ಕೊಲೆಯಾದವನು ನಟೋರಿಯಸ್ ರೌಡಿ ಮುಜ್ಜು ಅಲಿಯಾಸ್ ಮುಜಾಹೀದ್ ತಡ ರಾತ್ರಿ ಇತನ ಮೇಲೆ ದಾಳಿ ಮಾಡಿರುವ ಹಂತಕರು ಲಾಂಗಿನಿಂದ ಮನಬಂದಂತೆ ಕೊಚ್ಚಿದ್ದಾರೆ.ಕೈ ಹಾಗೂ ಮುಖದ ಭಾಗಕ್ಕೆ ಬಲವಾದ ಏಟು ಬಿದ್ದ ಕಾರಣಕ್ಕೆ ಮುಜ್ಜು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.ರಮೇಶನ ಹತ್ಯೆ ಪ್ರಕರಣಕ್ಕೆ ಜೈಲಿಗೆ ಹೋಗಿ ಬಂದವನು ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ರಾಜಕಾರಣಿಯೊಬ್ಬನ ಮಗನ ಜೋತೆ ಕೈ ಮಿಲಾಯಿಸಿ ಇಸ್ಪೀಟ್ ಅಡ್ಡಗಳ ಅಧಿಪತಿ ಯಾಗಿದ್ದ .ಎಗ್ಗಿಲ್ಲದೆ ಮೇರೆಯುತ್ತಿದ್ದ ಇತನನ್ನು ಕೆಡವಿ ಕೊಂದಿದ್ದಾರೆ ಇದು ಒಂದು ಮಗ್ಗುಲಲ್ಲಿ ರಿವೆಂಜಿಗೆ ಬಿದ್ದ ಹೆಣವಾದರೆ ಮತ್ತೊಂದು ಮಗ್ಗುಲಲ್ಲಿ ಇಸ್ಪೀಟ್ ಅಧಿಪತ್ಯ ಸಾಧಿಸಲು ಇತನ ಹತ್ಯೆಯಾಗಿರುವ ಅನುಮಾನವಿದೆ…..!!
ಘಟನಾ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಂತಕರನ್ನು ಹೆಡೆಮುರಿಕಟ್ಟಲು ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಪೋಲಿಸರ ತಂಡ ಭಲೇ ಬಿಸಿದೆ…….
ನೆಡೆದಿದ್ದಾದರು ಏನು..?
ಉರಿ ಬಿಸಿಲ ತಾಪಕ್ಕೆ ಕನಲಿಹೊಗಿದ್ದ ಭದ್ರೆ ಕೇಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಮೈದುಂಬಿ ತಣ್ಣಗೆ ಹರಿಯುತ್ತಿದ್ದಾಳೆ ಎನ್ನುವಷ್ಟರಲ್ಲಿ ಭದ್ರೆಯ ಒಡಲಲ್ಲಿ ರೌಡಿ ಶೀಟರ್ ಒಬ್ಬನ ಹತ್ಯೆ ಯಿಂದ ನೆತ್ತರ ಕೊಡಿ ಹರಿದು ಭದ್ರೆ ಮಲಿನಗೊಂಡಿದ್ದಾಳೆ..! ಮತ್ತದೆ ಭದ್ರೆಯ ತಟದಲ್ಲಿ ಲಾಂಗು ಮಚ್ಚುಗಳನ್ನು ಜಳಪಿಸಿದ ಹಂತಕರ ತಂಡ ರೌಡಿ ಶೀಟರ್ ಮುಜ್ಜುವಿನ ಉಸಿರು ನಿಲ್ಲುವಂತೆ ಮನಬಂದಂತೆ ಕೊಚ್ಚಿ ಕೆಡವಿದ್ದಾರೆ..! ಬಿದ್ದ ಜಾಗದಲ್ಲೆ ರೌಡಿ ಶೀಟರ್ ಮುಜ್ಜು ಅಲಿಯಾಸ್ ಮುಜಾಹೀದ್ ನೆತ್ತರ ಮಡುವಿನಲ್ಲೆ ಉಸಿರು ಚಲ್ಲಿದ್ದಾನೆ..!?
ಹತ್ಯೆಯಾದ ಸ್ಥಳವನ್ನು ಪರಿಶೀಲಿಸುತ್ತಿರುವ ಹಿರಿಯ ಪೋಲಿಸ್ ಅಧಿಕಾರಿಗಳು
ಭದ್ರಾವತಿಯಲ್ಲಿ ನಿನ್ನೆ ತಡರಾತ್ರಿ ರೌಡಿ ಶೀಟರ್ ಮುಜಾಹೀದ್ ಹತ್ಯೆ ನೆಡೆದು ಹೋಗಿದೆ..! ಇದೊಂದು ರಿವೆಂಜ್ ಗೆ ಬಿದ್ದ ಹೆಣ ಅಂದರೆ ತಪ್ಪಾಗಲಾರದು. ಸರಿ ಸುಮಾರು ನಾಲ್ಕುವರ್ಷದ ಹಿಂದೆ ದಿನಾಂಕ 08/04/2019 ರಂದು ಬೊಮ್ಮನಕಟ್ಟೆ ವ್ಯಾಪ್ತಿಯ ವೈನ್ ಸ್ಟೋರ್ ಹತ್ತಿರ ಇಸ್ಪೀಟ್ ಕಿಂಗ್ ಗಳಾದ ಆಟೋ ಸುರೇಶ್ ಹಾಗೂ ಸಂತೋಷ್ ಅಲಿಯಾಸ್ ಗುಂಡ ಹಾಗೂ ಇವರ ಸಹಚರ ರಮೇಶ್ ಒಟ್ಟಿಗೆ ಕುಳಿತು ಹೆಂಡದ ನಶೆಯಲ್ಲಿರುವಾಗ ಅಲ್ಲಿಗೆ ಬಂದ ಪುಡಿರೌಡಿ ಮುಜ್ಜು ಅಲಿಯಾಸ್ ಮುಜಾಹೀದ್ ಅವರೊಂದಿಗೆ ಇಸ್ಪೀಟ್ ಆಟ ( ಅಂದರ್ ಬಾಹರ್) ಅಡಿಸುವ ಅಕ್ರಮ ವ್ಯವಹಾರಕ್ಕೆ ಸಂಭಂಧಿಸಿದಂತೆ ಕಿರಕ್ ಮಾಡುತ್ತಾನೆ ಇನ್ನೇನು ಗಲಾಟೆ ತಾರಕಕ್ಕೆ ಹೋಗಬೇಕೆನ್ನುವ ಸಮಯದಲ್ಲಿ ಸುರೇಶ್ ಹಾಗೂ ಸಂತೋಷರ ಪರಮಾಪ್ತ ಶಿಷ್ಯನಾದ ರಮೇಶ್ ಕಿರಿಕ್ ಮಾಡಲು ಬಂದ ಮುಜಾಹೀದ್ ಗೆ ನಶೆಯ ಗುಂಗಿನಲ್ಲಿ ಆವಾಜ್ ಹಾಕಿದ್ದಾನೆ ಮೊದಲೇ ಚಾಕು
ಹಿಡಿದು ಬಂದಿಂದ ಮುಜಾಹೀದ್ ಸಿಟ್ಟಿಗೆದ್ದು ರಮೇಶನ ಮೇಲೆ ಏಕಾ ಏಕಿ ಬಲವಾಗಿ ದಾಳಿಮಾಡಿದ್ದಾನೆ ದೀಡಿರ್ ದಾಳಿಗೆ ಕುಸಿದು ಬಿದ್ದ ರಮೇಶ್ ಸ್ಥಳದಲ್ಲಿಯೇ ಶಿವನಪಾದ ಸೇರಿದರೆ ಇವನ ಜೋತೆಗಿದ್ದ ಸುರೇಶ ಮತ್ತು ಸಂತೋಷನ ಮೇಲು ಮುಜಾಹೀದ್ ಚಾಕುವಿನಿಂದ ದಾಳಿಮಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ..!ಈ ಘಟನೆಯ ನಂತರದಲ್ಲಿ ಸ್ಥಳದಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟ ರಮೇಶನ ಬಾಡಿಯನ್ನು ಡೇಡ್ ಹೌಸ್ ಗೆ ರವಾನೆ ಮಾಡಿದರೆ ಆಟೋ ಸುರೇಶ ಮತ್ತು ಸಂತೋಷನನ್ನು ಪೋಲಿಸರು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು ನಂತರ ಇಬ್ಬರು ಬದುಕುಳಿದಿದ್ದರು..!
ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಮುಜಾಹೀದ್ ಜೈಲುಪಾಲಾಗಿ ಹೊರಗೆ ಬಂದಿದ್ದ ಆದರೆ ರಿವೆಂಜಿನ ನಂಜು ಮಾತ್ರ ಆಗಾಗ್ಗೆ ಕಾರುತ್ತಲೆ ಇತ್ತು. ಇತ್ತೀಚೆಗೆ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ರಾಜಿ ಸಂಧಾನ ಮಾಡಿಸಲು ರಾಜಕಾರಣಿಯೊಬ್ಬರ ಮಗನ ನೆತ್ರುತ್ವದಲ್ಲಿ ವೇದಿಕೆ ರೇಡಿಯಾಗಿತ್ತು. ಎಲ್ಲಾ ಇಸ್ಪೀಟ್ ದಂಧೆಕೋರರನ್ನು ಒಂದು ಮಾಡಿ ಇನ್ನಷ್ಟು ಅಕ್ರಮ ಇಸ್ಪೀಟ್ ದಂಧೆಯನ್ನು ತಾಲ್ಲೂಕಿನಾದ್ಯಂತ ವಿಸ್ತರಿಸುವ ಸಲುವಾಗಿ ಈ ಪ್ಲಾನ್ ರೂಪಿಸಿದ್ದನಂತೆ ರಾಜಕಾರಣಿಯ ಮಗ ಇತನ ಹೆಸರು ಹಸಿವಿನಾದರು ಅಕ್ರಮ ವ್ಯವಹಾರದ ವಿಷಯದಲ್ಲಿ ವ್ಯಾಗ್ರನೆ..! ಇವನು ರಾಜಕಾರಣಿಯ ಮಗನ ಮಾತಿಗೆ ಒಪ್ಪಿದ ಮುಜಾಹೀದ್ ರಾಜಿಗೆ ರೇಡಿಯಾಗಿದ್ದ ಆದರೆ ಆಟೋ ಸುರೇಶ ಮತ್ತು ಸಂತೋಷ ಇದಕ್ಕೆ ಬಿಲ್ ಕುಲ್ ಒಪ್ಪದೆ ಮತ್ತೆ ರಿವೆಂಜಿನ ಮಾತನಾಡಿ ನಂಜು ಕಾರಿದ್ದರಂತೆ..!?
ಅಲ್ಲಿಗೆ ರಾಜಿ ಸಂಧಾನಕ್ಕೆ ವೇದಿಕೆ ರೂಪಿಸಿದ್ದ ರಾಜಕಾರಣಿಯ ಮಗನ ಪ್ಲಾನ್ ಕೂಡ ಅಟ್ಟರ್ ಫ್ಲಾಪ್ ಆಗಿ ಫೇಲ್ಯೂರ್ ಆಗಿದೆ…!!
ಸರಿ ಈ ರಾಜಿ ಸಂಧಾನಕ್ಕೆ ರಾಜಕಾರಣಿಯ ಮಗ ಇಳಿದಿದ್ದಾದರು ಯಾಕೆ ಎಂದು ಹುಡುಕ ಹೊರಟರೆ ಇಸ್ಪೀಟ್ ಅಡ್ಡದ ಫಮಲು ಭದ್ರಾವತಿಯನ್ನೆ ಪಸರಿಸಿದ ಖರಾಬು ವಾಸನೆ ಬಡಿಯುತ್ತದೆ..!!
ಹೌದು ಇತ್ತೀಚೆಗೆ ಭದ್ರಾವತಿ ಅಕ್ರಮ ಚಟುವಟಿಕೆ ಮತ್ತು ಜೂಜಿನಡ್ಡೆಯ ಕಲರವಕ್ಕೆ ನಲುಗಿ ಹೋಗಿದೆ ಬಲಿಷ್ಠ ರಾಜಕಾರಣಿಯ ಮಗನನೊಬ್ಬ ಈ ಜೂಜಿನಡ್ಡೆಯ ಅಧಿಪತಿಯಂತೆ…! ಈ ಇಸ್ಪೀಟ್ ದಂಧೆ ಕೂಡ ಭದ್ರಾವತಿ ಸರಹದ್ದಿನಲ್ಲಿ ಭದ್ರವಾದ ಬೇರು ಬಿಟ್ಟಿದೆ ನಿತ್ಯ ನಿರ್ಜನ ಪ್ರದೇಶದಲ್ಲಿ ಅಂದರೆ ಹೊಳೆಹುನ್ನೂರು ಚನ್ನಗಿರಿಯ ರಸ್ತೆಯ ನಡು ತೋಪಿನಲ್ಲಿ ಮತ್ತು ಬಿಅರ್ ಪಿ , ರಬ್ಬರ್ ಪ್ಲಾಂಟ್ ಪ್ರದೇಶದಲ್ಲಿ ಹಾಗೂ ಇನ್ನಿತರ ಗುಪ್ತ ಪ್ರದೇಶದಲ್ಲಿ ಇಸ್ಪೀಟಿನ ಕಲರವ ನಿತ್ಯ ಮೊಳಗುತ್ತಿದೆ ಇಲ್ಲಿ ಲಕ್ಷಾಂತರ ರೂಪಾಯಿಯ ವಹಿವಾಟು ಸದ್ದಿಲ್ಲದೆ ನೆಡೆಯುತ್ತದೆ ಇದರ ಅಮದನಿಯಿಂದ ರಾಜಕಾರಣಿಯೊಬ್ಬನ ಮಗನ ಕಿಸೆಗೆ ನಿತ್ಯ ಐದು ಲಕ್ಷ ರೂಪಾಯಿ ಹೋಗಿ ಸೇರುತ್ತಿದೆ..! ಎಂದರೆ ಈ ಹಡಬೆ ದಂಧೆ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎನ್ನುವುದಕ್ಕೆ ಮುಜ್ಜುವಿನ ಹತ್ಯೆಯೆ ಸಾಕ್ಷಿಯಾಗಿ ನಿಂತಿದೆ..!? ಇಲ್ಲಿ ಪೋಲಿಸ್ ಇಲಾಖೆ ಮೌನಕ್ಕೆ ಶರಣಾಗಿದೆ..! ಇದು ಸಹಜ ಕೂಡ. ಇಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರಿಗೆ ಬೆಲೆ ಇಲ್ಲಾ..!
ಮೊದಲೆ ಹೇಳಿ ಕೇಳಿ ಭದ್ರಾವತಿ ರಾಜ್ಯದಲ್ಲಿ ಅಕ್ರಮಗಳಲ್ಲಿ ಮಿಂದೆಳುವ ನಗರಗಳ ಸಾಲಿನಲ್ಲಿ ಮೊದಲ ಸ್ಥಾನ ಭದ್ರಾವತಿಯದ್ದೆ ಇಲ್ಲಿ ಎಂತಹ ಅಕ್ರಮ ಚಟುವಟಿಕೆ ಕೊರರಿಗೆ ಕೇಸು ಬಿಳುವುದೆ ಕಡಿಮೆ ಪೋಲಿಸರು ಹುಮ್ಮಸ್ಸಿನಿಂದ ಕೇಲಸ ಮಾಡಿದರು ರಾಜಕಾರಣಿಗಳು ತಪ್ಪು ಮಾಡಿದವನು ತಮ್ಮ ಮನೆಮಗನೆ ಠಾಣೆಗೆ ಹೋಗಿರುವಂತೆ ಫೋನ್ ಮಾಡಿ ಬಿಡಿಸಿಕೊಂಡು ಹೋಗುತ್ತಾರೆ.ಒಂದು ಸಾದಾರಣ ಹೆಲ್ಮೆಟ್ ಕೇಸಿಗೂ ರಾಜಕಾರಣಿಗಳ ಫೋನ್ ಕಾಲ್ ಬರುತ್ತದೆ ಅಂದ ಮೇಲೆ ಇಲ್ಲಿ ಪ್ರಾಮಾಣಿಕವಾಗಿ ಕೇಲಸ ಮಾಡಲು ಪೋಲಿಸರಿಗು ಮತ್ತು ಅಧಿಕಾರಿಗಳಿಗೂ ಸಾಧ್ಯವಿಲ್ಲ..! ಇದನ್ನು ಮೀರಿ ಕರ್ತವ್ಯಕ್ಕೆ ಮುಂದಾದರೆ ಆತನ ವರ್ಗಾವಣೆ ಖಚಿತ.! ಅ ಮಟ್ಟಕ್ಕೆ ಹೊಲಸು ರಾಜಕಾರಣ ಬೆಳೆದು ನಿಂತಿದೆ ಭದ್ರೆಯ ಒಡಲಲ್ಲಿ..!
ಈ ಹಾದಿಯಲ್ಲೆ ಮುಜ್ಜು ಅಲಿಯಾಸ್ ಮುಜಾಹೀದ್ (35) ಎನ್ನುವ ರೌಡಿ ಶೀಟರ್ ಒಬ್ಬನ ಹತ್ಯೆ ನೆಡೆದು ಹೊಗಿದೆ ಅಂದು ರಾಜಿಗೆ ಒಪ್ಪಿಕೊಳ್ಳದ ಆಟೋ ಸುರೇಶ್ ಮತ್ತು ಸಂತೋಷ ಮುಜ್ಜು ಹತ್ಯೆಗೆ ಸ್ಕೇಚ್ ಹಾಕಿರುವ ಅನುಮಾನವಿದೆ.!? ಇವರೆ ಮೋಹರ್ತ ಫಿಕ್ಸ್ ಮಾಡಿ ಮುಜಾಯಿದ್ ನಮ್ಮನ್ನು ಅಟ್ಯಾಕ್ ಮಾಡುವ ಮೊದಲೇ ನಾವೆ ಅವನನ್ನು ಮುಗಿಸಿ ಬಿಡುವ ನಿರ್ಧಾರಕ್ಕೆ ಬಂದ ಹಂತಕರಾದ ಸುರೇಶ ಮತ್ತು ಸಂತೋಷ್ ಪೇಪರ್ ಟೌನ್ ವ್ಯಾಪ್ತಿಯ ಬೋಮ್ಮನಕಟ್ಟೆಯಲ್ಲಿ ಮುಜಾಹೀದ್ ನ ಎರಡನೇ ಹೆಂಡತಿಯ ಮನೆಯ ಮುಂಬಾಗದಲ್ಲೆ ಕಾದು ಕುಳಿತಿದ್ದು ಆತ ತನ್ನ ಬೈಕಿನಲ್ಲಿ ಬಂದ ಕೂಡಲೇ ಹಂತಕರು ಆತನ ಮೇಲೆ ಲಾಂಗಿನಿಂದ ಮನಬಂದಂತೆ ಕೊಚ್ಚಿದ್ದಾರೆಂದು ತಿಳಿದುಬಂದಿದೆ..! ಹಂತಕರ ಬಲವಾದ ಲಾಂಗಿನೇಟಿಗೆ ಮಿಸುಕಾಡಲು ಸಾಧ್ಯವಾಗದೆ ನಿಂತ ಜಾಗದಲ್ಲೇ ಕುಸಿದು ಬಿದ್ದು ಉಸಿರು ಚಲ್ಲಿದ್ದಾನೆ ಮುಜ್ಜು..!
ಮುಜಾಹೀದ್ ಯಾರು.?
ಮುಜಾಹೀದ್ ಒಬ್ಬ ಪುಡಿರೌಡಿ ಒಂದುಕಾಲದ ಒಸಿ ಬೆಡ್ಡರ್ ಹಾಲಿ ನಗರಸಭಾ ಸದಸ್ಯನೊಬ್ಬನ ಪರಮಾಪ್ತ ಶಿಷ್ಯ. ಅ ನಂತರದಲ್ಲಿ ರಮೇಶನ ಹತ್ಯೆಮಾಡಿ ರೌಡಿ ಮುಜ್ಜು ಜೈಲು ಸೇರಿದ್ದ. ಹತ್ಯಾ ಪ್ರಕರಣ ಮತ್ತು ಇತನ ಮೇಲಿದ್ದ ಇನ್ನಿತರ ಪ್ರಕರಣದ ಅಧಾರದ ಮೇಲೆ ಇವನ ಮೇಲೆ ಭದ್ರಾವತಿ ಪೋಲಿಸರು ರೌಡಿ ಶೀಟ್ ತೆರೆದೀದ್ದರು ಇವನ ಮೇಲೆ ಐಪಿಸಿ ಕಲಂ 302 (ಕೊಲೆ), 307 ( ಕೊಲೆಯತ್ನ ) ಸೇರಿದಂತೆ ನಾಲ್ಕು ಪ್ರಕರಣಗಳಿಗೆ ಸಂಭಂಧಿಸಿದಂತೆ ಕೇಸುಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ
ಮುಜ್ಜುವಿನ ಹತ್ಯೆ ಮಾಡಿರುವ ಅನುಮಾನ ಇರುವ ಆಟೋ ಸುರೇಶ್ ಮತ್ತು ಸಂತೋಷ್ ತಲೆ ಮರೆಸಿಕೊಂಡಿದ್ದಾರೆ
ಇವರ ಬಂಧನಕ್ಕಾಗಿ ಪೋಲಿಸರು ಬಲೆಬಿಸಿದ್ದಾರೆ. ಇವರ
ನಂತರವಷ್ಟೇ ಇನ್ನಷ್ಟು ಮಾಹಿತಿಯು ಹೊರ ಬರಬೇಕಿದೆ..!?
ಸುಧೀರ್ ವಿಧಾತ, ಶಿವಮೊಗ್ಗ