ಅ ಹುಡುಗ ಪ್ರೀತಿ ಮಾಡಿದ್ದು ಯುವತಿಯನ್ನಲ್ಲ 35 ರ ಆಂಟಿಯನ್ನು, ಆಕೆ ಒಂದು ಮಗುವಿನ ತಾಯಿಯು ಹೌದು. ಆಂಟಿಯ ಮೋಸದ ಪ್ರೀತಿಯ ಭಲೇಗೆ ಬಿದ್ದು ಹತ್ತು ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಚಿನ್ನಾಭರವಣನ್ನು ಕಳೆದುಕೊಂಡ ಯುವಕ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವರ ಮಗ ಸುಂದರ ಯುವಕ ಅಜಿತ್ ಗಣಪತಿ…..
ಕೊಡಗು: ಮೊದಲೇ ಹೇಳಿದ ಹಾಗೆ ಅಜಿತ್ ಸುಂದರ ಯುವಕ. ಆಂಟಿ ಏನು ಕಮ್ಮಿ ಇಲ್ಲ ವಯಸ್ಸು ಮೂವತ್ತೈದು ದಾಟಿದ್ದರು ಸುಂದರಾಂಗಿಯೇ. ತನ್ನ ಸೌಂದರ್ಯ ಮೈಮಾಟದಿಂದಲೇ ಆ ಯುವಕನ ಬೆನ್ನಿಗೆ ಬಿದ್ದು ಕೆಡವಿ ಕೊಂಡಿದ್ದಾಳೆಂಬ ಮಾತು ಕೇಳಿ ಬರುತ್ತಿದೆ. ತನ್ನ ನಾಜುಕು ಮಾತು ಮೋಹಕ ನೋಟದಿಂದಲೆ ಅಜಿತ್ ನನ್ನು ಸೆಳೆದು ಪ್ರೀತಿ ಪ್ರೇಮದ ಸುಳಿಗೆ ಸಿಲುಕಿಸಿಕೊಂಡಿದ್ದಳು..!
ಅಜಿತ್ ಸಾವಿನ ಅಸಲಿ ಸತ್ಯ ಆತನ ಜೇಬಿನಲ್ಲಿದ್ದ ಡೆತ್ ನೋಟ್ ನಿಂದ ಬಯಲಾಗಿತ್ತು.! ಅಜಿತ್ ಆಂಟಿಯೊಬ್ಬಳ ಮೋಸದ ಪ್ರೀತಿಯ ಸುಳಿಗೆ ಸಿಲುಕಿ ಸಾವಿನ ಮನೆ ಸೇರಿದ್ದ..!!
ಅದೊಂದು ದಿನ ಅಜಿತ್ ಆಕೆಯ ಪ್ರೀತಿಯ ಪ್ರೇಮ ಪಾಶಕ್ಕೆ ಸಿಲುಕಿದವನು ಬೀದಿ ಹೆಣವಾಗಿ ಹೋಗಿದ್ದ. ಆತನ ಗುಟುಕು ಜೀವ ಇನ್ನೇನು ಹಾರಿ ಹೋಗುವ ಕೊನೆಯ ಕ್ಷಣದಲ್ಲಿ ಆತನ ಜೇಬಿನಲ್ಲಿದ್ದ ಪತ್ರ ಒಂದು ಸುಂದರ ಯುವಕ ಅಜಿತನ ಸಾವಿನ ಸೀಕ್ರೇಟ್ ಅನ್ನು ಹೊರಹಾಕಿತ್ತು.!
ಇಲ್ಲಿ ಅಜಿತನ ದುರಂತವೆಂದರೆ ಆತ ಪ್ರೀತಿಸಿದ್ದು ಯುವತಿಯನ್ನಲ್ಲ ಮೂವತ್ತೈದರ ಆಂಟಿಯನ್ನು..!? ಅದರಲ್ಲೂ ಆಕೆ ಒಂದು ಮಗುವಿನ ತಾಯಿ. ಅಜಿತ್ 35 ರ ಆಂಟಿಯ ಸುಳ್ಳು ಪ್ರೀತಿಯ ಭಲೇಗೆ ಬಿದ್ದು 10 ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಚಿನ್ನಾಭರವಣನ್ನು ಕಳೆದುಕೊಂಡು ಪ್ರೀತಿಯ ಗುಂಪಿನಲ್ಲಿ ಬಿದಿಗೆ ಬಿದ್ದಿದ್ದ ಯುವಕ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವರ ಮಗ ಈತ ಅಜಿತ್ ಗಣಪತಿ.
ಸರೋಜ ಅವರ ಮುದ್ದಿನ ಕಿರಿಯ ಮಗನಾಗಿದ್ದ ಅಜಿತ್ ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತಿದ್ದ. ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ ಚಾಲಕನಾಗಿ ಅ ರಸ್ತೆಗಳಲ್ಲಿ ಬಸ್ ಓಡಿಸುತ್ತಿದ್ದ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ಜುಲೈ 2 ರಂದು ರಾತ್ರಿ ಗೋಣಿಕೊಪ್ಪದ ಮಾರುಕಟ್ಟೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿ ಒದ್ದಾಡುತ್ತಿದ್ದ ಅಜಿತನನ್ನು ಆಸ್ಪತ್ರೆಗೆ ಕರೆದೊಯ್ಯಲು ಈತನ ಸಹೋದರ ಭರತ್ ಸೋಮಯ್ಯ ಮುಂದಾಗಿದ್ದಾನೆ ಆಗ ಅಜಿತ್ ಸಾಯುವ ಕೊನೆಯ ಕ್ಷಣದಲ್ಲೂ ನನ್ನನ್ನು ಬದುಕಿಸಬೇಡ ಬದುಕಿಸಿದರೂ ನಾಳೆ ಕಿರಣ್ ಗೌಡ ನನ್ನನ್ನು ಕೊಚ್ಚಿಕೊಲೆ ಮಾಡುತ್ತಾನೆ ಎಂದು ಹೇಳಿದ್ದಾನೆ. ಸಾಯುವ ಕ್ಷಣದಲ್ಲೂ ಬೆಚ್ಚಿ ಬಿಳುತ್ತಿದ್ದನಂತೆ ಬೀಳುತ್ತಿದ್ದನಂತೆ.
ತಕ್ಷಣವೇ ಸಾವು ಬದುಕಿನೋಡನೆ ಹೋರಾಡುತ್ತಿದ್ದ ಅಜಿತ್ ನನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಉಸಿರುಚಲ್ಲಿದ್ದಾನೆ.
ಕೈ ತುಂಬಾ ಸಂಬಳ.ನೆಮ್ಮದಿಯ ಬದುಕು ಒಡಹುಟ್ಟಿದ ಅಣ್ಣ ಹೆತ್ತವರ ಜೋತೆಗೆ ನೆಮ್ಮದಿಯ ಬದುಕು ದೂಡುತ್ತಿದ್ದ ಅಜಿತನ ಬಾಳಲ್ಲಿ ಬಿರುಗಾಳಿ ಬಿಸಿತ್ತು. ಒಳ್ಳೆಯ ಯುವಕನಾಗಿದ್ದ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗುವಂತದ್ದು ಏನಾಗಿತ್ತು. ಸಾಯುವಂತಹ ಪರಿಸ್ಥಿತಿಯಾದರು ಏನು.? ಎಂದು ಎಲ್ಲರೂ ಯೋಚಿಸುತ್ತಿರುವಾಲೇಅಜಿತ್ ಬರೆದು ತನ್ನ ಜೇಬಿನಲ್ಲಿಟ್ಟಿಕೊಂಡಿದ್ದ ಡೆತ್ ನೋಟ್ ಒಂದು ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಿತ್ತು.! ಆತ ಬರೆದಿಟ್ಟಿದ್ದ ಪತ್ರದ ಒಂದೊಂದು ಸಾಲು ಆತ್ಮಹತ್ಯೆಗೆ ಕಾರಣವನ್ನು ಹೇಳುತ್ತಾ ಹೊಯಿತು. ಅಜಿತ್ ಗಣಪತಿ ಇನ್ನೇನು ನಾನು ಸಾಯುತ್ತೇನೆ ಎಂದು ಗೊತ್ತಿದ್ದರೂ ಕಿರಣ್ ಗೌಡ ನನ್ನನ್ನು ಕೊಲ್ಲುತ್ತಾನೆ ಎಂದು ಹೇಳಿ ಭಯ ಪಡುತ್ತಿರುವುದನ್ನು ನೋಡಿದರೆ ಆತ್ಮಹತ್ಯೆಯ ಹಿಂದಿನ ಅಸಲಿ ಸತ್ಯ ಬಯಲಾಗಿತ್ತು. ಅಷ್ಟೇ ಅಲ್ಲದೆ ಅಜಿತ್ ತಾನು ಒಬ್ಬಳನ್ನು ಪ್ರೀತಿಸುತ್ತಿದ್ದ ಎನ್ನುವುದು ಕೂಡ ಬೆಳಕಿಗೆ ಬಂದಿತ್ತು.
ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ ಈತನಿಗೆ ಮಾರ್ಗದಲ್ಲಿ ಬಸ್ಸು ಓಡಿಸುತ್ತಿರುವಾಗಲೇ ಪರಿಚಯವಾದವಳೇ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮ ಎಂಬಾಕೆ? ಇವರ ಪರಿಚಯ ಪ್ರೀತಿಗೆ ತಿರುಗಿದೆ. ಅಜಿತ್ ಸಂಪೂರ್ಣ ತನ್ನದೆಲ್ಲವನ್ನೂ ನಿನ್ನದೆ, ನನ್ನ ಸರ್ವಸ್ವವೂ ನಿನೆ ಎಂದು ಹಣ ಅಸ್ಥಿ ಬಂಗಾರವನ್ನೆಲ್ಲಾ ಆಕೆಗೆ ಧಾರೆ ಎರೆದಿದ್ದನಂತೆ. ತಾನು ದುಡಿಯುತ್ತಿದ್ದ ಹಣವನ್ನೇಲ್ಲಾ ಆಕೆಯ ಸೆರಗಿಗೆ ಸುರಿದಿದ್ದ .ಸಂಪೂರ್ಣವಾಗಿ ಅಕೆಯ ಗುಂಗಿನಲ್ಲೆ ಮುಳಿಗಿ ಹೋಗಿದ್ದ ಅಜಿತ್ ಮನೆಗೆ ಬಂದರೂ ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿ ಇರುತ್ತಿದ್ದನಂತೆ.! ದುಡಿದು ಮನೆಗೆ ಹಣಕೊಡುತ್ತಿದ್ದವನು ಅಕೆಯ ಸಂಪರ್ಕಕ್ಕೆ ಹೋದ ಮೇಲೆ ಒಂದು ರೂಪಾಯಿಯನ್ನು ಮನೆಗೆ ಕೊಡುತ್ತಿರಲಿಲ್ಲವಂತೆ.
ತನ್ನ ದುಡಿಮೆಯ ಹಣವನ್ನು ಆಕೆಗೆ ಸುರಿದದ್ದು ಸಾಲದೆಂದು ಮನೆಯಲ್ಲಿದ್ದ ಚಿನ್ನ, ಆಸ್ತಿ ಪತ್ರಗಳನ್ನು ಅಡವಿಟ್ಟು ಆಕೆಗೆ ಹಣ ನೀಡುತ್ತಿದ್ದನಂತೆ. ಇದನ್ನು ಅಜಿತ್ ಸಹೋದರನೇ ಹೇಳಿದ್ದಾರೆ.
ಅಜಿತ್ ತಾನು ಬೆಂಗಳೂರಿನಲ್ಲಿದ್ದಾಗ ಖರೀದಿಸಿದ್ದ ಕಾರನ್ನು ಕೂಡ ಇತ್ತೀಚೆಗೆ ಮಾರಾಟ ಮಾಡಿದ್ದನಂತೆ. ಆ ಹಣವನ್ನು ಏನು ಮಾಡಿದ ಎನ್ನುವುದೇ ಗೊತ್ತಾಗಲಿಲ್ಲ. ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಒಡವೆಗಳನ್ನು ಕೊಂಡೊಯ್ದು ಗಿರಿವಿ ಅಂಗಡಿಗಳಿಗೆ ಇಟ್ಟಿದ್ದಾನೆ. ಸ್ನೇಹಿತರು ಸಂಬಂಧಿಕರ ಹತ್ತಿರ ಲಕ್ಷಗಟ್ಟಲೆ ಸಾಲ ಮಾಡಿದ್ದಾನಂತೆ.! ಇದೆಲ್ಲವೂ ಅವನು ಸತ್ತ ಮೇಲೆ ಒಂದೊಂದಾಗಿ ಬಯಲಾಗುತ್ತಿದೆ. ಕೊನೆಯದಾಗಿ ಅವನ ಬಳಿ ಇದ್ದ ಸ್ಮಾರ್ಟ್ ಫೋನನ್ನು ಬಿಡದೆ ಮಾರಾಟ ಮಾಡಿದ್ದಾನೆಂದರೆ ಆಂಟಿಯ ಮೋಹದ ಮೋಡಿಗೆ ಯಾವ ಮಟ್ಟಕ್ಕೆ ಬಲಿಯಾಗಿದ್ದ ಎನ್ನುವುದನ್ನು ನೀವೆ ಯೋಚಿಸಿ. ಕೊನೆಯದಾಗಿ ಅಜಿತ್ ಯಾವ ಮಟ್ಟಕ್ಕೆ ಎಲ್ಲವನ್ನೂ ಕಳೆದುಕೊಂಡಿದ್ದನೆಂದರೆ ತನ್ನ ತಾಯಿಯ ಬಳಿ ಇದ್ದ ಕೀ ಪ್ಯಾಡ್ ಫೋನನ್ನು ಬಳಸುವ ಹಂತಕ್ಕೆ ಬಂದಿದ್ದ ಜೋತೆಗೆ ಎಲ್ಲವನ್ನೂ ಕಳೆದುಕೊಂಡಿದ್ದನಂತೆ..!!
ಎಲ್ಲವನ್ನೂ ಅಜಿತ್ ಪ್ರೀತಿಸಿದ ಹೆಂಗಸಿಗಾಗಿ ಸುರಿದು ನಮ್ಮನ್ನು ಬೀದಿಗೆ ತಂದು ನಿಲ್ಲಿಸಿ ಹೋಗಿದ್ದಾನೆ. ನಮಗೆ ಅನ್ಯಾಯವಾಗಿದೆ, ಎದೆ ಮಟ್ಟಕ್ಕೆ ಬೆಳೆದು ದುಡಿದು ಆಸರೆಯಾಗಿದ್ದ ಮಗ ಕೂಡ ಉಸಿರು ಚಲ್ಲಿದ್ದಾನೆ ನಮಗೆ ನ್ಯಾಯಬೇಕು. ಇಲ್ಲದಿದ್ದರೆ ನಮಗೂ ಆತ್ಮಹತ್ಯೆಯೇ ದಾರಿ ಎಂದು ಹೆತ್ತಕರಳು ಅಜಿತನ ತಾಯಿ ಸರೋಜಮ್ಮ ಅವರು ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತಿದ್ದದನ್ನು ನೋಡಿದರೆ ಎಂತವರ ಕರಳು ಹಿಂಡುವಂತಿತ್ತು.
ಅಜಿತ್ ಗಣಪತಿ ಬರೆದಿಟ್ಟು ಹೋಗಿದ್ದ ಡೆತ್ ನೋಟ್ ಮತ್ತು ಆತನ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಜೊತೆಗೆ ಮಹಿಳೆ ಬಿನ್ಯ ಬೋಜಮ್ಮ ಮತ್ತು ಕಿರನ್ ಗೌಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು ಅಜಿತ್ ಗಣಪತಿಗೆ ಯಾರಿಂದ ಮೋಸ ಆಗಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವ ಸತ್ಯ ಪೋಲಿಸರ ತನಿಖೆಯಿಂದ ಹೊರ ಬರಬೇಕಾಗಿದೆ.
ಸುಧೀರ್ ವಿಧಾತ, ಶಿವಮೊಗ್ಗ