ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ ವಿಜಯ ಸಾಧಿಸಿದ ಶ್ರೀನಿವಾಸ.ಎಸ್‌.ಎ (SAS) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ ವಿಜಯ ಸಾಧಿಸಿದ ಶ್ರೀನಿವಾಸ್. ಎಸ್‌.ಎ (SAS) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

 ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಶನಿವಾರ ಮುಗಿದಿದ್ದು ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ವಕೀಲರಾದ ಶ್ರೀನಿವಾಸ್ ಎಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ ಶ್ರೀನಿವಾಸ್ ಎಸ್ ಎ ಅವರು ಒಟ್ಟು 428 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿಗಳಾದ ಕೆ.ಎಸ್.ದೇವರಾಜ್ ಅವರು 204 ಮತಗಳು ಮತ್ತು ಜಿ.ಎಸ್.ಶಿವಪ್ಪ 96 ಮತಗಳನ್ನು ಪಡೆದಿದ್ದಾರೆ. ಶ್ರೀನಿವಾಸ್ ಎಸ್ ಎ ಅವರು ಒಟ್ಟು 224 ಮತಗಳ ಅಂತರದಲ್ಲಿ ಜಯ ಸಾಧಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ  ಅಧ್ಯಕ್ಷರಾಗಿ ಜಿ ಆರ್ ರಾಘವೇಂದ್ರ ಅವರು ಆಯ್ಕೆಯಾಗಿದ್ದು ಇವರು 561 ಮತ ಪಡೆದು ವಿಜಯ ಸಾಧಿಸಿದ್ದಾರೆ ಇವರ ಪ್ರತಿಸ್ಪರ್ಧಿಗಿಂತ ಇವರು 388 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ ಮತ್ತು ಖಜಾಂಚಿ ಸ್ಥಾನದ ಚುನಾವಣೆಯಲ್ಲಿ ಮಾಲ್ತೇಶ್‌ ಆಯ್ಕೆಯಾಗಿದ್ದು ಇವರು 366 ಮತಗಳನ್ನು ಪಡೆದು ವಿಜಯ ಸಾಧಿಸಿದರೆ ಪ್ರತಿಸ್ಪರ್ಧಿಗಳಾದ ಕೆ.ಎಸ್.ಉಮೇಶ್‌ ಅವರನ್ನು ಸೋಲಿಸಿದ್ದಾರೆ. 

ನಿರ್ದೇಶಕರಾಗಿ ಗೆಲುವು ಸಾಧಿಸಿದವರ ವಿವರ ಈ ರೀತಿ ಇದೆ.
  ನಿರಂಜನ್‌ ಮೋಹಿತೆ.ಹೆಚ್‌  421 ಮತಗಳು, ಹೆಚ್.ಎಂ.ಜನಾರ್ದನ್‌ 417ಮತಗಳು,  ಅತಾವುಲ್ಲಾ ಖಾನ್‌ 376 ಮತಗಳು ಕಿಲಕ ಕುಮಾರಿ.ಎಂ 371ಮತಗಳು, ನಂದಿನಿ ದೇವಿ.ಎನ್‌.ಆರ್‌ 349 ಮತಗಳು, ಜಗದೀಶ್‌.ಎಂ 249 ಮತಗಳನ್ನ ಪಡೆದಿದ್ದಾರೆ. 

Leave a Reply

Your email address will not be published. Required fields are marked *

Optimized by Optimole
error: Content is protected !!