ಹಾವೇರಿ ಸಮೀಪ ಹೆದ್ದಾರಿ ಅಪಘಾತದಲ್ಲಿ ಮೃತರಾದ 13 ಮಂದಿಯ ಕುಟುಂಬದವರಿಗೆ ತಲಾ ಒಂದೊಂದು ಲಕ್ಷ ವ್ಯಯಕ್ತಿಕ ಪರಿಹಾರದ ಹಣವನ್ನು ವಿತರಿಸಲಿರುವ ಗೀತಾ ಶಿವರಾಜಕುಮಾರ್ ದಂಪತಿಗಳು

ಅಂದು ಭರವೆಸೆ ನೀಡಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಗಾರಪ್ಪನವರು

ಹಾವೇರಿ ಸಮೀಪ ಹೆದ್ದಾರಿ ಅಪಘಾತದಲ್ಲಿ ಮೃತರಾದ 13 ಮಂದಿಯ ಕುಟುಂಬದವರಿಗೆ ತಲಾ ಒಂದೊಂದು ಲಕ್ಷ ವ್ಯಯಕ್ತಿಕ ಪರಿಹಾರದ ಹಣವನ್ನು ವಿತರಿಸಲಿರುವ ಗೀತಾ ಶಿವರಾಜಕುಮಾರ್ ದಂಪತಿಗಳು

ಅಶ್ವಸೂರ್ಯ/ಶಿವಮೊಗ್ಗ: ಇತ್ತೀಚಿಗೆ ಹಾವೇರಿಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನ ಮೃತರಾಗಿದ್ದರು,ಉಳಿದಂತೆ ನಾಲ್ಕು ಜನ ತೀವ್ರ ಗಾಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗ ಇವರಲ್ಲಿ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಇನ್ನಿಬ್ಬರು ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕುಟುಂಬಕ್ಕೆ ಸಂತಾಪ ಸೂಚಿಸಲು ಮಾನ್ಯ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ದಿನಾಂಕ-29-6-24 ಮೃತರ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಹೇಳಿದ್ದರು ಜೊತೆಗೆ ಶ್ರೀಮತಿ ಗೀತಾ ಶಿವರಾಜಕುಮಾರ್ ರವರು ಮೃತರಾದ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಮೃತರ ಕುಟುಂಬಕ್ಕೆ ಸಹಾಯದ ರೂಪದಲ್ಲಿ ವ್ಯಯುಕ್ತಿಕ ಪರಿಹಾರ ನೀಡಲು
ನಾಳೆ ಸೋಮವಾರ ಬೆಳಗ್ಗೆ 11:30ಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಎಮ್ಮೆ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಾನ್ಯ ಸಚಿವರು ನೀಡಿದ ಭರವಸೆಯಂತೆ ಮೃತ ಕುಟುಂಬದ ಸದಸ್ಯರಿಗೆ ವೈಯಕ್ತಿಕ ಪರಿಹಾರ ಧನವನ್ನು ಹಸ್ತಾಂತರಿಸಲಿದ್ದು ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿರುತ್ತಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!