ಲಂಚ ಕೈಯೊಡ್ಡಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಲೋಕಾಯುಕ್ತರ ಖೆಡ್ಡಕ್ಕೆ..!

ಲೋಕಾಯುಕ್ತರ ಭಲೇಗೆ ಬಿದ್ದ ಅರುಣ್ ಕುಮಾರ್

ಶಿವಮೊಗ್ಗ: ಖಾತೆ ಬದಲಾವಣೆ ಮಾಡಿಕೊಡಲು ವ್ಯಕ್ತಿ ಯೊಬ್ಬರಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿ ಲಂಚ ಹಣ ಪಡೆಯುವ ವೇಳೆಗೆ ಕಂದಾಯ ಇಲಾಖೆ ಹಕ್ಕು ದಾಖಲೆ ಶಾಖೆಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿರುವ ಈತ ಮೊದಲಿಂದಲೂ ಕೈ ಬಾಯಿ ಶುಧ್ಧ ಇರುವ ಮನುಷ್ಯನಲ್ಲ ಯಾವುದೇ ಕೆಲಸಕ್ಕೂ ಕೈ ಒಡ್ಡುವ ಗಿರಾಕಿಯಂತೆ..! ಈತನ ಹೆಸರು ಅರುಣ್ ಕುಮಾರ್ ಇವತ್ತು ಇವನ ಪಾಪದ ಕೊಡ ತುಂಬಿತ್ತು ಅನ್ಸೋತ್ತೆ ಲೋಕಾಯುಕ್ತರಿಗೆ ಸಾಕ್ಷಿ ಸಹಿತ ಸಿಕ್ಕಿ ಬಿದ್ದಿದ್ದಾನೆ. ಈತ
ಖಾತೆ ಬದಲಾವಣೆಗೆ ಮಾಡಿಕೊಡಲು ಮೂರು ಲಕ್ಷ ರೂ. ಡಿಮಾಂಡ್ ಮಾಡಿದ್ದನಂತೆ..! ಒಂದೂವರೆ ಲಕ್ಷ ರೂ. ಪಡೆಯುವ ವೇಳೆ ಹಣದ ಸಮೇತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಶಿಲ್ಪಾ, ರಾಮಕೃಷ್ಣ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!