂ ಶರಾವತಿ ರೈತ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು..

ಈ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಪರವಾಗಿ ಮಾನ್ಯ ಮಧು ಬಂಗಾರಪ್ಪನವರು ಧನ್ಯವಾದಗಳು ಸಲ್ಲಿಸಿ ಜಿಲ್ಲೆಯ ರೈತ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕಾನೂನು ತಿದ್ದುಪಡಿ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ ಕುಮಾರ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಹೋರಾಟ ಸಮಿತಿಯ ಮುಖಂಡರುಗಳಾದ ಬಿಎ ರಮೇಶ್ ಹೆಗಡೆ ಜಿ ಡಿ ಮಂಜುನಾಥ್ ನಗರದ ಮಹದೇವಪ್ಪ ಎಂ ಪಿ ಧರ್ಮರಾಜ್ ಗಣಪತಿ ಹುಲ್ತಿಕೊಪ್ಪ ಶ್ರೀನಿವಾಸ್ ಸಿಗಂದೂರ್ ರವಿ, ಕೆರೆಹಳ್ಳಿ ರಾಮಪ್ಪ ಶ್ರೀನಿವಾಸ್ ಕರಿಯಣ್ಣ ಸಂತೆಕಡೂರ್ ವಿಜಯಕುಮಾರ್ ಶಾಂತವೀರನಾಯಕ್ ರಾಘವೇಂದ್ರ ರಾಜಪ್ಪ ಕಟ್ಟಿಗೆಹಳ್ಳಿ ರಘುಪತಿ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಜನ ಪ್ರತಿನಿಧಿಗಳು, ಮುಖಂಡರು ಹಾಗೂ ಅರಣ್ಯ ಹಕ್ಕು ಹೋರಾಟಗಾರರು ಉಪಸ್ತಿತರಿದ್ದರು…

Leave a Reply

Your email address will not be published. Required fields are marked *

Optimized by Optimole
error: Content is protected !!