ಮಗನ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಹೋಗಿ ತಾಯಿ ಆತ್ಮಹತ್ಯೆಗೆ ಶರಣು…!!!
ತಮಿಳುನಾಡು : ಸೇಲಂನ ಕಾಲೇಜೊಂದರಲ್ಲಿ ಓದುತ್ತಿದ್ದ ಮಗನ ಕಾಲೇಜು ಶುಲ್ಕ ಹೊಂದಿಸಲಾಗದೆ ನೊಂದ ತಾಯಿ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಹೋಗಿ ಸಾವಿನ ಮನೆ ಸೇರಿದ್ದಾರೆ.! ಈ ಘಟನೆ ತಮಿಳುನಾಡಿನ ಸೇಲಂ ನಲ್ಲಿ ನಡೆದಿದೆ.
ಈ ಹೃದಯ ವಿದ್ರಾವಕ ಘಟನೆಯೊಂದು ನೆಡೆದಿದ್ದು ಮಗನ ಶಿಕ್ಷಣಕ್ಕಾಗಿ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ (ಸ್ವಚ್ಛತಾ ಸಿಬ್ಬಂದಿ) ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ವೇಗವಾಗಿ ಹೋಗುತ್ತಿದ್ದ ಬಸ್ಸಿಗೆ ಅಡ್ಡ ಹೋಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ.! ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.!
ವೈರಲ್ ವಿಡಿಯೋ
ಮೃತ ಮಹಿಳೆಗೆ ಯಾರೂ ಹೇಳಿದ್ದರಂತೆ ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಕುಟುಂಬಕ್ಕೆ 45,000 ರೂ.ಲಭಿಸುವುದಾಗಿ ಎಂದು ಆಕೆಗೆ ಈ ರೀತಿ ಹೇಳಿ ಯಾರೋ ದಾರಿ ತಪ್ಪಿಸಿದ್ದರಿಂದ ಅವಳು ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..!?
ಮಗನ ಕಾಲೇಜು ಶುಲ್ಕ ಹೊಂದಿಸಲು ಹಣದ ಹಾದಿ ಹಿಡಿದು ಹೋರಟ ಮಹಿಳೆ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದ್ದಾರೆ ಮಗನ ಓದಿನ ಸಲುವಾಗಿ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅ ಮಹಿಳೆ (ತಾಯಿ) ರಸ್ತೆಯ ಒಂದು ಬದಿಯಲ್ಲಿ ನಡೆದು ಹೋಗುತ್ತಿರುತ್ತಾಳೆ ಎದುರಿನಿಂದ ಬಸ್ಸೊಂದು ತಕ್ಕಮಟ್ಟಿನ ವೇಗದಲ್ಲಿ ಬರುತ್ತಿರುತ್ತದೆ ಮಹಿಳೆಯ ಹತ್ತಿರಕ್ಕೆ ಬಸ್ಸು ಬರುತ್ತಿದ್ದಂತೆ ಆಕೆ ಬಸ್ಸಿಗೆ ಎದುರಾಗಿ ನಡುರಸ್ತೆಗೆ ಓಡುತ್ತಾಳೆ ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ನಡಿರಸ್ತೆಯಲ್ಲಿ ಬಿಳುತ್ತಾಳೆ..! ಆಕೆ ಅಡ್ಡಲಾಗಿ ಬರುವ ಅರಿವಿಲ್ಲದಿದ್ದರು ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸುತ್ತಾನೆ. ಅದರೆ ಅಷ್ಟೋತ್ತಿಗಾಗಲೆ ಬಸ್ಸು ಡಿಕ್ಕಿಯಾದ ಕಾರಣಕ್ಕೆ ನಡುರಸ್ತೆಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ..!! ಈ ಘಟನೆಯ ವಿಡಿಯೋ ಅಂಗಡಿಯೊಂದರ ಬಳಿ ಹಾಕಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಮನಿಸಿದ ಸೇಲಂ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು ಎಲ್ಲಾ ಕೋನಗಳಿಂದಲು ತನಿಖೆಗೆ ಮುಂದಾಗಿದ್ದು ಇನ್ನಷ್ಟು ಮಾಹಿತಿ ಪೋಲಿಸರ ತನಿಖೆಯಿಂದ ಹೊರಬರಬೇಕಿದೆ.
ತನ್ನ ಮಗನ ಶಿಕ್ಷಣಕ್ಕಾಗಿ ಮಹಾತಾಯಿ ತನ್ನ ಜೀವವನ್ನೇ ಚಲ್ಲಿದ್ದಾಳೆ..!
ಸುಧೀರ್ ವಿಧಾತ, ಶಿವಮೊಗ್ಗ