ಕರಾವಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದ ಬಾಲಿವುಡ್ ನಟಿ ಕತ್ರಿನಾ ಕೈಫ್ : ಮುಸ್ಲಿಂ ಹುಡುಗಿಗೆ ಕೊರಗಜ್ಜನ ಮೇಲೆ ಭಕ್ತಿ.!
ಅಶ್ವಸೂರ್ಯ/ಶಿವಮೊಗ್ಗ: ಕರಾವಳಿಯ ಕೊರಗಜ್ಜನ ಶಕ್ತಿ ದೇಶ ವಿದೇಶಗಳನ್ನು ತಲುಪಿದೆ. ಕೊರಗಜ್ಜನ ಬಗ್ಗೆ ಅನೇಕರು ಕೇಳಿರಬಹುದು. ಅನೇಕರು ತಮ್ಮ ಕಷ್ಟಕಾರ್ಪಣ್ಯವನ್ನು ತೊಲಗಿಸಲು, ಸಮಸ್ಯೆಯಿಂದ ಹೊರಬರಲು ಕೊರಗಜ್ಜನ ಮೊರೆ ಹೋಗಿರುತ್ತಾರೆ. ಅನೇಕ ಸಿನಿಮಾ ತಾರೆಯರು, ಕ್ರಿಕೆಟಿಗರು ಮತ್ತು ರಾಜಕಾರಣಿಗಳ ಜೊತೆಗೆ ಉದ್ಯಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಇದೀಗ ಈ ಪವಿತ್ರ ಸ್ಥಳಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಭೇಟಿ ಕೊಟ್ಟು ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಂದು ಕತ್ರಿನಾ ಕೈಫ್ ಅವರ ಜನ್ಮದಿನ ಕೂಡ ಹೌದು.ಇದಕ್ಕೂ ಮುನ್ನ ಮಂಗಳೂರಿನ ಕುತ್ತಾರ್ ನಲ್ಲಿರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಕನ್ನಡದ ರಕ್ಷಿತ, ಮಾಲಾಶ್ರೀ, ಶಿವರಾಜ್ ಕುಮಾರ್, ನಟ ದರ್ಶನ್ ಮೊದಲಾದವರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು. ಇದೀಗ ಕೊರಗಜ್ಜನ ಶಕ್ತಿ ಸ್ಯಾಙಡಲ್ ವುಡ್ ನಿಂದ ಬಾಲಿವುಡ್ ಗೂ ತಲುಪಿದೆ ಎನ್ನಬಹುದು. ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ.
ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ತಂಡದ ಬಲಗೈ ಬ್ಯಾಟರ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಇಲ್ಲಿನ ಐತಿಹಾಸಿಕ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದರು. ಪತ್ನಿ ಅಥಿಯಾ ಶೆಟ್ಟಿ ಅವರ ಜತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.
ಬಪ್ಪನಾಡು ಕ್ಷೇತ್ರವು ಮಂಗಳೂರು ನಗರದ ಹೊರವಲಯದ ಮುಲ್ಕಿ ಸಮೀಪ ಇದೆ. ದೇಗುಲಕ್ಕೆ ಭೇಟಿ ನೀಡಿದ ದಂಪತಿಗೆ ದೇವಾಲಯದ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.
ಇನ್ನೂ ಭಾರತ ತಂಡದ ಬಿರುಸಿನ ಆಟಗಾರ ಸೂರ್ಯ ಕುಮಾರ್ ಯಾದವ್ ಕೂಡ ತಮ್ಮ ಮಡದಿಯೊಂದಿಗೆ ಕರಾವಳಿ ಮಂಗಳೂರಿಗೆ ಆಗಮಿಸಿ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಇನ್ನೂ ಧರ್ಮದಲ್ಲಿ ಮುಸ್ಲಿಂ ಆಗಿರುವ ಕತ್ರಿನಾ ಕೈಫ್ ಹಿಂದೂ ಧರ್ಮದ ವಿಕ್ಕಿ ಕೌಶಲ್ ಅವರನ್ನು ವರಿಸಿದ್ದಾರೆ. ಈ ಕಾರಣಕ್ಕೆ ಅವರು ಹಿಂದೂ ಹಾಗೂ ಮುಸ್ಲಿಂ ಧರ್ಮ ಎರಡನ್ನೂ ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಇದೆ.