“ಕನ್ನಡ ಕೌಸ್ತುಭ”ರಾಜ್ಯ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಮೇಗರವಳ್ಳಿಯ ನಿರಂತ್ ….

ಪ್ರಶಸ್ತಿ ಪುರಸ್ಕೃತ “ನಿರಂತ್

ನಿರಂತ್ ಮತ್ತು ಇತನ ತಂದೆ ಪಟೇಲ್ ವೆಂಕಟೇಶ್ ಹೆಗಡೆ ಮತ್ತು ತಾಯಿ ಸರಿತಾ ಹಾಗೂ ಸಹೋದರಿ

“ಕನ್ನಡ ಕೌಸ್ತುಭ”ರಾಜ್ಯ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಮೇಗರವಳ್ಳಿಯ ನಿರಂತ್ ..
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಪಟೇಲ್ ವೆಂಕಟೇಶ್ ಹೆಗಡೆ ಹಾಗೂ ಸರಿತಾ ದಂಪತಿ ಪುತ್ರ ನಿರಂತ್ ಈ ಹೆಮ್ಮೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ 2022-23ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಸಂಪೂರ್ಣ ಅಂಕ ಪಡೆದು ತೇರ್ಗಡೆಯಾಗಿದ್ದರು. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿದ ನಿರಂತ್ ಓದಿದ ಶಾಲೆಗೂ ಹೆತ್ತವರಿಗೂ ಊರಿಗೂ ಹೆಸರು ತಂದಿದ್ದರು.ಇತನಿಗೆ ಶಿಕ್ಷಣ ನೀಡಿದ ಶಾಲೆಯ ಶಿಕ್ಷಕರು ಇವನ ಸಾಧನೆಯಿಂದ ಹೆಮ್ಮೆಪಟ್ಟಿದ್ದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇತನ ತಂದೆಯನ್ನು.? ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಪಟೇಲ್ ವೆಂಕಟೇಶ್ ಹೆಗಡೆ ಇವರು ಕೂಡ ಹುಟ್ಟು ಕನ್ನಡ ನೆಲ ಜಲ ಭಾಷೆಗಾಗಿ ‌ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಂತವರು ಇಂತವರ ಮಗನಾಗಿ ನಿರಂತ್ ಸರ್ಕಾರಿ ಶಾಲೆಯಲ್ಲಿ ಓದಿ ಕಳೆದ ಸಾಲಿನ ಎಸ್ಎಸ್ಎಲ್ ಸಿ ಯ ಅಂತಿಮ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕಗಳಿಗೆ 125 ಸಂಪೂರ್ಣ ಅಂಕ ಪಡೆದು ತೀರ್ಥಹಳ್ಳಿ ತಾಲ್ಲೂಕಿನ ಹಿರಿಮೆ ಹೆಚ್ಚಿಸುವುದರೊಂದಿಗೆ ಹೆತ್ತವರ ಗೌರವವನ್ನು ಹೆಚ್ಚಿಸಿದ್ದಾರೆ. ಇವರ ಈ ಸಾಧನೆಯನ್ನು ಮನಗಂಡ
ದಾವಣಗೆರೆಯ ಕಲಕುಂಚ ಸಾಂಸ್ಕೃತಿಕ ಸಂಸ್ಥೆ ಅವರು ಪ್ರತಿವರ್ಷದಂತೆ ಈ ಸಾಲಿನಲ್ಲೂ ಕೊಡಲಿರುವ ಗೌರವ ಯುಕ್ತ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿಗೆ ನಿರಂತ್ ಅವರನ್ನು ಆಯ್ಕೆಮಾಡಿದ್ದಾರೆ. ಇವರು ಮೇಗರವಳ್ಳಿಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿಯಾದ ಪಟೇಲ್ ವೆಂಕಟೇಶ್ ಹೆಗಡೆ ಹಾಗೂ ಸರಿತ ಇವರ ಸುಪುತ್ರರಾಗಿದ್ದು ಇವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಈ ಪ್ರಶಸ್ತಿಯನ್ನು ದಿನಾಂಕ 30-07- 2023ನೇ ಭಾನುವಾರದಂದು ದಾವಣಗೆರೆಯ ಅದ್ದೂರಿ ಕಾರ್ಯಕ್ರಮದಲ್ಲಿ “ಕನ್ನಡ ಕೌಸ್ತುಭ” ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಿದ್ದಾರೆ.
ಈ ಸಂಧರ್ಭದಲ್ಲಿ ಸಾಧನೆಗೈದ ನಿರಂತ್ ಅವರನ್ನು ಆತ್ಮೀಯರು ಮತ್ತು ಗ್ರಾಮಸ್ಥರು ಅಭಿನಂದಸಿದ್ದಾರೆ.

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!