ಯುವತಿಯೊಬ್ಬಳಿಗೆ ತಲೆಬಾಗಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಾದಿತ್ತು ನಿರಾಸೆ.! ತಲೆ ಎತ್ತಿ ನೋಡಿದಾಗ ಎದಿರುಗಿದ್ದ ಗೆಳತಿ ನಾಪತ್ತೆ!
ಅಶ್ವಸೂರ್ಯ/ಶಿವಮೊಗ್ಗ
ವಿದೇಶಿ ಸುದ್ದಿ –
ಪ್ಯಾರಿಸ್: ತಾನೀಷ್ಟ ಪಟ್ಟ ಗೆಳತಿಯೊಬ್ಬಳು ಸುಂದರಣ ತಾಣಕ್ಕೆ ಹೊಗಿರುವುದನ್ನು ತಿಳಿದು ಹುಡುಗನು ಅಲ್ಲಿಗೆ ತೆರಳಿದ್ದಾನೆ. ಅ ಪ್ರವಾಸಿ ತಾಣದಲ್ಲಿ ಅವಳಿದ್ದ ಸ್ಥಳಕ್ಕೆ ಹೋಗಿ ನೂರಾರು ಪ್ರವಾಸಿಗರ ಮುಂದೆ ಮಂಡಿಯೂರಿ ತಲೆಬಾಗಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ನಿರೀಕ್ಷೆ ಇಟ್ಟುಕೊಂಡು ಪ್ರಪೋಸ್ ಮಾಡಿದ ಗೆಳಯನಿಗೆ ನಿರಾಸೆ ಕಾದಿತ್ತು.!
Instagram post ನಿಂದ…
ಕಾರಣ ತಲೆ ಎತ್ತಿ ನೋಡಿದಾಗ ಎದುರಿಗಿದ್ದ ಗೆಳತಿ ಕಣ್ಮರೆಯಾಗಿದ್ದಳು.!
ತಾನೀಷ್ಟ ಪಟ್ಟ ಗೆಳತಿಗೆ ತಾನು ಪ್ರೀತಿಸುತ್ತಿರುವುದನ್ನು ಹೇಳಿಕೊಳ್ಳುವುದು ಪ್ರತಿಯೊಬ್ಬ ಹುಡುಗರಿಗು ದೊಡ್ಡ ಸವಾಲೆ ಆಗಿರುತ್ತದೆ.ಹುಡುಗ ಪ್ರಪೋಸ್ ಮಾಡಿ ಹುಡುಗಿ ಒಪ್ಪಿಕೊಂಡರೆ ಸ್ವರ್ಗಕ್ಕೆ ಮೂರೇ ಗೇಣು,
ಆಕೆ ತಿರಸ್ಕರಿಸಿದರೆ ಬದುಕೆ ಗೋಳು. ತಾನು ಪ್ರೀತಿಸಿದವಳನ್ನು ಇಂಪ್ರೆಸ್ ಮಾಡಿ ಪ್ರಪೋಸ್ ಮಾಡಲು ಹಲವು ದಾರಿ ಹುಡುಕುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಣಯ ಹಕ್ಕಿಗಳ ನೆಚ್ಚಿನ ತಾಣವಾಗಿರುವ ಪ್ಯಾರಿಸ್‌ನಲ್ಲಿ ಗೆಳತಿ ಮುಂದೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗನಿಗೆ ನಿರಾಸೆ ಕಾದಿತ್ತು.! ಹುಡುಗಿಗೆ ಪ್ರವಾಸಿಗರ ಮುಂದೆಯೇ ತಲೆಬಾಗಿ ಪ್ರಪೋಸ್ ಮಾಡಿದ್ದಾನೆ.
ಆದರೆ ಫಲಿತಾಂಶ ಅಲ್ಲಿದ್ದ ಎಲ್ಲರಿಗೂ ಅಚ್ಚರಿಯ ಜೋತೆಗೆ ನೋವಾಗಿದೆ. ಕಾರಣ ಆತ ತಲೆ ಎತ್ತಿನೋಡಿದಾಗ ಎದುರಿಗೆ ಗೆಳತಿಯೇ ಇರಲಿಲ್ಲ. ಇದೇ ತಾಣಕ್ಕೆ ಹಲವು ಪ್ರವಾಸಿಗರು ಆಗಮಿಸಿದ್ದಾರೆ. ಕೆಂಪು ಬಣ್ಣದ ಉಡುಪು ಧರಿಸಿದ್ದ ಹುಡುಗ. ಗೆಳತಿ ಅ ಸ್ಥಳದ ಸುಂದರ ಸ್ಥಳಗಳ ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದಳು. ಈ ಸಂಧರ್ಭದಲ್ಲಿ ಹುಡುಗ ಧರಿಸಿದ್ದ ಸ್ಯೂಟ್ ಬಿಚ್ಚಿದ್ದಾನೆ. ಅತ್ತ ಗೆಳತಿ ಪ್ರಕೃತಿ ಸುಂದರ ಫೋಟೋ ತಗೆಯುತ್ತಾ ತಲ್ಲೀನನಾಗಿದ್ದಾಳೆ.
ಗೆಳೆಯ ಆಕೆಯ ಹಿಂಭಾಗದಲ್ಲಿ ಮಂಡಿಯೂರಿ ಒಂದು ಕೈಯಲ್ಲಿ ರಿಂಗ್ ಹಿಡಿದು ಕುಳಿತಿದ್ದಾನೆ.ಆಕೆಯನ್ನು ಹಿಂದಕ್ಕೆ ತಿರುಗಿ ನೋಡುವಂತೆ ಮಾಡಿದ್ದಾನೆ.ಆಕೆ ನೋಡುತ್ತಿದ್ದಂತೆ ಸಿನಿಮಾ ಸ್ಟೈಲ್ ನಲ್ಲಿ ಮಂಡಿಯೂರಿ ಕೈಚಾಚಿ ರಿಂಗ್ ಮುಂದಕ್ಕೆ ಹಿಡಿದು ಪ್ರಪೋಸ್ ಮಾಡಿದ್ದಾನೆ. ಇತ್ತ ನೆರೆದಿದ್ದ ಪ್ರವಾಸಿಗರು ಚಪ್ಪಾಳೆ ತಟ್ಟಲು ಆರಂಭಿಸಿದ್ದಾರೆ.
ಚಪ್ಪಾಳೆ ಸದ್ದಿಗೆ ಹಿಂತಿರುಗಿ ನೋಡಿದಾಗ ಗೆಳೆಯ ಪ್ರೇಮ ನಿವೇದನೆ ಮಾಡಿದ್ದ. ಒಂದು ಕ್ಷಣ ಆಕೆ ಗಾಬರಿಯಾಗಿದ್ದಾಳೆ. ಸುತ್ತ ನೋಡಿದ್ದಾಳೆ. ಆತಂಕ, ಹೆಚ್ಚಾಗಿದೆ. ಇತ್ತ ಗೆಳೆಯನಿಗೆ ಆತಂಕವೂ ಹೆಚ್ಚಾಗಿದೆ. ಎಲ್ಲಿ ತರಿಸ್ಕರಿಸುತ್ತಾಳೆ ಅನ್ನೋ ಭಯ.ಒಂದು ಕ್ಷಣ ಆಕೆ ಹುಡುಗನನ್ನು ಮೌನವಾಗಿ ದಿಟ್ಟಿಸಿ ನೋಡುತ್ತಾ ನಿಂತಿದ್ದಾಳೆ. ಪ್ರವಾಸಿಗರ ಚಪ್ಪಾಳೆ, ಶಿಳ್ಳೆ ಜೋರಾಗುತ್ತಿದ್ದ ಹಾಗೆ ಒಂದೆಡೆರು ಹೆಜ್ಜೆ ಮುಂದೆ ಬಂದ ಗೆಳತಿ ಒಂದೇ ಸಮನೆ ಅವನ್ನು ನೋಡಿ ಅಲ್ಲಿಂದ ಕಣ್ಮರೆಯಾಗಿದ್ದಾಳೆ.
ಗೆಳತಿಯ ನಡೆ ಈತನಿಗೆ ಅಚ್ಚರಿ ತಂದಿದೆ. ಜೊತೆಗೆ ಅಲ್ಲೆ ಅಳುತ್ತಾ ಕುಸಿದಿದ್ದಾನೆ. ತಕ್ಷಣವೇ ನೆರೆದಿದ್ದ ಪ್ರವಾಸಿಗರು ಆತನ ಬಳಿ ಬಂದು ಸಂತೈಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಗೆಳತಿಯ ತಪ್ಪಿಲ್ಲ. ಆಕೆಗೂ ಪ್ರೀತಿ ಇರುವ ಹಾಗಿದೆ ಅಲ್ಲಿ ತೋರಿದ ಆಕೆಯ ನಡವಳಿಕೆಯಿಂದ ತಿಳಿಯುತ್ತದೆ.?
ಹುಡುಗಿ ಈ ಸಂದರ್ಭದಲ್ಲಿ ಮಾನಸಿಕವಾಗಿ ಸಿದ್ಧವಾಗಿಲ್ಲ. ಈ ಕುರಿತು ಆಕೆ ಆಲೋಚಿಸಿರಲು ಸಾಧ್ಯವಿರಲಿಲ್ಲ. ಆಕೆಗೆ ಯೋಚಿಸಿ ತಿರ್ಮಾನಿಸಲು ಕೆಲ ದಿನಗಳ ಸಮಯ ಅವಶ್ಯಕತೆ ಇರಬಹುದು. ಅಲ್ಲಿದ್ದವರು ಯವಕನಿಗೆ ಸಮಾಧಾನ ಹೇಳಿದ್ದಾರೆ.