“ವಿ.ಐ.ಎಸ್.ಎಲ್ ಪುನಶ್ಚೇತನ – ಇದೇ ನನ್ನ ವಾಗ್ದಾನ” : ಸಂಸದ ಬಿ ವೈ ರಾಘವೇಂದ್ರ
ಅಶ್ವಸೂರ್ಯ/ಭದ್ರಾವತಿ: ಶತಮಾನಗಳ ಇತಿಹಾಸವಿರುವ ನಮ್ಮ ಉಕ್ಕಿನ ನಗರಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇಂದು ಕಾರ್ಖಾನೆಯ ಆವರಣದ ಕಚೇರಿಯಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಭಾಗವಹಿಸಿ ಕಾರ್ಖಾನೆಯನ್ನು ವಿಕ್ಷೀಸಿ ಚರ್ಚಿಸಲಾಯಿತು.
ಒಂದು ಕಾಲದ ಸುಪ್ರಸಿದ್ಧ ಕಾರ್ಖಾನೆಯಲ್ಲಿ ಒಂದಾದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಬೇಕು ಇದರೊಂದಿಗೆ ಅದರ ಇತಿಹಾಸದ ಗತವೈಭವವನ್ನು ಮರಳಿ ದೊರಕಿಸಿಕೊಡಬೇಕು,ಇದನ್ನೆ ನಂಬಿ ಅವಲಂಬಿತವಾದ ಸಾವಿರಾರು ಕುಟುಂಬಗಳಿಗೆ ಉತ್ತಮ ರೀತಿಯ ಜೀವನೋಪಾಯ ಮರುಕಳಿಸಿ ಕೋಡಬೇಕಾಗಿದೆ, ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಧ್ವನಿಯಾಗಬೇಕು ಎಂಬ ನನ್ನ ಬದ್ಧತೆಯ ಮಾರ್ಗ ಸರಿ ದಾರಿಗೆ ಸಾಗುವವರೆಗೂ ವಿಶ್ರಾಂತಿ ಇಲ್ಲ ಎಂದು ಮತ್ತೊಮ್ಮೆ ವಾಗ್ದಾನ ಮಾಡುತ್ತಿದ್ದೇನೆ ಎಂದು ಅಭಿವೃದ್ಧಿಯ ಯುವ ಹರಿಕಾರ ಸಂಸದ ಬಿ ವೈ ರಾಘವೇಂದ್ರ ಮಾಧ್ಯಮದವರ ಮುಂದೆ ಹೇಳಿದ್ದಾರೆ.
ವಿಐಎಸ್ಎಲ್ ಕಾರ್ಖಾನೆಯನ್ನು ವೀಕ್ಷಣೆಮಾಡಿದ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯಕ್ ಮತ್ತು ಭದ್ರಾವತಿಯ ಶಾಸಕ ಬಿ ಕೆ ಸಂಗಮೇಶ್ವ ಮತ್ತು ಭೋಜೆಗೌಡ ಹಾಗೂ ಪ್ರಮುಖರಾದ ಮಂಗೋಟೆ ರುದ್ರೇಶ್, ಶ್ರೀ ಧರ್ಮ ಪ್ರಸಾದ್, ಶ್ರೀಮತಿ ಶಾರದಾ ಅಪ್ಪಾಜಿಗೌಡ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.