ಪೋಲಿಸರ ವಶದಲ್ಲಿದ್ದಾಗಲೆ ಕೊಲೆ ಆರೋಪಿಗಳ ಮೇಲೆ ಗುಂಡಿನದಾಳಿ ಮಾಡಿದ ಗ್ಯಾಂಗ್: ಸಿಸಿ ಕ್ಯಾಮರಾದಲ್ಲಿ ಸೆರೆ ಅಯ್ತು ಭೀಕರ ದೃಶ್ಯ..!!

ಪೋಲಿಸರ ವಶದಲ್ಲಿದ್ದಾಗಲೆ ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ಮಾಡಿದ ಗ್ಯಾಂಗ್: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಪೊಲೀಸರು ಕೊಲೆ ಆರೋಪಿಗಳನ್ನು ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಎಂಟು ಜನರ ಗ್ಯಾಂಗ್ ಒಂದು ದೀಡಿರನೆ ಗುಂಡಿನ ದಾಳಿ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ….

ಗುಂಡಿನದಾಳಿ ನೆಡೆದ ಸಮಯದ ಸಿಸಿ ಟಿವಿ ದೃಶ್ಯ

ಈ ಘಟನೆ
ಭರತ್‌ಪುರದ ಅಮೋಲಿ ಟೋಲ್ ಪ್ಲಾಜಾದಲ್ಲಿ ನೆಡೆದಿದೆ . ಮೂವರು ವ್ಯಕ್ತಿಗಳು ಆರೋಪಿಗಳಿದ್ದ ಬಸ್ ರಸ್ತೆಯ ಬದಿಗೆ ನಿಲ್ಲುತ್ತಿದ್ದಂತೆ ಸಮೀಪಕ್ಕೆ ಬಂದಿದ್ದಾರೆ. ಅವರಲ್ಲಿ ಒಬ್ಬ ಬಂದೂಕನ್ನು ಝಳಪಿಸುತ್ತಾ ವಾಹನದ ಹತ್ತಿರ ಬರೋತ್ತಿರೋದು ದೃಶ್ಯದಲ್ಲಿ ನೀವು ನೋಡಬಹುದು. ಅವರು ಬಸ್‌ನ ಬಾಗಿಲಿನ ಬಳಿ ಬಂದವರೇ ಒಂದು ಕ್ಷಣ ಕಾದು ಬಳಿಕ ಗುಂಡು ಹಾರಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಬಸ್ಸಿನ ಬಾಗಿಲ ಬಳಿ ಬಂದು ಗುಂಡು ಹಾರಿಸಲು ಪ್ರಾರಂಭಿಸಿದ್ರೆ, ಮೂರನೇಯ ವ್ಯಕ್ತಿ ಕಿಟಕಿಗಳ ಮೂಲಕ ಇಣುಕಿ ನೋಡಿ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ನೇರವಾಗಿ ಗುಂಡು ಹಾರಿಸುತ್ತಾನೆ. ಬಳಿಕ ಮೂರು ಜನ ಸೇರಿ ಗುಂಡಿನ ದಾಳಿ ನಡೆಸುತ್ತಾರೆ
ಈ ಘಟನೆಯಲ್ಲಿ ಭಯಭೀತರಾದ ಪ್ರಯಾಣಿಕರ ಪೈಕಿ ಕೆಲವರು ಬಾಗಿಲಿನಿಂದ ಹೊರಬಂದರೆ ಇನ್ನೂ ಕೇಲವರು ಉಸಿರು ಬಿಗಿ ಹಿಡಿದು ಬಾಗಿಲಿನ ಮುಖಾಂತರವೆ ಇಳಿದು ಓಡಿದ್ದಾರೆ. ಸುಮಾರು ಎರಡು ನಿಮಿಷಗಳವರೆಗೆ ಗುಂಡಿನ ದಾಳಿ ನೆಡೆದಿದೆ.! ಈ ದಾಳಿಯ ಪರಿಣಾಮವಾಗಿ ಪೋಲಿಸರ ಸುಪರ್ದಿಯಲ್ಲಿದ್ದ ದರೋಡೆಕೋರ ಕುಲದೀಪ್ ಜಘೀನಾಗೆ ಗುಂಡು ತಗುಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಸಾವನ್ನಪ್ಪಿದ್ದಾನೆ. ಆತನ ಸಹಚರ ವಿಜಯಪಾಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಸ್ಸಿನಲ್ಲಿದ್ದ ಇತರ ಮೂರು ಜನ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಕಳೆದ ವರ್ಷ ಭರತ್‌ಪುರದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಕುಲದೀಪ್ ಮತ್ತು ವಿಜಯ್‌ಪಾಲ್ ಇಬ್ಬರು ಸೇರಿ ಕೃಪಾಲ್ ಜಘೀನಾ ಎಂಬವರನ್ನು ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪ್ತತಿಕಾರವಾಗಿ ದಾಳಿನೆಡೆದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಗುಂಡಿನ ದಾಳಿ ನೆಡೆಸಿದ ಎಂಟು ದಾಳಿಕೋರರ ಪೈಕಿ ಆರು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂಳಿದ ಆರೋಪಿಗಳ ಪತ್ತೆಗಾಗಿ ಪೋಲಿಸರು ಭಲೇ ಬಿಸಿದ್ದಾರೆ.
ಬಸ್ಸೊಂದರಲ್ಲಿ ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಅಟ್ಯಾಕ್ ಮಾಡಿದವರ ಮೇಲೆ ಬಸ್ಸಿನೊಳಗೆ ಪ್ರತಿದಾಳಿ ಮಾಡಲು ಸಾಧ್ಯವಾಗಿಲ್ಲ ಕಾರಣ ದಾಳಿಕೋರರು ಪೊಲೀಸರ ಮುಖಕ್ಕೆ ಮೆಣಸಿನ ಪುಡಿ ಎರಚಿರುತ್ತಾರೆ. ಆದರೂ ಸಹ ದಾಳಿಕೋರರು ಬಂದ ವಾಹನದ ಮೂಲಕ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಗುಂಡಿನ ದಾಳಿ ನಡೆಸಿ ಆರು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಅವರು, ದಾಳಿಕೋರರು ಇಬ್ಬರು ವ್ಯಕ್ತಿಗಳ ಜೊತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಮೆಣಸಿನ ಪುಡಿ ಎರಚಿದ್ದಾರೆ. ಒಬ್ಬರು ಸಾವನಪ್ಪಿದರೆ ವಿಜಯಪಾಲ್ ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಮತ್ತು ಘಟನೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳಿಗೂ ಗಾಯವಾಗಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಮೃತ ಕುಲದೀಪ್ ಕುಟುಂಬ ಸದಸ್ಯರು ಎಸ್ಪಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಉಳಿದ ಶಂಕಿತರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದುಃಖ ವ್ಯಕ್ತಪಡಿಸಿದ ಕುಲದೀಪ್ ಸಹೋದರಿ, ನನ್ನ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಸ್ಸಿನಲ್ಲಿದ್ದ ಅಮಾಯಕ ಪ್ರಯಾಣಿಕರ ಪ್ರಾಣಕ್ಕೂ ಅಪಾಯದ ಸಾಧ್ಯತೆಯಿತ್ತು. ಹೀಗಾಗಿ ದಾಳಿಕೋರರ ವಿರುದ್ಧ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!