ಪೂಜಾ ನಾಪತ್ತೆ ಪ್ರಕರಣಕ್ಕೆ ತಿರುವು ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: one way love ಗೆ ಹತ್ಯೆಯಾದ ಪೂಜಾ.!?

ಪೂಜಾ ನಾಪತ್ತೆ ಪ್ರಕರಣಕ್ಕೆ ತಿರುವು ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: one way love ಗೆ ಹತ್ಯೆಯಾದ ಪೂಜಾ.!?

ಜೂನ್ 30 ರಂದು ನಾಪತ್ತೆಯಾಗಿದ್ದ 24 ವರ್ಷದ ಯುವತಿ ಪೂಜಾ ಕೊಲೆಯಾಗಿರುವ ಘಟನೆ ಆಗುಂಬೆಯ ಕವಲೇಗುಡ್ಡದ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಹತ್ಯೆಯಾದ ಪೂಜಾಳ ಸ್ನೇಹಿತನೆ ಈಕೆಯ ಹತ್ಯೆಯನ್ನು ಮಾಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ವಸೂರ್ಯ/ಶಿವಮೊಗ್ಗ : ಆಗುಂಬೆ ರಾಣೆಯ ಸರಹದ್ದಿನ ಹೊಸೂರು ಗ್ರಾಮದ ಕುಶಾಲ್ ಎಂಬುವರ ಮಗಳು ಪೂಜಾ (24) ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದಳು. ಪೂಜಾ ಜೂನ್‌ 30ರಂದು ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ಹಿಂದುರುಗಿ ಬಂದಿರಲಿಲ್ಲ ಮಗಳಿಗಾಗಿ ಎಷ್ಟೇ ಹುಡುಕಿದರು ಎಲ್ಲೂ ಪತ್ತೆಯಾಗದ ಕಾರಣ ಪೂಜಾ ಪೋಷಕರು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಆಗುಂಬೆ ಠಾಣೆಯ ಪೋಲಿಸ್ ಅಧಿಕಾರಿಗಳು ಯುವತಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದರು ಜುಲೈ 7ರಂದು ಯುವತಿ ಪೂಜಾ ಕವಲೇ ಗುಡ್ಡದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯ ನಾಲೂರು ಸಮೀಪದ ಕವಲೇ ಗುಡ್ಡದ ಅರಣ್ಯ ಪ್ರದೇಶದ ನಿರ್ಜನ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪೂಜಾ ಶವ ಪತ್ತೆಯಾಗಿದೆ.ಈಕೆಯನ್ನು ಬರ್ಬರವಾಗಿ ಹತ್ಯೆಮಾಡಿ ಅರಣ್ಯ ಪ್ರದೇಶದ ನಿರ್ಜನ ಸ್ಥಳದಲ್ಲಿ ಶವವನ್ನು ಬೀಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಯಾದ ಪೂಜಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಜೂನ್ 30 ರಂದು ಪೂಜಾ ಕೆಲಸ ನಿಮಿತ್ತವಾಗಿ ಮನೆಯಿಂದ ಹೊರಗೆ ಹೋದವಳು ನಾಪತ್ತೆಯಾಗಿದ್ದಳು.

ಈ ಪ್ರಕರಣ ಸಂಬಂಧ ಆಗುಂಬೆ ಪೊಲೀಸರು ನಾಲೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮಾಜಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಮಗ ಮಣಿಕಂಠ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಡಬ್ಬಲ್ ಬ್ರಿಡ್ಜ್ ವಾಸಿ ಮಣಿಕಂಠ ಪೂಜಾಳನ್ನು ಪ್ರಿತಿಸುತ್ತಿದ್ದ ಎನ್ನುವ ಮಾತು ಕೇಳಿಬರುತ್ತಿದ್ದು ಈ ವಿಚಾರವಾಗಿಯೆ ಆಕೆಯನ್ನು ಕವಲೇಗುಡ್ಡಕ್ಕೆ ಕರೆಸಿಕೊಂಡಿದ್ದಾನೆ ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿ ಮಣಿಕಂಠ ಪೂಜಾಳನ್ನು ಕೊಲೆ ಮಾಡಿರಬಹುದು.!? ಈ ಪ್ರಕರಣದ ಹಿನ್ನಲೆಯಲ್ಲಿ ವಶಕ್ಕೆ ಪಡೆದಿರುವ ಆರೋಪಿ ಮಣಿಕಂಠನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪೊಲೀಸರಿಗೆ ಸುಳಿವು ಸಿಕ್ಕಿದ್ದು ಹೇಗೆ

 ಆರೋಪಿ ಮಣಿಕಂಠನ ಸ್ನೇಹಿತ ಪ್ರವೀಣ್ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದರು ಈ ವೇಳೆ ಪೂಜಾ ನಾಪತ್ತೆಯಾದ ದಿನ ನಾನು ಹಾಗೂ ಮಣಿಕಂಠ ಜೊತೆಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದ .ಸಾಕಷ್ಟು ಅನುಮಾನವಿದ್ದ ಕಾರಣಕ್ಕೆ ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಮಣಿಕಂಠ ನನ್ನ ಕಾರನ್ನು ಕೊಂಡೊಯ್ದಿದ್ದ ಎನ್ನುವುದನ್ನು ಬಾಯಿಬಿಟ್ಟಿದ್ದ ಕಾರನ್ನು ಹಿಂದಿರುಗಿ ಮಣಿಕಂಠ ತರದ ಕಾರಣಕ್ಕೆ ನಾನು ಆತನ ಪಿಕ್ ಅಪ್ ವಾಹನದಲ್ಲಿ ಮಲಗಿಕೊಂಡಿದ್ದೆ ಎಂದು ಮಾಹಿತಿ ನೀಡಿದ್ದ. ಸ್ನೇಹಿತನ ಹೇಳಿಕೆ ಆಧಾರದ ಮೇಲೆ ಈ ಘಟನೆ ನೆಡೆದ ದಿನಗಳಿಂದ ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಮಣಿಕಂಠನನ್ನು ಠಾಣೆಗೆ ಕರೆಯಿಸಿಕೊಂಡು ಪೊಲೀಸ್ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಪೂಜಾಳ ಹತ್ಯೆಯ ಕ್ರೈ ಸ್ಟೋರಿಯ ಅಷ್ಟು ಕಥೆಯನ್ನು ಆರೋಪಿ ಮಣಿಕಂಠ ಎಳೆ ಎಳೆಯಾಗಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ.

ಹತ್ಯೆಗೂ ಮುನ್ನ ಪೂಜಾಳ ಮೊಬೈಲ್ ಪೋನ್ ಗೆ ಕರೆ ಮಾಡಿದ ಆರೋಪಿ ಮಣಿಕಂಠ ಆಕೆಯನ್ನು ತಾನಿದ್ದ ಸ್ಥಳಕ್ಕೆ ಕರೆಯಿಸಿಕೊಂಡಿದ್ದನಂತೆ.! ಆರೋಪಿಯು ಅಲ್ಲಿಂದ ಕಾರಿನಲ್ಲಿ ಪೂಜಾಳನ್ನು ಕುರಿಸಿಕೊಂಡು ನಾಲೂರು ಕೊಳಿಗೆ ಗ್ರಾಮದ ಕವಲೇಗುಡ್ಡದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಇಬ್ಬರ ನಡುವೆ ಎನಾಯಿತೊ.!? ಮಣಿಕಂಠ ಪೂಜಾಳ ಕತ್ತು ಹಿಸುಕಿ ಹತ್ಯೆಮಾಡಿ ಮುಗಿಸಿದ್ದ.! ಆಕೆಯ ಉಸಿರು ನಿಲ್ಲಿಸಿದ ನಂತರದಲ್ಲಿ ಆರೋಪಿ ಮಣಿಕಂಠ ಮೃತ ದೇಹವನ್ನು ಕವಲೇಗುಡ್ಡದ ಅರಣ್ಯ ಪ್ರದೇಶದ ನಿರ್ಜನ ಸ್ಥಳಕ್ಕೆ ಪೂಜಾಳ ಮೃತದೇಹವನ್ನು ಗುಡ್ಡದ ಮೇಲಿಂದ ಕೆಳಕ್ಕೆ ಎಸೆದಿದ್ದ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ. ಇತನ ಹೇಳಿಕೆ ಆಧಾರದ ಮೇಲೆ ಪೊಲೀಸರು ಆರೋಪಿ ಮಣಿಕಂಠನನ್ನು ಭಾನುವಾರ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು ಈ ವೇಳೆ ಪೂಜಾಳ ಮೃತದೇಹವು ಮರವೊಂದರ ರಂಬೆಗೆ ಸಿಲುಕಿ ಕೊಂಡು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆರೋಪಿ ಮಣಿಕಂಠ ಪೂಜಾಳ ತಂದೆಯ ಪರಿಚಯಸ್ತ

ಹತ್ಯೆಯಾದ ಯುವತಿ ಪೂಜಾಳ ತಂದೆ ಕುಶಾಲ್‌ ಅವರಿಗೆ ಪರಿಚಯವಿದ್ದ ಮಣಿಕಂಠ ಎಂಬುವವನೇ ಕೂಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಮಣಿಕಂಠ ಒಪ್ಪಿಕೊಂಡಿದ್ದಾನಂತೆ.!

ನಾಪತ್ತೆಯಾದ ಪೂಜಾಳ ಹುಡುಕಾಟಕ್ಕೆ ಮುಂದಾದ ಪೋಲಿಸರ ತಂಡ

ತೀರ್ಥಹಳ್ಳಿ ತಾಲೂಕು ಆಗುಂಬೆಯ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕುಶಾಲ್ ರವರ ಮಗಳು ಪೂಜಾ (24) ಜೂನ್ 30 ರಂದು ಕೆಲಸದ ನಿಮಿತ್ತ ಹೊದವಳು ನಾಪತ್ತೆಯಾಗಿದ್ದಳು. ಆಗುಂಬೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ತಾಲ್ಲೂಕು ಉಪಾಧೀಕ್ಷಕರಾದ ಗಜಾನನ ವಾಮನ ಸುತಾರ ಅವರ ಸೂಚನೆಯಂತೆ ಆಗುಂಬೆ ವೃತ್ತ ನೀರಿಕ್ಷಕರಾದ ಶ್ರೀಧರ್ ನಾಯಕ್ ಹಾಗೂ ಪಿಎಸ್ಐ ರಂಗನಾಥ್ ಅಂತರಗಟ್ಟಿ ನೇತ್ರುತ್ವದ ಪೋಲಿಸರ ತಂಡ ನಾಪತ್ತೆಯಾದ ಪೂಜಾಳ ಶೋಧನ ಕಾರ್ಯಚರಣೆಗೆ ಮುಂದಾಗಿದ್ದರು.. ಸಾಕಷ್ಟು ಮಾಹಿತಿಯ ಜೊತೆಗೆ ಕೆಲವು ಸಿಸಿ ಟಿವಿ ದೃಶ್ಯಾವಳಿಗಳನ್ನು ಕಲೆಹಾಕಿದ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದರು. ಈತನ ಹೇಳಿಕೆ ಆಧಾರದಲ್ಲಿ ತನಿಖೆ ಕೈಗೊಂಡ ಪೋಲಿಸರಿಗೆ ನಾಪತ್ತೆಯಾಗಿದ್ದ ಪೂಜಾ ಕವಲೇಗುಡ್ಡದ ಅರಣ್ಯ ಪ್ರದೇಶದಲ್ಲಿ ಹೆಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ನಾಲೂರು ಸಮೀಪದ ಮಣಿಕಂಠ ಎಂಬ ಆರೋಪಿ ಸ್ನೇಹಿತೆ ಪೂಜಾಳ ಕತ್ತು ಹಿಸುಕಿ ಸಾಯಿಸಿ ನಾಲೂರು ಸಮೀಪದ ಕವಲೇ ಅರಣ್ಯ ಪ್ರದೇಶದಲ್ಲಿ ಗುಡ್ಡದ ಮೇಲಿಂದ ಪೂಜಾಳ ಶವವನ್ನು ಕೆಳಕ್ಕೆ ಎಸೆದಿದ್ದನ್ನು ಆತ ಒಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ ನಂತರ ಆರೋಪಿ ಮಣಿಕಂಠನನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋದ ಪೋಲಿಸರು ಸ್ಥಳ ಮಹಜರು ಮಾಡಿ ಪೂಜಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆ ಕಳುಹಿಸಿಕೊಟ್ಟಿದ್ದರು.ಈ ಕಾರ್ಯಾಚರಣೆಯಲ್ಲಿ ಆಗುಂಬೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ನಾಯ್ಕ್ ಮತ್ತು ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ಪೋಲಿಸರ ತಂಡ ದಕ್ಷತೆ ಮೆರೆದು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ

ಪೂಜಾ ಹತ್ಯೆಯಾದ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶಿಲನೆ ನೆಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಐಪಿಎಸ್

ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪೂಜಾ ಎ. ಕೆ. 24 ವರ್ಷ, ಅಸಿಮನೆ, ಹೊಸೂರು ಗ್ರಾಮ ತೀರ್ಥಹಳ್ಳಿ ಈಕೆಯ ಕೊಲೆ ಪ್ರಕರಣದ (ಗುನ್ನೆ ಸಂಖ್ಯೆ 56/2024 ಕಲ 302 ಮತ್ತು 201 IPC ಕಾಯ್ದೆ ) ಕೃತ್ಯ ನಡೆದ ಸ್ಥಳ

ನಾಲೂರು ಕೊಳಿಗೆ ಗ್ರಾಮದ ಕವಲೇ ಗುಡ್ಡ ಅರಣ್ಯ ಪ್ರದೇಶಕ್ಕೆ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಯುವತಿಯ ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಪೂಜಾ (24) ಶವ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಆರೋಪಿ ಮಣಿಕಂಠ ಪೊಲೀಸರ ವಶದಲ್ಲಿದ್ದು ಪೂಜಾಳ ಶವದ ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!