ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ
ಮಂಗಳೂರು: ಕಾಂಗ್ರೆಸ್ಸಿನ ಯಾರೇ ಸಚಿವರು ಯಾವುದೇ ಜಿಲ್ಲೆಗೆ ಭೇಟಿ ನೀಡಿದಾಗ ಪಕ್ಷದ ಕಚೇರಿಗೆ ಕಡ್ಡಾಯವಾಗಿ ಹೋಗಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದ್ದು ಇದು ಒಳ್ಳೆಯ ಸಂಪ್ರದಾಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಅಧಿಕಾರದಲ್ಲಿ ಇದ್ದಾಗ. ಇಲ್ಲದೇ ಇದ್ದಾಗ ಪಕ್ಷದ ಕಚೇರಿಗೆ ಭೇಟಿ ನೀಡಿ ನಾವು ಎಲ್ಲಿಂದ ಬಂದಿದ್ದೇವೆ ಎನ್ನುವ ಎಚ್ಚರಿಕೆ ನಮಗೆ ಇರಬೇಕು.
ಇದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು
ಈ ಬಾರಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದು ವಿಧಾನ ಸಭೆಯಲ್ಲಿ ನಾವು ಪ್ರಾಬಲ್ಯವನ್ನು ಮೆರೆದಿದ್ದೇವೆ.
ಜನ ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಾವು ಕೆಲಸ ಮಾಡಬೇಕಾಗಿದ್ದು ಅದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸಚಿವರು ಶಾಸಕರ ಜವಬ್ದಾರಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿದೆ ಕಾರಣ ಅಧಿಕಾರಕ್ಕೆ ಬರುವ ಮೊದಲೇ ಯಾರು ಸಿದ್ಧತೆ ಮಾಡಿಕೊಂಡಿರಲು ಸಾಧ್ಯವಿಲ್ಲ.
ಬಿಜೆಪಿಯವರು ಇದುವರೆಗೆ ಭಾವನಾತ್ಮಕವಾದ ವಿಚಾರಗಳಲ್ಲಿ ಇದ್ದವರು ಅಧಿಕಾರ ಇಲ್ಲದೇ ಅದೇಕೊ ಮಾನಸಿಕವಾಗಿ ವರ್ತಿಸುತ್ತಿದ್ದಾರೆ ಎಂದರು..!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲಾ ಎನ್ನುವ ನೋವು ನಿಮಗೆ ಬೇಡ, ನಾವು ಸದಾಕಾಲವೂ ನಿಮ್ಮ ಜೊತೆಗೆ ಇರುತ್ತವೆ.
ಮುಂಬರುವ ಚುನಾವಣೆಗಳಲ್ಲಿ ಕರಾವಳಿಯಲ್ಲಿ ನಾವು ಗೆದ್ದು ಬರಲಿದ್ದೇವೆ. ಬಿಜೆಪಿಯವರ ನಡವಳಿಕೆ ನೋಡಿ ಜನ ಬೇಸತ್ತಿದ್ದಾರೆ.
ನನಗೆ ಕೊಟ್ಟ ಇಲಾಖೆಯಲ್ಲಿ ನಾನು ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಪುಟ್ಟಮಕ್ಕಳಿಗೆ ಮೊಟ್ಟೆ, ಶಾಲೆಗಳ ದುರಸ್ತಿ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳನ್ನು ನಾನು ಮಾಡಲು ಮುಂದಾಗಿದ್ದೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಜೆ ಆರ್ ಲೋಬೋ ಉಪಸ್ಥಿತರಿದ್ದು, ನಗರದ ಬಲ್ಮಠ ಶಾಲೆಯಲ್ಲಿ ಎದುರಾಗಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಎಂಎಲ್‌ಸಿ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಎಂಎಲ್‌ಸಿ ಐವನ್ ಡಿ ಸೋಜಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಲಾರೆನ್ಸ್ ಡಿ ಸೋಜಾ, ಮನುರಾಜ್, ವಿಶ್ವಾಸ್ ಕುಮಾರ್ ದಾಸ್ ಮೊದಲಾದವರಿದ್ದರು.
ಸುಧೀರ್ ವಿಧಾತ, ಶಿವಮೊಗ್ಗ