ಕುಂದಾಪುರ: ರಾತ್ರಿ ಮನೆಯಲ್ಲಿ ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಮನೆಯ ಬಾಗಿಲು ತೆರೆದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಹೋಗಿ ಕೊರಗಜ್ಜನ ನಾಮಫಲಕದ ಮುಂದೆ ನಿಂತಿದ್ದಾಳೆ. ಈ ಘಟನೆ ಯೊಂದು ಬುಧವಾರ ತಡರಾತ್ರಿ
ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪದ ದಬ್ಬೆಕಟ್ಟೆ ಮತ್ತು ತೆಕ್ಕಟ್ಟೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆಯ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ನಿಂತಿರುವುದು ಕಂಡಿದೆ. ಒಂದು ಕ್ಷಣಕ್ಕೆ ಅವರಿಗೆ ಗಾಬರಿಯಾದರು ತಕ್ಷಣಕ್ಕೆ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಆಕೆಯ ಹತ್ತಿರ ಹೋಗಿ ಮಾತನಾಡಿಸಿ ಎಲ್ಲವನ್ನೂ ವಿಚಾರಿದಿದ ನಂತರ ವಿಶ್ವನಾಥ್ ಅವರ ಸಹಾಯದಿಂದ ಸುರಕ್ಷಿತವಾಗಿ ಮನೆಗೆ ತಲುಪಿದ್ದಾಳೆ ಬಾಲೆ…!ಬಾಲಕಿಯನ್ನು ಸುರಕ್ಷಿತವಾಗಿ ಮನೆ ಸೇರಿಸಿ ಮಾನವೀಯತೆಯನ್ನು ಮೆರೆದ ಬಾರ್ ಸಿಬ್ಬಂದಿ ವಿಶ್ವನಾಥ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆಯ ವಿವರ
ಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮದ ಚಾರು ಕೊಟ್ಟಿಗೆ ಅರ್ಚನಾ ಬಾರ್ ನ ಸಿಬ್ಬಂದಿಯಾದ ವಿಶ್ವನಾಥ್ ಪೂಜಾರಿ
ಬುಧವಾರ ರಾತ್ರಿ ಸರಿ ಸುಮಾರು 2:30ರ ಹೊತ್ತಿಗೆ ಎಂದಿನಂತೆ ಬಾರಿನ ಎಲ್ಲಾ ಕೆಲಸ ಲೆಕ್ಕಾಚಾರವನ್ನು ಮುಗಿಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗಳು ಕೆದೂರಿನ ಸ್ವಾಮಿ ಕೊರಗಜ್ಜನ ದೈವಸ್ಥಾನದ ನಾಮಫಲಕದ ಕೆಳಗೆ ನಿಂತಿದ್ದನ್ನು ಕಂಡಿದ್ದಾರೆ. ಒಂದು ಕ್ಷಣಕ್ಕೆ ಒಂಟಿ ಬಾಲೆಯನ್ನು ಕಂಡು ಗಾಬರಿಯ ಜೋತೆಗೆ ಅತಂಕಗೊಂಡ ವಿಶ್ವನಾಥ್ ಈ ತಡರಾತ್ರಿಯಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ..? ಎಂದು ಸಾಕಷ್ಟು ಆಲೋಚಿಸಿ ತಕ್ಷಣವೇ ಪ್ರತಿಯೊಂದು ಚಿತ್ರಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡು ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಮಗುವಿನ ಹತ್ತಿರ ಎಲ್ಲವನ್ನೂ ವಿಚಾರಿಸಿದ ನಂತರ ಮಗು ಹೇಳಿದ ವಿಳಾಸಕ್ಕೆ ಕರೆದುಕೊಂಡು ಹೋಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.ಇತ್ತ ಮನೆಯ ಬಾಲೆ ತಡರಾತ್ರಿ ನಿದ್ದೆ ಕಣ್ಣಿನಲ್ಲಿ ನೆಡೆದು ಹೋಗಿ ಕೇಲವು ಗಂಟೆ ಕಳೆದಿದ್ದರು ಹೆತ್ತ ಅಮ್ಮನಿಗಾಗಲಿ ಮನೆಯವರಿಗಾಗಲಿ ವಿಷಯವೇ ತಿಳಿಯದೆ ತಡರಾತ್ರಿ ಮಗುವನ್ನು ವಿಶ್ವನಾಥ್ ಅವರು ಮನೆಗೆ ಕರೆದುಕೊಂಡು ಬಂದಾಗ ಮನೆಯವರಿಗೆ ಆಶ್ಚರ್ಯ ಜೋತೆಗೆ ಮನೆಯಲ್ಲಿ ಮಲಗಿದ್ದ ಮಗು ಇವರ ಜೊತೆಯಲ್ಲಿ ಹೇಗೆ ಎಂದು ಗಾಬರಿ ಯಾಗಿದ್ದಾರೆ. ಎಲ್ಲಾ ವಿಷಯವನ್ನು ವಿಶ್ವನಾಥ್ ಮಗುವಿನ ಮನೆಯವರಿಗೆ ತಿಳಿಸಿದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ
ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ಯಾವುದೇ ತೊಂದರೆ ಆಗದ ರೀತಿಯಲ್ಲಿ ತಡೆದು ನಿಲ್ಲಿಸಿದ ಕೊರಗಜ್ಜನ ಪವಾಡ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದರೆ. ಅವರ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎನ್ನುವುದು ಅಲ್ಲಿಯ ಭಕ್ತರ ನಂಬಿಕೆಯಾಗಿದೆ.
ಅದೇನೆ ಇರಲಿ ಆರು ವರ್ಷದ ಬಾಲೆಯೊಬ್ಬಳು ತಡರಾತ್ರಿಯಲ್ಲಿ ನಿದ್ದೆ ಕಣ್ಣಿನಲ್ಲಿ ಸರಿ ಸುಮಾರು ಮೂರು ಕಿಲೊಮೀಟರ್ ನೆಡದು ಯಾವುದೇ ತೊಂದರೆ ಯಾಗದೆ ಮರಳಿ ಅಮ್ಮನ ಮಡಿಲು ಸೇರಿದ್ದಾಳೆ ಎನ್ನುವುದೇ ಸಮಾಧಾನದ ವಿಷಯ…
ಮತ್ತೆ ಮಗುವನ್ನು ರಕ್ಷಿಸಿ ತನ್ನ ಕಾರ್ಣಿಕ ತೋರಿಸಿದ ಕೊರಗಜ್ಜ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಮನೆಯಲ್ಲಿ ಹೆತ್ತವರ ಮಡಿಲಲ್ಲಿ ಮಲಗಿದ್ದ ಮಗು ನಿದ್ದೆ ಕಣ್ಣಿನಲ್ಲಿ ಎದ್ದು ಹೋದರು ಮನೆಯವರ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುಧೀರ್ ವಿಧಾತ, ಶಿವಮೊಗ್ಗದ
Voice of common man in words