ಆರೋಪಿ ಮಗ ಶರತ್
ಮಗನಿಂದಲೆ ಹತ್ಯೆಯಾದ ದಂಪತಿಗಳು..!!
ಘಟನೆಯ ವಿವರ:
ಬೆಂಗಳೂರು: ಯುವಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಾಯಿ ತಂದೆಯನ್ನೆ ಹತ್ಯೆಮಾಡಿ ಜೈಲುಪಾಲಗಿದ್ದಾನೆ. ಇವನು ಮನೆಗೆ ಕುಡಿದು ಬಂದು ಹೆತ್ತವರನ್ನು ನಿರ್ದಾಕ್ಷಿಣ್ಯವಾಗಿ ರಾಡ್ನಿಂದ ಹೊಡೆದು ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ.
ಮಗನ ಕೈಯಿಂದಲೇ ಕೊಲೆಯಾದ ತಂದೆ ಮಂಗಳೂರು ಮೂಲದ ಭಾಸ್ಕರ್(64) ಹಾಗೂ ತಾಯಿ ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿ ಶಾಂತಾ(60) ಎಂದು ತಿಳಿದುಬಂದಿದೆ.
ಮಂಗಳೂರು ಮೂಲದ ಈ ಕುಟುಂಬ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಮಗ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದಾನೆ. 2ನೇಯವನೆ ಆರೋಪಿ ಶರತ್ (27) ಎಂದು ಗುರುತಿಸಲಾಗಿದೆ. ಹೆತ್ತವರನ್ನು ಹತ್ಯೆಮಾಡಿದ ಪಾಪಿ ಮಗ ಶರತ್ ಘಟನೆಯ ನಂತರ ನಾಪತ್ತೆಯಾಗಿದ್ದು, ಆತನಿಗಾಗಿ ಪೋಲಿಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಳೆದ ಮಂಗಳವಾರ (18/07/2023) ಬೆಳಗ್ಗೆ ಹಿರಿಯ ಮಗ ಕೆಲಸಕ್ಕೆಂದು ಹೊರ ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಈತ ( ಹಿರಿಯ ಮಗ) ತಂದೆ-ತಾಯಿಗೆ ಕರೆ ಮಾಡಿದ್ದಾನೆ.ಅ ಸಮಯದಲ್ಲಿ ಮನೆಯಲ್ಲಿ ಯಾರೂ ಫೋನ್ ರಿಸೀವ್ ಮಾಡದಿದ್ದಾಗ ಕೂಡಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಹೆತ್ತವರ ಬಗ್ಗೆ ವಿಚಾರಿಸಿದ್ದಾನೆ ತಕ್ಷಣವೇ ಪಕ್ಕದ ಮನೆಯವರು ಬಂದು ನೋಡಿದಾಗ ದಂಪತಿಗಳಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಸ್ಥಳಿಯರೆಲ್ಲ ಬಂದು ನೋಡಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಬಂದು ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.ಹತ್ಯೆಯಾದ ದಂಪತಿಗಳು ಮಗ
ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಶರತ್ ನಿತ್ಯ ಹಣಕ್ಕಾಗಿ ಹೆತ್ತವರನ್ನು ಪೀಡಿಸುತ್ತಿದ್ದನಂತೆ.ಕೊಡದೆ ಹೊದರೆ ಹುಚ್ಚನಂತೆ ವರ್ತಿಸುತ್ತಿದ್ದನಂತೆ.ಕೊನೆಗು ಈ ಪಾಪಿಯನ್ನು ಹೆತ್ತತಪ್ಪಿಗೆ ಇವನ ಕೈಯಿಂದಲೆ ಹತ್ಯೆಯಾಗಿ ಉಸಿರು ಚಲ್ಲಿದ್ದಾರೆ. ಹೆತ್ತವರನ್ನು ಹತ್ಯೆಮಾಡಿದ ಪಾಪಿ ಮಗ ಈಗ ಪೋಲಿಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾನೆ. ಇವನ ಬಂಧನಕ್ಕಾಗಿ ಬ್ಯಾಟರಾಯನಪುರ ಪೋಲಿಸರ ತಂಡ ಭಲೇ ಬಿಸಿದೆ…
ಶರತ್ ನಿಂದ ಸಾಕಷ್ಟು ನೊಂದಿದ್ದರಂತೆ.! ಕಾರಣ ಶರತ್ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನಂತೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಶರತ್ ಕೆಲಸಕ್ಕೆ ಹೋಗದೆ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದನಂತೆ ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಶರತ್ ವರ್ತನೆಯೆ ವಿಚಿತ್ರವಾಗಿತ್ತು ಮತ್ತು ನಿತ್ಯ ಸೈಕೋ ರೀತಿಯಲ್ಲಿ ವರ್ತಿಸಿ ಹೆತ್ತವರೊಂದಿಗೆ ಜಗಳವಾಡುತ್ತಿದ್ದನಂತೆ.! ಎಂದು ತಿಳಿದು ಬಂದಿದೆ.
ಸುಧೀರ್ ವಿಧಾತ, ಶಿವಮೊಗ್ಗ