50 ಜನರನ್ನು ಮದುವೆಯಾಗಿ ವಂಚನೆ ಮಾಡಿದ ಕಿಲಾಡಿ ಲೇಡಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ..!

50 ಜನರನ್ನು ಮದುವೆಯಾಗಿ ಮೋಸಮಾಡಿದ ಕಿಲಾಡಿ ಲೇಡಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ..!

ಅಶ್ವಸೂರ್ಯ/ಶಿವಮೊಗ್ಗ:ಈ ಪ್ರಕರಣ ನೆಡೆದದ್ದು ಪಕ್ಕದ ರಾಜ್ಯ ತಮಿಳುನಾಡಿನಲ್ಲಿ, ಹಣದ ಆಸೆಗೆ ಮಹಿಳೆಯೊಬ್ಬಳು ಬರೋಬ್ಬರಿ 40 ರಿಂದ 50 ಜನರನ್ನು ವಿವಾಹವಾಗಿ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಹಣದ ದುರಾಸೆಗೆ ಮದುವೆಯಾಗಿ ವಂಚಿಸುವುದನ್ನೇ ದಂಧೆ ಮಾಡಿಕೊಂಡಿದ್ದ ಕಿಲಾಡಿ ಲೇಡಿ ಒಬ್ಬಳು ಮದುವೆಯಾಗಿ ಸ್ವಲ್ಪ ದಿನದನಂತರ ಮನೆಯಲ್ಲಿರುವ ದುಡ್ಡು, ಬಂಗಾರ ಬೆಲೆಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್‌ ಆಗುತ್ತಿದ್ದಳಂತೆ.! ಈಗ ಈ ಕಿಲಾಡಿ ಲೇಡಿ ಪೊಲೀಸರ ಅತಿಥಿಯಾಗಿದ್ದಾಳೆ. ಈಕೆ ಮೊದಲು ಮದುವೆ ಆಗುವುದು, ನಂತರ ಗಂಡನ ಮನೆಯ ದುಡ್ಡು-ಬಂಗಾರವನ್ನು ದೋಚಿ ಪರಾರಿ ಆಗುವುದನ್ನೆ ಕಾಯಕ ಮಾಡಿಕೊಂಡಿದ್ದಳು.ನಂತರ ಕೆಲವು ದಿನಗಳ ಬಳಿಕ ಮತ್ತೊಬ್ಬರನ್ನು ಬಲೆಗೆ ಬಿಡಿಸಿಕೊಂಡು ಆತನ ಜೊತೆಗೆ ಮದುವೆ ಆಗುವುದು. ಹೀಗೆ ಮಹಾನ್ ಕಿಲಾಡಿ ಲೇಡಿ ಬರೋಬ್ಬರಿ ಅಂದಾಜು 40 ರಿಂದ 50 ಜನರನ್ನು ಮದುವೆಯಾಗಿ ವಂಚಿಸಿ ಕೊನೆಗೂ ಪೋಲಿಸರ ಅತಿಥಿಯಾಗಿದ್ದಾಳೆ.!   

ಈಕೆ ಪೋಲಿಸರ ಅತಿಥಿಯಾಗಿದ್ದು ಹೇಗೆ.?

ತಮಿಳುನಾಡಿನ ತಿರುಪುರದ 35 ವರ್ಷದ ಯುವಕನೊಬ್ಬನಿಗೆ ಆನ್‌ಲೈನ್‌ ಮ್ಯಾರೇಜ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಧ್ಯಾ (30) ಎಂಬಾಕೆ ಪರಿಚಯವಾಗಿತ್ತು. ಪರಿಚಯದ ನಂತರ ಕೇಲವೆ ದಿನಗಳಲ್ಲಿ ಮದುವೆಯ ಹಂತಕ್ಕೆ ಬಂದು ತಲುಪಿತ್ತು.! ಇತ್ತೀಚೆಗಷ್ಟೇ ಇಬ್ಬರು ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ ಮದುವೆಯಾದ ಹುಡುಗನಿಗೆ. ನಂತರ ಆತ ಸಂಧ್ಯಾಳ ಆಧಾರ್‌ ಕಾರ್ಡ್‌ ಪರಿಶೀಲಿಸಿದ್ದಾನೆ. ಆಧಾರ್‌ ಕಾರ್ಡ್‌ನಲ್ಲಿ ಸಂಧ್ಯಾಳ ಪತಿಯ ಹೆಸರನ್ನು ಕಂಡು ಮದುವೆಯಾದ ಹುಡುಗನಿಗೆ ಆಘಾತವಾಗಿದೆ.ನನಗೆ ಮೋಸಮಾಡಿದ್ದಾಳೆಂದು ಇವಳನ್ನು ಸುಮ್ಮನೆ ಬಿಡಬಾರದು ಎಂದು ಆತ ಕೂಡಲೇ ತಾರಾಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ತಮಿಳುನಾಡಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ʼ‌ದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ (30) ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದ. ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬೆಚ್ಚಿಬಿದ್ದ ಯುವಕ ತಕ್ಷಣ ಸಂಧ್ಯಾಳ ಆಧಾರ್‌ ಕಾರ್ಡ್‌ ಪರಿಶೀಲಿಸಿದ್ದಾನೆ.! ಅಲ್ಲಿ ಕಾದಿತ್ತು ಆಘಾತಕಾರಿ ವಿಷಯ.! ಆಧಾರ್‌ ಕಾರ್ಡ್‌ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇತ್ತು.! ನನಗೆ ವಂಚನೆ ಮಾಡಿದ್ದಾಳೆ ಎಂದು ಗೊತ್ತಾದ ಕೂಡಲೇ ಯುವಕ ಸೀದಾ ಹೋಗಿ ತಾರಾಪುರಂ ಪೊಲೀಸ್‌ ಠಾಣೆಗೆ ದೂರನ್ನು ದಾಖಲಿಸಿದ್ದ .ತಕ್ಚಣ ಸಂಧ್ಯಾಳನ್ನು ಬಂಧಿಸಿದ ಪೋಲಿಸರೆ ಆಕೆಯ ವಂಚನೆಯ ಹಾದಿಕಂಡು ಬೆಚ್ಚಿಬಿದ್ದು ಹೋಗಿದ್ದಾರೆ…

ತಕ್ಷಣ ಕಾರ್ಯಪ್ರೌವೃತ್ತರಾದ ಪೊಲೀಸರು ಸಂಧ್ಯಾಳನ್ನು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಆ ಸಂಧರ್ಭದಲ್ಲಿ ಆಕೆಯ ಭಯಾನಕ ವಂಚನೆಗಳ ಸರಮಾಲೆಯನ್ನೆ ಬಾಯಿಬಿಟ್ಟಿದ್ದಾಳೆ.! ಈಕೆ ವಂಚನೆಗೆ ಹುಡುಕಿಕೊಂಡ ದಾರಿಯನ್ನು ಕೇಳಿದ ಪೋಲಿಸರೆ ಒಂದೊಮ್ಮೆ ದಂಗುಬಡಿದು ಹೋಗಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಸಹ ಇದೆಯಂತೆ.! ನಂತರ ತನ್ನ ಮೊದಲ ಪತಿಯಿಂದ ದೂರವಾದ ಈಕೆ ಹಣದಾಸೆಗೆ ಅವಿವಾಹಿತ ಹುಡುಗರನ್ನೇ ಟಾರ್ಗೆಟ್‌ ಮಾಡುತ್ತಿದ್ದಳಂತೆ. ಮದುವೆಯ ಮೇಲೆ ಮದುವೆಯಾಗಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣ ಕದ್ದು ಎಸ್ಕೇಪ್‌ ಆಗುತ್ತಿದ್ದಳಂತೆ.ಇವಳ ವಂಚನೆಯ ಬಲೆಗೆ ಸಿಕ್ಕವರ ಲಿಸ್ಟ್ ನಲ್ಲಿ ಉನ್ನತ ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಈಕೆ ಬರೋಬ್ಬರಿ 40 ರಿಂದ 50 ಜನರಿಗೆ ವಂಚಿಸಿದ್ದಾಳಂತೆ.! ಕೊನೆಗೂ ಈಕೆಯ ಸರಣಿ ವಂಚನೆಗಳು ಬಯಲಾಗಿದ್ದು,ಇದೀಗ  ಪೊಲೀಸರ ಅತಿಥಿಯಾಗಿದ್ದಾಳೆ.

Leave a Reply

Your email address will not be published. Required fields are marked *

Optimized by Optimole
error: Content is protected !!