ಬೆಂಗಳೂರಿನಲ್ಲಿ ಶಂಕಿತ ಉಗ್ರರ ಕರಿನೆರಳು..!! : ಐವರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ ಪೋಲಿಸರು.
ಬೆಂಗಳೂರು : ಇತ್ತೀಚೆಗೆ ರಾಜ್ಯ ರಾಜಧಾನಿಗೆ ಉಗ್ರರ ನಜರು ಬಿದ್ದಿದೆ. ಪಕ್ಕಾ ಮಾಹಿತಿ ಅಧಾರದ ಮೇಲೆ ಕಾರ್ಯಚರಣೆ ನೆಡೆಸಿದ ಸಿಸಿಬಿ ಪೋಲಿಸರು ಐವರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಶಂಕಿತ ಉಗ್ರರು ಸದ್ದಿಲ್ಲದೆ ಬೆಂಗಳೂರಿನಲ್ಲಿ ತಮ್ಮ ಉಗ್ರ ಚಟುವಟಿಕೆಯನ್ನು ಆರಂಭಿಸಲು ಸಜ್ಜಾಗಿದ್ದರು.! ಈ ಐವರು ಪ್ರಮುಖ ಉಗ್ರ ಸಂಘಟನೆಯ ಜೋತೆಗೆ ಕೈ ಜೋಡಿಸಿದ್ದರು ಎನ್ನುವುದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ದೊರೆತ ಪಕ್ಕಾ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ಈ ಐವರನ್ನು ಬಂಧಿಸಿದ್ದಾರೆ.ಐವರು ಶಂಕಿತ ಉಗ್ರರ ನಡು ಮುರಿದ ಸಿಸಿಬಿ ಪೋಲಿಸರು :
ರಾಜ್ಯವೆ ಬೆಚ್ಚಿ ಬೀಳುವ ಹಾಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಉಗ್ರ ಚಟುವಟಿಕೆಗೆ ಶಂಕಿತ ಉಗ್ರರು ಯೋಜನೆ ರೂಪಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ ಸಿಸಿಬಿ, ಕೇಂದ್ರ ಗುಪ್ತಚರ ಇಲಾಖೆ ಮಾರ್ಗದರ್ಶನದಲ್ಲಿ ಬೆಂಗಳೂರು ಸಿಸಿಬಿ ಪೋಲಿಸರ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರಿನಲ್ಲಿ ಆಕ್ಟೀವ್ ಆಗಿದ್ದ ಐವರು ಶಂಕಿತರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಶಂಕಿತ ಉಗ್ರರಲ್ಲಿ ಬಹುತೇಕರು ರೌಡಿ ಶೀಟರ್ ಗಳು ಎನ್ನಲಾಗಿದೆ. ಉಮರ್, ಸುಹೈಲ್, ತಬ್ರೇಜ್,ಮುದಾಸಿರ್, ಫೈಜಲ್ ರಬ್ಬಾನಿ ಬಂಧಿತರು.
ಬಂಧಿತರೆಲ್ಲ ಬೆಂಗಳೂರು ಮೂಲದವರಾಗಿದ್ದು
ಶಂಕಿತರೆಲ್ಲ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಈ ಬಂಧಿತರು ಯಾವ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.ಬಂಧಿತ ಉಗ್ರರಿಗೆ ಉಗ್ರಸಂಘಟನೆಯಿಂದ ಸಾಕಷ್ಟು ಹಣ ಜಮೆ ಆಗಿರುವ ಬಗ್ಗೆ ಶಂಕೆ ಇದೆ.! ಬಂಧಿತರು ಉಗ್ರರ ಸಂಘಟನೆಯ ಜೊತೆ ಸಂಪರ್ಕ ಬೆಳೆಸಿದ್ದು, ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಹೇಗೆಲ್ಲಾ ಸ್ಫೋಟ ನಡೆಸಬೇಕು ಎನ್ನುವುದರ ಬಗ್ಗೆ ತರಬೇತಿ ಪಡೆದಿದ್ದರಂತೆ..!!. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಎನ್ನುವುದರ ಬಗ್ಗೆ ಬಂಧಿತರು ಉಗ್ರರಿಂದ ಸಾಕಷ್ಟು ಮಾಹಿತಿ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.ರಾಜಧಾನಿಯಲ್ಲಿ ಸ್ಪೋಟಕ್ಕೆ ತಯಾರಿ ನಡೆಸಿದ್ದ ಬಂಧಿತ ಶಂಕಿತರು :
ಅವರು ಪಡೆದ ತರಬೇತಿ ಮತ್ತು ರೂಪಿಸಿರುವ ಯೋಜನೆಗೆ ಅನುಗುಣವಾಗಿ ಬೆಂಗಳೂರಿನ ಎಲ್ಲಾ ಏರಿಯಾಗಳಲ್ಲು ಈ ಟೀಂ ಆ್ಯಕ್ಟೀವ್ ಆಗಿತ್ತಂತೆ.! ನಗರದಲ್ಲಿ ಸ್ಪೋಟ ನಡೆಸಲು ತಯಾರಿ ಮಾಡಿಕೊಂಡು ತಮ್ಮ ಸ್ಕೆಚ್ ಅನ್ನು ಕಾರ್ಯರೂಪಕ್ಕೆ ತರಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರಂತೆ.!
ಸಿಸಿಬಿ ಪೋಲಿಸರ ವಶದಲ್ಲಿರುವ ಐವರು ಶಂಕಿತರ ವಿಚಾರಣೆ ಬಿರುಸಿನಿಂದ ಮುಂದುವರೆದಿದೆ.
ಉಗ್ರ ಚಟುವಟಿಕೆಯಲ್ಲಿ ತೊಡಗಿದ ಐವರು ಬಂಧಿತರು ರೌಡಿಶೀಟರ್ ಗಳು
ಬಂಧಿತರೆಲ್ಲರೂ ಆರ್ ಟಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಗಳು. ಕೊರೊನಾ ಸಮಯದಲ್ಲಿ ಇವರು ಓರ್ವನನ್ನ ಅಪಹರಿಸಿ ಕೊಲೆ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಐವರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಹೀಗೆ ಅದ ಪರಿಚಯ ಮುಂದೆ ಈ ಐವರನ್ನು ಜನ್ಮ ಕೊಟ್ಟ ನೆಲದಲ್ಲೆ ಭಯೋತ್ಪಾದನೆಯ ಹಾದಿ ತುಳಿಯುವಂತೆ ಮಾಡಿದೆ ಎನ್ನಲಾಗಿದೆ.ಜೈಲಿನಲ್ಲಿದ್ದಾಗಲೆ ಉಗ್ರ ಚಟುವಟಿಕೆಗೆ ಯೋಜನೆಗೆ ರೂಪಿಸಿದ್ದರಂತೆ..!?
ಹೌದು ಜೈಲಿನಲ್ಲಿದ್ದಾಗಲೆ ಸರ್ವ ತಯಾರಿ ಮಾಡಿಕೊಂಡಿದ್ದ ಇವರು ಹೊರಬರುತ್ತಿದ್ದ ಹಾಗೆ ವಿಧ್ವಂಸಕ ಕೃತ್ಯಕ್ಕೆ ಯೋಜನೆ ತಯಾರಿಮಾಡಿಕೊಂಡಿದ್ದರು
ಬಾಂಬ್ ಗೆ ಬೇಕಾದ ರಾ ಮೆಟೀರಿಯಲ್ ರೆಡಿ ಮಾಡಿದ್ದರು. ವಿಧ್ವಂಸಕ ಕೃತ್ಯಕ್ಕೆ ಬೇಕಾದ ಸಾಕಷ್ಟು ವಸ್ತುಗಳನ್ನು ಶೇಖರಣೆ ಮಾಡಿ ಇಟ್ಟಿದ್ದರಂತೆ.! ಇವರನ್ನು ಬಂಧಿಸಿರುವ ಸಿಸಿಬಿ ಪೋಲಿಸರು ಇವರ ಜೋತೆಗೆ ಕೈಜೋಡಿಸಿರುವ ಮತ್ತಷ್ಟು ಜನರ ಹುಡುಕಾಟಕ್ಕೆ ಮುಂದಾಗಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಜನರು ಸೇರಿ ದೊಡ್ಡ ಮಟ್ಟದ ಸ್ಫೋಟ ಮಾಡುವ ಸಂಚು ರೂಪಿಸಿದ್ದರು ಎನ್ನಲಾಗಿದೆ.ಸಿಸಿಬಿ ಪೋಲಿಸರು ಐವರನ್ನು ಶಂಕಿತ ಉಗ್ರರನ್ನು ಬಂಧಿಸಿದ ನಂತರ ಅವರ ಬಳಿ ಪತ್ತೆಯಾದ ವಸ್ತುಗಳು
1) 4 ವಾಕಿಟಾಕಿ..
2) 7 ಕಂಟ್ರಿ ಮೇಡ್ ಪಿಸ್ತೂಲ್..
3) 42 ಸಜೀವ ಗುಂಡುಗಳು..
4) ಮದ್ದುಗುಂಡುಗಳು..
5 ) 2 ಡ್ರ್ಯಾಗರ್..
6 ) 2 ಸೆಟಲೈಟ್ ಫೋನ್ ಗಳು..
7 ) 4 ಗ್ರೆನೈಡ್ ಗಳು ಪತ್ತೆ..
ಸುಧೀರ್ ವಿಧಾತ, ಶಿವಮೊಗ್ಗ
Voice of common man in words