ದೊಡ್ಡಪೇಟೆ ಪೋಲಿಸರ ಭರ್ಜರಿ ಬೇಟೆ ಭದ್ರಾವತಿ ಮೂಲದ ಐವರು ಖತರ್ನಾಕ್ ಕಳ್ಳಿಯರ ಬಂಧನ.!ಏಳು ಪ್ರಕರಣಗಳು ಬಯಲು.!

ದೊಡ್ಡಪೇಟೆ ಪೋಲಿಸರ ಭರ್ಜರಿ ಬೇಟೆ ಭದ್ರಾವತಿ ಮೂಲದ ಐವರು ಖತರ್ನಾಕ್ ಕಳ್ಳಿಯರ ಬಂಧನ.!ಏಳು ಪ್ರಕರಣಗಳು ಬಯಲು.!

ಅಶ್ವಸೂರ್ಯ/ಶಿವಮೊಗ್ಗ: ಜೂನ್ 29 ರಂದು ಶಿವಮೊಗ್ಗ ನಗರದ ಜೆ. ಸಿ. ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಭಂದಿಕರ ಮದುವೆಗೆ ದಾವಣಗೆರೆ ಹೋಗಲು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಲ್ಲಿ ಬಸ್ ಹತ್ತಿ ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿದೆ ತಕ್ಷಣವೇ ಸ್ಥಳೀಯ ದೊಡ್ಡಪೇಟೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ಠಾಣೆ ಗುನ್ನೆ ಸಂಖ್ಯೆ 0164/2024 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆಗೆ ಇಳಿದಿರುತ್ತಾರೆ.

ಭರ್ಜರಿ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರ ತಂಡ

ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅವರ ನೇತೃತ್ವದಲ್ಲಿ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಠಾಣೆಯ ರವಿ ಪಾಟೀಲ್, ಪಿ.ಐ. ಅವರ ನೇತೃತ್ವದಲ್ಲಿ ಕಾರ್ಯಚರಣೆಗೆ ಇಳಿದ ಶ್ರೀ ನಾಗರಾಜ್ ಎಎಸ್ಐ, ಹೆಚ್ ಸಿ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವು
ಪ್ರಕರಣದ ಆರೋಪಿತರಾದ ಶಾಂತಿ @ ಕರ್ಕಿ, 31 ವರ್ಷ, ಹನುಮಂತನಗರ, ಹೊಸಮನೆ ಭದ್ರಾವತಿ, ಮೀನಾಕ್ಷಿ, 38 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ, ಸಾವಿತ್ರಿ @ ಬಾಬಾ, 29 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ, ದುರ್ಗಾ @ ಸಣ್ಣದುರ್ಗಾ, 29 ವರ್ಷ, ಭೋವಿ ಕಾಲೋನಿ, ಭದ್ರಾವತಿ, ಸುಶೀಲಮ್ಮ, 66 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ ಇವರನ್ನು ದಸ್ತಗಿರಿ ಮಾಡಿ ಸದರಿಯವರಿಂದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ ಒಟ್ಟು 07 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 8,13,000/- ರೂ ಗಳ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!