ಮೂರು ಗ್ರಾಂ ಬಂಗಾರದ ಆಸೆಗೆ ಬಿದ್ದವರು ಕಳ್ಳತನಮಾಡಿ ಪೊಲೀಸರ ಅತಿಥಿ ಯಾಗಿದ್ದಾರೆ.!

ಮೂರು ಗ್ರಾಂ ಬಂಗಾರದ ಆಸೆಗೆ ಬಿದ್ದವರು ಕಳ್ಳತನಮಾಡಿ ಪೊಲೀಸರ ಅತಿಥಿ ಯಾಗಿದ್ದಾರೆ.!

  ಅಶ್ವಸೂರ್ಯ/ಶಿವಮೊಗ್ಗ: ಕಳೆದ ಮೇ 25 ರಂದು ಅಕ್ಷಯ ತೃತೀಯ ದಿನದಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆಯಲ್ಲಿರುವ ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂಗಾರ ಖರೀದಿ ಮಾಡಲು ಬಂದು ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ ಮತ್ತೆ ಬೇರೆ ಲಾಕೆಟ್ ಟ್ರೇ ತೋರಿಸುವಂತೆ
 ಹೇಳಿ ಕೈಯಲ್ಲಿದ್ದ ಸುಮಾರು 3 ಗ್ರಾಂ 470 ಮೀಲಿ ತೂಕದ 27,000/-ರೂ ಬೆಲೆಬಾಳುವ 3 ಲಾಕೆಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ ಸರೋಜ ಕೆ, 49 ವರ್ಷ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಮತ್ತು ಕು|| ತನ್ವಿ ಎಸ್.ಎಂ, 22 ವರ್ಷ, ರಾಯಲ್ ಆರ್ಕೇಡ್ ಹಿಂಭಾಗ, ಜಿ.ಎಸ್.ಕೆ.ಎಂ ರಸ್ತೆ, ಪಂಚವಟಿ ಕಾಲೋನಿ, ಶಿವಮೊಗ್ಗ ಇವರನ್ನು ಬಂಧಿಸಿ ಆರೋಪಿತರಿಂದ ಅಂದಾಜು ಮೌಲ್ಯ 27,000/- ರೂಗಳ 3 ಗ್ರಾಂ 470 ಮಿಲಿ ತೂಕದ 3 ಬಂಗಾರದ ಲಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!