ಸಹೋದರನ ಹೆಂಡತಿಯ ಜೊತೆಯೇ ಸಂಬಂಧ ಬೆಳಸಿದ ನಾದಿನಿ.!!

ಸಹೋದರನ ಹೆಂಡತಿಯ ಜೊತೆಯೇ ಸಂಬಂಧ ಬೆಳಸಿದ ನಾದಿನಿ.!!

ಅಶ್ವಸೂರ್ಯ/ಚಂಡೀಗಡ : ತನ್ನ ಜೊತೆಗೆ ದೈಹಿಕ ಸಂಭಂದ ಬೆಳೆಸಿದ್ದ ಯುವತಿಯನ್ನೇ ತನ್ನ ಸೋದರನೊಂದಿಗೆ ಮದುವೆ ಮಾಡಿಸಿದ್ದಳು..! ಸೋದರನ ಹೆಂಡತಿಯಾಗಿ  ಬಂದ ಗೆಳತಿ ಜೊತೆಯಲ್ಲಿ ಕಾಜಲ್ ದೈಹಿಕ ಸಂಬಂಧ ಬೆಳೆಸುತ್ತಿದ್ದಳು. ಸಹೋದರನಿಗೆ ಮದುವೆ ಮಾಡಿಕೊಂಡು ಬಂದಿದ್ದರಿಂದ ಇಬ್ಬರ ಸೇರುವಿಕೆಯು ಸಲಿಸಾಗಿತ್ತು.

ಸಾಮಾನ್ಯವಾಗಿ ಕೇಲವು ಕುಟುಂಬದಲ್ಲಿ ಅತ್ತಿಗೆ ಮತ್ತು ನಾದಿನಿ ನಡುವೆ ಹೊಂದಾಣಿಕೆ ಸರಿ ಇರುವುದಿಲ್ಲ ಎನ್ನುವುದು ಸಾಕಷ್ಟು ಬಾರಿ ಕೇಳಿದ್ದೇವೆ ಆದರೆ ಹರಿಯಾಣದ ಯಮುನಾನಗರದಲ್ಲಿನ ಮನೆಯೊಂದರಲ್ಲಿ ಅತ್ತಿಗೆ ಮತ್ತು ನಾದಿನಿ ನಡುವೆ ನೀರಿಕ್ಷೆಗೂ ಮೀರಿದ ಹೊಂದಾಣಿಕೆ ಎನ್ನುವುದು ಬಯಲಾಗಿದೆ. ಸೋದರನ ಹಾಸಿಗೆಯ ಮೇಲೆಯೇ ಅತ್ತಿಗೆ ಜೊತೆ ನಾದಿನಿ ದೈಹಿಕ ಸಂಬಂಧ ಹೊಂದಿದ್ದಾಳೆ.!? ಆರಂಭದಲ್ಲಿ ಈ ಸಂಬಂಧ ಗುಟ್ಟಾಗಿಯೆ ಇತ್ತು. ಒಮ್ಮೆ ಅದು ಹೇಗೋ ಸಹೋದರ ಮತ್ತು ಆತನ ತಾಯಿಗೆ ಈ ವಿಷಯ ಗೊತ್ತಾಗಿ ಸಹೋದರಿಯಿಂದಲೇ ಇಂತಹ ನೀಚಾ ಕೇಲಸ ಮನೆಯಲ್ಲಿ ನೆಡೆದ ಹಿನ್ನಲೆಯಲ್ಲಿ ದೊಡ್ಡ ಜಗಳವೆ ನೆಡೆದುಹೊಗಿತ್ತು.! ಈ ಘಟನೆ ನೆಡೆದು ಕೇಲವು ದಿನಗಳ ನಂತರ ಮನೆಯಲ್ಲಿಯೇ ತಾಯಿ ಮತ್ತು ಮಗನ ಕೊಲೆಯೆ ನೆಡೆದುಹೊಗಿತ್ತು. ಕೊಲೆಯಾದ ಸಂದರ್ಭದಲ್ಲಿ ತಾನು ಮನೆಯಲ್ಲಿರಲಿಲ್ಲ ಎಂದು ಮೃತನ ಸಹೋದರಿ ಹೇಳಿಕೊಂಡಿದ್ದಳು. ಪೊಲೀಸರು ತನಿಖೆ ನಡೆಸಿದಾಗ ಸಹೋದರಿಯೆ ಈ ಜೋಡಿ ಕೊಲೆಯ ಹಂತಕಿ ಎಂಬ ವಿಷಯ ಬಯಲಾಗಿದೆ. ತನಗೆ ಜನ್ಮ ಕೊಟ್ಟತಾಯಿಯನ್ನು ಜೋತೆಗೆ ಹುಟ್ಟಿದ ಸಹೋದರನನ್ನೆ ಹತ್ಯೆಮಾಡಿ ಮುಗಿಸಿದ್ದಾಳೆ.!
ಈ ಹತ್ಯೆಗಾಗಿ ತನ್ನ ಮಾವನ ಮಕ್ಕಳಾದ ಕೃಷ್ಣ ಮತ್ತು ಇಶಾಂತ್ ಸಹಾಯ ಪಡೆದ ಕಾಜೊಲ್ ಅಣ್ಣ ಹಾಗೂ ತಾಯಿಯ ಕೊಲೆ ಮಾಡಿಸಿದ್ದಳು.! ಸೋದರ ಸಾವನ್ನಪ್ಪಿದ ಬಳಿಕ ಬರೋ ಆಸ್ತಿಯಲ್ಲಿ ಆರ್ಧ ಪಾಲು ನೀಡುವುದಾಗಿ ಮಾವನ ಮಕ್ಕಳಿಗೆ ಆಸೆ ತೋರಿಸಿ ಡೀಲ್ ಕುದುರಿಸಿದ್ದಳಂತೆ.! ಆಸ್ತಿಯ ಆಸೆಗೆ ಬಿದ್ದು ಮಾವನ ಮಕ್ಕಳು ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.


ಕೊಲೆಗೆ ಕಾರಣವೇನು?

ಅಜಾದ್‌ ನಗರದ ನಿವಾಸದಲ್ಲಿ ಮೀನಾ (45), ಮಗ ರಾಹುಲ್ (23) ಮತ್ತು ಮಗಳು ಕಾಜಲ್(27) ಮೂವರು ವಾಸವಾಗಿದ್ದರು.  ಕಾಜಲ್ ಸಲಿಂಗಿಯಾಗಿದ್ದ ಕಾರಣ ಮಹಿಳೆಯರ ಜೊತೆಯಲ್ಲಿ ಸಂಬಂಧ ಹೊಂದಲು ಇಷ್ಟಪಡುತ್ತಿದ್ದಳಂತೆ.! ಈ ಹಿನ್ನಲೆಯಲ್ಲಿ ಗೆಳತಿಯೊಬ್ಬಳ ಜೊತೆ ಕಾಜಲ್ ಸದಾ ರಿಲೇಶನ್‌ಶಿಪ್‌ನಲ್ಲಿದ್ದಳಂತೆ. ತನ್ನ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಗೆಳತಿಯನ್ನೇ ತಮ್ಮನೊಂದಿಗೆ ಮದುವೆ ಮಾಡಿಸಿದ್ದಳು. ಇದರಿಂದ ಗೆಳತಿ ಜೊತೆ ಮನೆಯಲ್ಲಿಯೇ ಯಾರ ಭಯವಿಲ್ಲದೆ ಸಂಬಂಧ ಹೊಂದಬಹುದು ಎನ್ನುವುದು ಕಾಜಲ್ ಉದ್ದೇಶವಾಗಿತ್ತು. ಮದುವೆ ಬಳಿಕ ತಮ್ಮನ ಹೆಂಡತಿ ಜೊತೆಗೆ ನಿರಂತರ ಸಂಬಂಧದಲ್ಲಿದ್ದಳಂತೆ. ಆದ್ರೆ ಈ ವಿಷಯ ತಮ್ಮ ರಾಹುಲ್ ಹಾಗೂ ತಾಯಿಗೆ ಗೊತ್ತಾಗಿದೆ.ದೊಡ್ಡ ಜಗಳವಾಗಿದೆ ನಂತರ ರಾಹುಲ್ ಪತ್ನಿ ತವರು ಸೇರಿದ್ದಾಳೆ. ಹಂತಕಿ ಕಾಜೊಲ್ ಯಾವಾಗಲೂ ಹುಡುಗರಂತೆ ಇರುತ್ತಿದ್ದಳಂತೆ,

ಹುಡುಗರಂತೆ ಜೀವನ ನಡೆಸುತ್ತಿದ್ದ ಇವಳು ಮನೆಯವರು ಮದುವೆ ಬಗ್ಗೆ ಮಾತನಾಡಿದ್ರೆ ಕೋಪ ಮಾಡಿಕೊಳ್ಳುತ್ತಿದ್ದಳಂತೆ ಹಾಗಾಗಿ ಮನೆಯವರ ಜೊತೆಯಲ್ಲಿಯೂ ಕಾಜಲ್ ಒಡನಾಟ ಚೆನ್ನಾಗಿರಲಿಲ್ಲ. ನನಗೆ ಮನೆಯ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ ಅಂದುಕೊಂಡ ಕಾಜಲ್, ಅಮ್ಮ ಹಾಗೂ ತಮ್ಮನ ಕೊಲೆಗೆ ಸಂಚು ರೂಪಿಸಿದ್ದಾಳೆ. ಆಸ್ತಿಯ ಬಗ್ಗೆ ಮಾವನ ಮಕ್ಕಳಾದ ಕೃಷ್ಣಾ ಮತ್ತು ಇಶಾಂತ್ ಮುಂದೆ ತನ್ನೆಲ್ಲಾ ಕಥೆ ಹೇಳಿಕೊಂಡಿದ್ದಳೆ.! ಈ ಪ್ರಕರಣಕ್ಕೆ ಕೈ ಹಾಕುವ ಮುನ್ನ ಮನೆಯ ಎಲ್ಲಾ ಸಿಸಿಟಿವಿ ಕ್ಯಾಮೆರಾ ಬಂದ್ ಮಾಡಿದ್ದಾಳೆ.
ಮಾವನ ಮಕ್ಕಳ ಜೊತೆಗೆ ತಾಯಿ ಮತ್ತು ಸಹೋದರನ ಹತ್ಯೆಗೆ ಪ್ಲಾನ್ ಮಾಡಿದ್ದ ಕಾಜಲ್ ನಂತರ ಮಾವನ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮೊದಲು ಅಮ್ಮನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ನಂತರ ರಾಹುಲ್ ಮನೆಗೆ ಬರುತ್ತಿದ್ದಂತೆ ಆತನ ಉಸಿರನ್ನು ಸಹ ನಿಲ್ಲಿಸಿದ್ದಾಳೆ. ಕೊನೆಗೆ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿದ್ದಾಳೆ. ಆರಂಭದಲ್ಲಿ ಪೊಲೀಸರು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ನಟಿಸಿದ್ದ ಕಾಜಲ್, ಹೆಣಗಳ ಮುಂದೆ ಕುಳಿತು ಕಣ್ಣೀರು ಹಾಕಿದ್ದಳು. ಪೊಲೀಸ್ ಭಾಷೆಯಲ್ಲಿ ಆಕೆಯ ವಿಚಾರಣೆ ನಡೆಸಿದಾಗ ಎಲ್ಲಾ ಸತ್ಯವನ್ನು ಹೊರಹಾಕಿದ್ದಳು.

Leave a Reply

Your email address will not be published. Required fields are marked *

Optimized by Optimole
error: Content is protected !!