ಖದೀಮನನ್ನು ಖೆಡ್ಡಕ್ಕೆ ಕೆಡವಿಕೊಂಡ ದೊಡ್ಡಪೇಟೆ ಪೋಲಿಸರು. ಕಳುವಾದ ಹಣದ ಸಮೇತ ಆರೋಪಿ ಬಂಧನ

ಖದೀಮನನ್ನು ಖೆಡ್ಡಕ್ಕೆ ಕೆಡವಿಕೊಂಡ ದೊಡ್ಡಪೇಟೆ ಪೋಲಿಸರು. ಕಳುವಾದ ಹಣದ ಸಮೇತ ಆರೋಪಿ ಬಂಧನ

      ಅಶ್ವಸೂರ್ಯ/ಶಿವಮೊಗ್ಗ: ಕಳೆದ ಮೇ 09,ರಂದು ಕೋಣಂದೂರಿನ ತಿಮ್ಮಪ್ಪ ಎನ್ನುವವರು ತಮ್ಮ ಅಂಗಡಿಗೆ ವಸ್ತುಗಳನ್ನು ಖರೀದಿಸಲು ಗೂಡ್ಸ್ ವಾಹನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು.ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸವರ್ ಲೈನ್ ರಸ್ತೆಯಲ್ಲಿರುವ ವಿ ಆರ್ ಎಲ್ ಟ್ರಾನ್ಸ್‌ಪೋರ್ಟ್‌ ಕಛೇರಿಯ ಮುಂದೆ ಗೂಡ್ಸ್ ವಾಹನ  ನಿಲ್ಲಿಸಿ ಪಾರ್ಸೆಲ್ ತರಲು ಹೋದಾಗ ತಿಮ್ಮಪ್ಪನವರ  ಪರಿಚಯಸ್ಥನಾದ ನರಸಿಂಹಮೂರ್ತಿ ಎಂಬತಾ ಗೂಡ್ಸ್ ವಾಹನದ ಡ್ಯಾಷ್ ಬೋರ್ಡ್ ನಲ್ಲಿ ಇಟ್ಟಿದ್ದ 1,50,000/-ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ  ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತು.

ಪ್ರಕರಣದಲ್ಲಿ ಕಳುವಾದ ನಗದು ಹಣ ಮತ್ತು ಆರೋಪಿಯ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಅವರ ನೆತ್ರುತ್ವದಲ್ಲಿ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಇವರುಗಳ ಮಾರ್ಗದರ್ಶನದಲ್ಲಿ ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಪೊಲೀಸ್ ಅಧೀಕ್ಷಕರು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್

ಸದರಿ ಪೊಲೀಸರ ತಂಡವು ಪ್ರಕರಣದ ಆರೋಪಿಯ ಪತ್ತೆಗಾಗಿ ಭಲೇ ಬಿಸಿದ್ದರು. ಆರೋಪಿ ನರಸಿಂಹಮೂರ್ತಿ, 34 ವರ್ಷ, ಹೊಸಮನೆ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ರೂ 1,30,000/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮೆಚ್ಚಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!