ಭದ್ರಾವತಿ ಮೊನ್ನೆ ತಡರಾತ್ರಿ ಕೊಲೆಯಾದವನು ನಟೋರಿಯಸ್ ರೌಡಿ ಮುಜ್ಜು ಅಲಿಯಾಸ್ ಮುಜಾಹೀದ್ ಇತನ ಮೇಲೆ ದಾಳಿ ಮಾಡಿರುವ ಹಂತಕರು ಯಾರು..!? ಅ ರಾತ್ರಿಯಲ್ಲಿ ತನ್ನ ಎರಡನೆಯ ಮಡದಿಯ ನೆನಪಾಗಿ ಆಕೆಯ ಮನೆ ಹಾದಿ ಹಿಡಿದಿದ್ದ ಮುಜ್ಜು ಇನ್ನೇನು ಆಕೆಯ ಮನೆ ಒಳ ಹೊಕ್ಕಬೇಕಿತ್ತು ಅಷ್ಷೊತ್ತಿಗಾಗಲೆ ಜವರಾಯ ಆಕೆಯ ಮನೆಯ ಹತ್ತಿರವೇ ಹೊಂಚು ಹಾಕಿ ಕುಳಿತ್ತಿದ್ದ..!! ಮುಜ್ಜು ತನ್ನ ಟು ವೀಲರ್ ಬೈಕಿನಲ್ಲಿ ಬಂದು ಇನ್ನೇನು ಅಕೆಯ ಮನೆಗೆ ಎಡತಾಗ ಬೇಕಿತ್ತು ಅಷ್ಟೋತ್ತಿಗಾಗಲೆ ಅ ಸ್ಥಳದಲ್ಲಿ ಮೊದಲೇ ಹೊಂಚುಹಾಕಿ ಕುಳಿತಿದ್ದ ಸರಿ ಸುಮಾರು ಐವರು ಹಂತಕರ ತಂಡ ಮುಜ್ಜು ಬೈಕಿನಿಂದ ಇಳಿಯುವ ಮೊದಲೇ ಲಾಂಗಿನಿಂದ ಮನಬಂದಂತೆ ಕೊಚ್ಚಿ ಕೆಡವಿದ್ದಾರೆ..! ಇತನ ಕೈ ಹಾಗೂ ಮುಖದ ಭಾಗಕ್ಕೆ ಬಲವಾಗಿ ಬಿದ್ದ ಲಾಂಗಿನೇಟಿಗೆ ಮಿಸುಕಾಡಲು ಸಾಧ್ಯವಾಗದೆ ಕತ್ತರಿಸಿ ಬಿದ್ದ ಮುಜ್ಜು ಬಿದ್ದ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಕೊನೆ ಉಸಿರು ಏಳೆದಿದ್ದಾನೆ..!
ಮೊದಲೇ ಮಾಡಿದ ಪಾಪ ಹೆಗಲಮೇಲೆ ಹೊತ್ತು ತಿರುಗಿತ್ತಿದ್ದ ಇತನಿಗೆ ಹಠಾತ್ ಸಾವಿನ ಅರಿವಿರಲಿಲ್ಲ..! 2019 ಏಪ್ರಿಲ್ ತಿಂಗಳ 8ನೇ ತಾರೀಖಿನಂದು ಮುಜ್ಜು ಅಮಾಯಕ ಯುವಕ ರಮೇಶನ ಹತ್ಯೆ ಗೈದು ಜೈಲುಪಾಲಾಗಿದ್ದ. ರಮೇಶ್ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲದಿದ್ದರು ಹಿನ್ನೆಲೆ ಇದ್ದವರ ಜೋತೆಗೆ ಹೆಂಡ ಕುಡಿಯಲು ಹೋಗಿ ಹೆಣವಾಗಿದ್ದ..! ನಿತ್ಯ ಪುಡಿ ಕಾಸಿಗಾಗಿ.ರಾತ್ರಿ ಪಾಳಯದ ಹೆಂಡಕ್ಕಾಗಿ ರಮೇಶ ಆಟೋ ಸುರೇಶ ಮತ್ತು ಸಂತೋಷ ಅಲಿಯಾಸ್ ಗುಂಡನ ಪಕ್ಕಾ ಶಿಷ್ಯನಾಗಿ ಹೊಗಿದ್ದ. ಈ ನಿಯತ್ತಿಗೆ ರಮೇಶ ಅಂದು ಬೊಮ್ಮನಕಟ್ಟೆಯ ವೈನ್ ಶಾಪ್ ಬಳಿ ರಾತ್ರಿ ಸುರೇಶ ಮತ್ತು ಸಂತೋಷನ ಜೋತೆಗೆ ಹೆಂಡಕುಡಿಯುತ್ತಿದ್ದ. ಅದೆ ಸಮಕ್ಕೆ ಅಲ್ಲಿಗೆ ಬಂದ ಮುಜ್ಜು ಇಸ್ಪೀಟ್ ದಂಧೆಗೆ ಕುರಿತಂತೆ ಸುರೇಶ ಮತ್ತು ಸಂತೋಷನ ಜೊತೆಗೆ ಜಗಳಕ್ಕೆ ಇಳಿದಿದ್ದ ಅ ಸಮಯದಲ್ಲಿ ಅಲ್ಲೆ ಪಕ್ಕದಲ್ಲೇ ಕುಳಿತಿದ್ದ ರಮೇಶ ನಶೆಯ ಮತ್ತಿನಲ್ಲಿ ಮುಜ್ಜು ಮೇಲೆ ಗಲಾಟೆಗೆ ನಿಂತಿದ್ದಾನೆ. ಮೊದಲೇ ಹತ್ಯೆಮಾಡಲು ಸಜ್ಜಾಗಿ ಬಂದಿದ್ದ ಮುಜ್ಜು ತನ್ನ ಬಳಿ ಇದ್ದ ಡ್ರ್ಯಾಗರ್ ನಿಂದ ರಮೇಶ್ ನ ಮೇಲೆ ಬಲವಾಗಿ ಅಟ್ಯಾಕ್ ಮಾಡಿದ್ದ ನಂತರ ಸುರೇಶ ಮತ್ತು ಸಂತೋಷನ ಮೇಲು ಮುಗಿಬಿದ್ದು ಡ್ರ್ಯಾಗರ್ ನಿಂದ ಚುಚ್ಚಿದ್ದ..! ಅಷ್ಟೋತ್ತಿಗಾಗಲೆ ಮುಜ್ಜುವಿನ ಅಟ್ಯಾಕ್ ನಿಂದ ಕುಸಿದು ಬಿದ್ದಿದ್ದ ರಮೇಶ್ ವೈನ್ ಶಾಪ್ ಅಂಗಳದಲ್ಲೆ ಹೆಣವಾಗಿ ಹೋಗಿದ್ದ…! ಸುರೇಶ ಹಾಗೂ ಸಂತೋಷನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಕಾರಣಕ್ಕೆ ಬದುಕುಳಿದಿದ್ದರು.
ಮುಜಾಹೀದ್ ನನ್ನು ಹತ್ಯೆಮಾಡಿದ ಆರೋಪಿಗಳ ತಂಡ
ರಮೇಶನ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜ್ಜು ಜೈಲಿಗೆ ಹೋಗಿ ಬಂದ್ದಿದ್ದ. ಬಂದವನು ಸುಮ್ಮನೆ ಕೂರಲಿಲ್ಲ ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಮೊದಲೇ ಕೊಲೆ ಆರೋಪಿ ಎನ್ನುವ ಬಿರುದು ಇವನಿಗೆ ಇನ್ನಷ್ಟು ಅಕ್ರಮ ಚಟುವಟಿಕೆ ಮಾಡಲು ಪುಷ್ಟಿ ನೀಡಿತು..! ಅದರಲ್ಲೂ ರಾಜಕಾರಣಿಯೊಬ್ಬನ ಮಗನ ಜೋತೆ ಕೈ ಮಿಲಾಯಿಸಿ ಇಸ್ಪೀಟ್ ಅಡ್ಡಗಳ ಅಧಿಪತಿ ಯಾಗಿದ್ದ .ಎಗ್ಗಿಲ್ಲದೆ ಮೇರೆಯುತ್ತಿದ್ದ ಮುಜ್ಜುವನ್ನೆ ಅದೆ ಅಂದರ್ ಬಾಹರ್ ಇಸ್ಪೀಟ್ ಅಡ್ಡಗಳ ಕಿಂಗ್ ಪಿನ್ ಗಳಾದ 2019 ರಲ್ಲಿ ಮುಜ್ಜುವಿನಿಂದ ಚಾಕು ಇರಿತಕ್ಕೆ ಒಳಗಾಗಿ ಬದುಕುಳಿದಿದ್ದ ಸುರೇಶ & ಸಂತೋಷನ ಐದು ಮಂದಿಯ ಗ್ಯಾಂಗ್ ಮುಜ್ಜುನನ್ನೆ ಹೊಂಚು ಹಾಕಿ ಕುಳಿತು ಮನಬಂದಂತೆ ಕೊಚ್ಚಿ ಕೊಂದಿದ್ದಾರೆ.. ಅಲ್ಲಿಗೆ ಭದ್ರಾವತಿಯ ನಟೋರಿಯಸ್ ರೌಡಿ ಶೀಟರ್ ಒಬ್ಬನ ಅಂತ್ಯವಾಗಿದೆ..!
ಇದು ಒಂದು ಮಗ್ಗುಲಲ್ಲಿ ರಿವೆಂಜಿಗೆ ಬಿದ್ದ ಹೆಣವಾದರೆ ಮತ್ತೊಂದು ಮಗ್ಗುಲಲ್ಲಿ ಇಸ್ಪೀಟ್ ಅಡ್ಡಗಳ ( ಅಂದರ್ ಬಾಹರ್ ) ವಿಸ್ತರಣೆ ಮತ್ತು ಅಧಿಪತ್ಯ ಸಾಧಿಸಲು ಇತನ ಹತ್ಯೆಯಾಗಿರುವ ಅನುಮಾನ ಎದ್ದು ಕಾಣುತ್ತಿದೆ…..!!
ಹಂತಕರನ್ನು ಹೆಡೆಮುರಿಕಟ್ಟಲು ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಪೋಲಿಸರ ತಂಡ ಕಾರ್ಯಚರಣೆಗೆ ಇಳಿದಿತ್ತು ಪಕ್ಕಾ ಮಾಹಿತಿ ಅಧಾರದ ಮೇಲೆ ಕಡೂರಿನಲ್ಲಿ ತಲೆಮರೆಸಿಕೊಂಡಿದ್ದ ಐವರು ಹಂತಕರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ವರದಿಯಂತೆ ಆಟೋ ಸುರೇಶ ಮತ್ತು ಸಂತೋಷ ಅಲಿಯಾಸ್ ಗುಂಡಾ ಈ ಹತ್ಯೆಯ ಪ್ರಮುಖ ಆರೋಪಿಗಳು. ಈಗ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಐವರು ಆರೋಪಿಗಳನ್ನು ಕಡೂರು ಸಮೀಪ ಬಂಧಿಸಿ ಠಾಣೆಗೆ ಕರೆದು ಕೋಂಡು ಬಂದಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ. ಹಂತಕರ ತಂಡ ಪೋಲಿಸರ ವಿಚಾರಣೆ ವೇಳೆ ಸತ್ಯ ಬಾಯಿ ಬಿಟ್ಟಿದ್ದೆ ಅದರೆ ಈ ಹತ್ಯೆಯ ಹಿಂದಿನ ಕಾಣದ ಕೈಯೊಂದು ಜೈಲು ಪಾಲಾಗುವ ಸಾಧ್ಯತೆ ಇದೆ..!!
ಈ ಕೂಡಲೇ ಪೋಲಿಸ್ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ. ಭದ್ರಾವತಿ ತಾಲ್ಲೂಕಿನಾದ್ಯಂತ ನಿರ್ಜನ ಪ್ರದೇಶದಲ್ಲಿ ನೆಡೆಯುವ ಅಕ್ರಮ ಅಂದರ್ ಬಾಹರ್ ದಂಧೆಗೆ ಕಡಿವಾಣ ಹಾಕಬೇಕು. ನಿತ್ಯ ಭದ್ರಾವತಿ ಒಂದರಲ್ಲೇ ಲಕ್ಷಾಂತರ ರೂಪಾಯಿ ವಹಿವಾಟು ನೆಡೆಯುತ್ತದೆ.ಭದ್ರಾವತಿಯಲ್ಲಿ ನೆಡೆಯುವ ಅಷ್ಟೂ ಅಡ್ಡ ಕಸುಬು ಮತ್ತು ಕ್ರಿಮಿನಲ್ ಆ್ಯಕ್ಟಿವೀಟಿಸ್ ಗೆ ಈ ಇಸ್ಪೀಟ್ ಅಡ್ಡೆಗಳೆ ಕೇಂದ್ರಸ್ಥಾನವಾಗಿದೆ.
ಇಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಅಂಶವೆಂದರೆ ಪೋಲಿಸ್ ಅಧಿಕಾರಿಗಳ ತಂಡ ಎಷ್ಟೇ ಮಾಹಿತಿ ಕಲೆಹಾಕಿ ಇಸ್ಪೀಟ್ ಅಡ್ಡಗಳ ಮೇಲೆ ಮುಗಿಬಿದ್ದರೆ ಅ ಸ್ಥಳದಲ್ಲಿ ಯಾರು ಇರುವುದಿಲ್ಲ..!! ಪೋಲಿಸರು ದಾಳಿ ಮಾಡುವ ಸುಳಿವರಿತ ದಂಧೆಕೋರರು ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ.ಅ ಮಟ್ಟದ ಪಕ್ಕಾ ಮಾಹಿತಿ ಅಡ್ಡಕಸುಬಿಗಳಿಗೆ ತಲುಪಿರುತ್ತದೆ..!!! ಇದಕ್ಕೆ ಕಾರಣ ಭದ್ರಾವತಿಯಲ್ಲೆ ಈ ಠಾಣೆಯಿಂದ ಅ ಠಾಣೆ ಅಂತ ವರ್ಗಾವಣೆಗೊಂಡು ಹಲವು ವರ್ಷದಿಂದ ಇಲ್ಲೆ ಬಿಡುಬಿಟ್ಟಿರುವ ಕೇಲವು ಪೋಲಿಸರು..! ಹಣಕ್ಕಾಗಿ ಹಾಕಿದ ಖಡಕ್ ಖಾಕಿಗೆ ಮಸಿ ಬಳಿಯುವ ಹಿನತನಕ್ಕೆ ಮುಂದಾಗಿದ್ದಾರೆ.
ಹಿರಿಯ ಪೋಲಿಸ್ ಅಧಿಕಾರಿಗಳು ಮೊದಲು ಭದ್ರಾವತಿ ನಗರದಲ್ಲೇ ಹತ್ತಾರು ವರ್ಷಗಳಿಂದ ಬಿಡು ಬಿಟ್ಟು ಅಕ್ರಮ ದಂಧೆಕೋರರ ಜೋತೆಗೆ ಕೈಜೋಡಿಸಿರುವ ಕೇಲವು ಪೋಲಿಸರನ್ನು ಭದ್ರಾವತಿ ಬಿಟ್ಟು ಬೇರೆಡೆಗೆ ವರ್ಗಾಯಿಸಿನೋಡಿ ಸ್ವಲ್ಪ ಮಟ್ಟಿಗೆ ಕ್ರೈಮ್ ಕಡಿಮೆ ಆಗುತ್ತದೆ. ಮಾಹಿತಿ ಕೂಡ ಸೋರಿಕೆ ಆಗುವುದಿಲ್ಲ
ಅದೇನೆ ಇರಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಕ್ಕಾ ಮಾಹಿತಿ ಅಧಾರದ ಮೇಲೆ ಹಂತಕರ ಬಂಧನಕ್ಕೆ ಮುಂದಾಗಿದ್ದ ಪೋಲಿಸರ ತಂಡ ಮುಜ್ಜುವಿನ ಹತ್ಯೆಮಾಡಿ ತಲೆಮರೆಸಿಕೊಂಡಿದ್ದ ಐವರನ್ನು ಪ್ರಕರಣ ನೆಡೆದ 24 ಗಂಟೆಯೊಳಗೆ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಕಾರ್ಯಾಚರಣೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ
ಸುಧೀರ್ ವಿಧಾತ, ಶಿವಮೊಗ್ಗ.