ಮಕ್ಕಳಾಗದೆ ಇರುವ ಕೊರಗಿತ್ತು ಅಳಿಯ ಪ್ರತಾಪನಿಗೆ :ಮಾಜಿ ಸಚಿವ ಬಿ ಸಿ ಪಾಟೀಲ್
ಅಶ್ವಸೂರ್ಯ/ಶಿವಮೊಗ್ಗ: ಮಾಜಿ ಸಚಿವ, ಕನ್ನಡ ಚಿತ್ರರಂಗದ ಹಿರಿಯ ನಟ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಅವರು ನಿನ್ನೆ ದಿವಸ ಹೊನ್ನಾಳಿ ಸಮೀಪ ರಸ್ತೆಯಲ್ಲೆ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ವಿಷ ಕುಡಿದು ಒದ್ದಾಡುತ್ತಿದ್ದ ಇತನನ್ನು ಸಹೋದರ ಪ್ರಭು ಗಮನಿಸಿದ್ದರು, ಇನ್ನೇನು ಗುಟುಕು ಜೀವ ಇದ್ದದ್ದರಿಂದ ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗುತ್ತಿತ್ತು ಆದರೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಉಸಿರು ಚಲ್ಲಿದ್ದಾರೆ ಪ್ರತಾಪ್.! ಪ್ರತಿಷ್ಠಿತ ಮನೆತನದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರಂತವೆ ಹೌದು.!
ಅಳಿಯನ ಸಾವಿನ ಸುದ್ದಿ ಕೇಳಿ ಶಿವಮೊಗ್ಗಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ಸಿ ಪಾಟೀಲ್ ದುಃಖ ದಲ್ಲು ಹೇಳಿಕೆ ನೀಡಿದ್ದರು, 2008ರಲ್ಲಿ ನನ್ನ ಪುತ್ರಿ ಸೌಮ್ಯ ಜೊತೆ ಪ್ರತಾಪ್ ಕುಮಾರ್ ವಿವಾಹವಾಗಿತ್ತು ನನ್ನ ವ್ಯವಹಾರ ,ರಾಜಕೀಯ ಸೇರಿದಂತೆ ಎಲ್ಲವನ್ನು ಪ್ರತಾಪ್ ಮನೆ ಮಗನಂತೆ ನೋಡಿಕೊಳ್ಳುತ್ತಿದ್ದ. ಒಳ್ಳೆಯ ವ್ಯಕ್ತಿತ್ವದ ಹುಡುಗ. ಮದುವೆಯಾಗಿ 16 ವರ್ಷ ಕಳೆದರೂ ಇವರಿಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗು ಆತನಲ್ಲಿ ಇತ್ತು ಮಗುವನ್ನು ದತ್ತು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ನಮ್ಮ ಜೊತೆಯಲ್ಲೇ ಇದ್ದ ಪ್ರತಾಪ್ ನನ್ನ ಎಲ್ಲಾ ವ್ಯವಹಾರಗಳನ್ನು ಆತನೆ ನೋಡಿಕೊಳ್ಳುತ್ತಿದ್ದ. ಮನಸ್ಸಿನಲ್ಲಿ ಅದೇನು ತೀರ್ಮಾನ ಮಾಡಿಕೊಂಡಿದ್ದನೊ ಸೋಮವಾರ ( ಜುಲೈ, 8 ) ಬೆಳಿಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟಿದ್ದ. ಹೋಗಿ ಬರುತ್ತಾನೆ ಎಂದು ನಾವು ಅಂದುಕೊಂಡಿದ್ದೇವು ಆದರೆ ಮಧ್ಯಾಹ್ನ 1:30 ಸುಮಾರಿಗೆ ಪ್ರತಾಪ್ ಸಹೋದರ ಪ್ರಭುದೇವ್ ಅವರು ಕರೆಮಾಡಿ ಪ್ರತಾಪ್ ಏನಾದ್ರೂ ನಿಮಗೆ ಸಿಕ್ಕಿದ್ನಾ ಅಂತಾ ಕೇಳಿದ್ರು. ನನ್ನ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದಾನೆ ಅಂದೆ. ಅದೇನೋ ಮಾತ್ರೆ ತಗೊಂಡಿದ್ದಾನೆ ಅಂತ ಸುದ್ದಿಯಿದೆ. ಅವನ ಫೋನ್ ಸ್ವಿಚ್ ಆಫ್ ಆಗಿದೆ. ಕೂಡಲೇ ಮೊಬೈಲ್ ಟ್ರ್ಯಾಕ್ ಮಾಡಿ ಎಂದು ಪ್ರತಾಪ್ ಸಹೋದರ ಹೇಳಿದ್ರು.
ಪ್ರಭುದೇವ ಅವರ ಕರೆ ಬಂದ ಕೂಡಲೇ ಡಿಎಸ್ಪಿ ಮತ್ತು ಶಿವಮೊಗ್ಗ ಎಸ್‌ಪಿಗೆ ಕರೆಮಾಡಿ ಘಟನೆ ಬಗ್ಗೆ ತಿಳಿಸಿದ್ದೆ.
ನಂತರ ನಾನು ಪ್ರತಾಪ್‌ಗೆ ಕರೆ ಮಾಡಿದೆ ಅ ಸಮಯದಲ್ಲಿ ಪ್ರತಾಪ್ ಫೋನ್ ರಿಸೀವ್ ಮಾಡಿ ಮಾತನಾಡಿದ್ದ.! ಎಲ್ಲಿದಿಯಾ ಅಂತಾ ಕೇಳಿದಾಗ, ಹೊನ್ನಳ್ಳಿ-ಮಲೆಬೆನ್ನೂರು ಮಾರ್ಗದಲ್ಲಿ ಇದೀನಿ ಅಂತಾ ಹೇಳಿದರು. ಸ್ಪಷ್ಟವಾಗಿ ಮಾತನಾಡುತ್ತಿರಲಿಲ್ಲ. ಕರೆ ಸ್ವೀಕರಿಸಿದ ವಿಚಾರವನ್ನು ನಾನು ಪೊಲೀಸ್ ಸೇರಿದಂತೆ ಎಲ್ಲರಿಗೂ ತಿಳಿಸಿದೆ. ಈ ವೇಳೆ ಪ್ರಭು ಅವರು ದಾರಿಯಲ್ಲಿ ಬರುತ್ತಿದ್ದಾಗ ಪ್ರತಾಪ್ ಅವರ ಕಾರುನೋಡಿದ್ದಾರೆ. ಅಷ್ಟೋತ್ತಿಗಾಗಲೆ ವಿಷಸೇವಿಸಿದ್ದ ಕೂಡಲೇ ಅವರು ಹೊನ್ನಾಳಿಗೆ ಪ್ರತಾಪ್ ಅವರನ್ನು ಕರೆದುಕೊಂಡು ಹೋಗಿದ್ದರು ಪ್ರತಾಪ್ ತೀವ್ರ ಅಸ್ವಸ್ಥನಾಗಿದ್ದರಿಂದ ನೀವು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದರು. ದಾವಣಗೆರೆಗೆ ದೂರ ಆಗುತ್ತದೆ ಎನ್ನುವ ಕಾರಣಕ್ಕೆ ಕೂಡಲೇ ಶಿವಮೊಗ್ಗಕ್ಕೆ ದಾಖಲಿಸಲು ಪ್ರಭು ಮುಂದಾದರು. ಶಿಕಾರಿಪುರದ ಹತ್ತಿರ ಬರುವಾಗ ದಾರಿ ಮಧ್ಯೆ ಪ್ರತಾಪ್ ಮೃತಪಟ್ಟರು.
ಪ್ರತಾಪ್ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವು ಇತ್ತು. ಲಿವರ್ ಹೋಗಿತ್ತು. ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ಆದರೆ ಮತ್ತೆ ಕುಡಿಯುವುದಕ್ಕೆ ಶುರುಮಾಡಿದ್ದ. ನಾನು ಈ ರೀತಿ ಕುಡಿಯಬಾರದು ಎಂದು ಎಷ್ಟೋ ಬಾರಿ ಹೇಳಿದ್ದೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಕುಡಿತದ ದಾಸನಾಗಿದ್ದ . ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರು ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗುತ್ತಿದ್ದರು ಎಂದು ಬಿಸಿ ಪಾಟೀಲ್ ಅಳಿಯನನ್ನು ನೆನೆದು ದುಃಖದಲ್ಲೇ ಹೇಳಿದರು.