ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯಿಂದಲೆ ಕರಾವಳಿ ಭಾಗದಲ್ಲಿ ಜನಪ್ರಿಯತೆ ಹೊಂದಿದ್ದ ಡಾ. ಸತೀಶ್ ಪೂಜಾರಿ ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿ ಇದ್ದಂತಹ ವ್ಯಕ್ತಿ ಡಾ.ಸತೀಶ್ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ
ಕುಂದಾಪುರ: ಶ್ರೀಮಾತಾ ಆಸ್ಪತ್ರೆಯ ವೈದ್ಯ. ಕರಾವಳಿಯ ಜನಪ್ರಿಯ ಗಾಯಕ ಡಾ.ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ
ಅಶ್ವಸೂರ್ಯ/ಶಿವಮೊಗ್ಗ: ಕುಂದಾಪುರದ ಕೋಟ ಶ್ರೀಮಾತಾ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಸತೀಶ್ ಪೂಜಾರಿ ಸಾಸ್ತಾನ(52) ಅವರು ಜುಲೈ,11 ರಂದು ಗುರುವಾರ ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಡಾ.ಸತೀಶ್ ಪೂಜಾರಿ ಹೆಸರಾಂತ ಇ.ಎನ್.ಟಿ ತಜ್ಞರಾಗಿದ್ದು, ಇವರು ಕುಂದಾಪುರ ಶ್ರಿಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಷನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಜೊತೆಗೆ ಹವ್ಯಾಸಿ ಗಾಯಕರಾಗಿದ್ದು ತಮ್ಮ ಗಾಯನದಿಂದಲು ಜನಪ್ರಿಯತೆ ಗಳಿಸಿದ್ದರು ಇವರು ಹಾಡಿದ ಹಾಡುಗಳು ಹಲವು ಭಕ್ತಿಗೀತೆಗಳು ಮತ್ತು ಆಲ್ಬಮ್ ಹಾಡುಗಳಿಗೆ ಧ್ವನಿಯಾಗಿದ್ದರು.
ಕೆಲವು ಕಿರುಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದ ವೈದ್ಯ ಸತೀಶ್ ಪೂಜಾರಿ ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರಗಳ ಕಡೆಗೆ ಹೆಚ್ಚು ಒಲವು ಹೊಂದಿದ್ದರು.
ಪಾದರಸದಂತ ಮನುಷ್ಯ ಯಾವುದೇ ಜನಪರ ಕಾರ್ಯವಿರಲಿ ಅಲ್ಲಿ ಡಾ.ಸತೀಶ್ ಪೂಜಾರಿ ಹಾಜರ್ ಎನ್ನುವಷ್ಟರ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಂತಹ ವೈದ್ಯ ಇಂದು ನಮ್ಮೊಂದಿಗೆ ಇಲ್ಲ. ಈ ಆಘಾತ ವೈದ್ಯಲೋಕಕ್ಕೆ ಅಲ್ಲ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಇದಗದಂತಹ ಡಾ.ಸತೀಶ್ ಪೂಜಾರಿ ಅವರನ್ನು ಕಳೆದುಕೊಂಡಿದ್ದು ಕರಾವಳಿಯ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ.!
ಅದರಲ್ಲೂ ಗಾಯನವೆಂದರೆ ಡಾ.ಸತೀಶ್ ಅವರಿಗೆ ಎಲ್ಲಿಲ್ಲದ ಅಸಕ್ತಿ.ಅದರಲ್ಲೂ ಹೆಸರಾಂತ ಹಿರಿಯ ಹಿನ್ನಲೆ ಗಾಯಕಿ ಎಸ್ ಜಾನಕಿಯವರನ್ನು ಕುಂದಾಪುರಕ್ಕೆ ಕರೆತಂದ ಹೆಗ್ಗಳಿಕೆ ಇವರದು.
ನನ್ನ ಹಾಡು ನನ್ನದು’ ಎಂಬ ಕಾರ್ಯಕ್ರಮದ ಮೂಲಕ ಕುಂದಾಪುರದಲ್ಲಿ ಜನಮನ ಗಳಿಸಿದ್ದರು ಡಾ. ಸತೀಶ್ ಪೂಜಾರಿ.
ಜಾನಕಿ ಅವರ ಕಟ್ಟಾ ಅಭಿಮಾನಿಯಾಗಿದ್ದ ಸತೀಶ್ ಅವರು ಪ್ರತೀ ವರ್ಷ ಕೋಟೇಶ್ವರದಲ್ಲಿ ಡಾ ಎಸ್ ಜಾನಕಿ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಮನಸ್ಮಿತಾ ಫೌಂಡೇಷನ್ ಮೂಲಕ ಸಮಾಜ ಸೆವೆಯಲ್ಲೂ ತಮ್ಮನ್ನೂ ತೊಡಗಿಸಿಕೊಂಡಿದ್ದಂತಹ ಡಾ. ಸತೀಶ್ ಪೂಜಾರಿ ಅವರನ್ನು ಕಳೆದುಕೊಂಡ ಕರಾವಳಿ ಕುಂದಾಪುರದಲ್ಲಿ ದುಃಖದ ಜೋತೆಗೆ ಸೂತಕದ ಛಾಯೆ ಆವರಿಸಿದೆ
ಸತೀಶ್ ಪೂಜಾರಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಬಂಧು ಬಳಗದವರ ಜೊತೆಗೆ ಅಪಾರ ಸ್ನೇಹಿತರ ಬಳಗವನ್ನು ಬಿಟ್ಟು ಅಗಲಿದ್ದಾರೆ. ಡಾ. ಸತೀಶ್ ಪೂಜಾರಿ .ಇವರ ಅಗಲಿಕೆ ವೈದ್ಯಕೀಯ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ….🙏🙏
- – ಸುಧೀರ್ ವಿಧಾತ , ಶಿವಮೊಗ್ಗ