ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ಮತ್ತು ಬುಕ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರ ಮುಂದಾಳತ್ವದಲ್ಲಿ ಜಂಟಿ ಅಭಿವೃದ್ಧಿ ಕಾರ್ಯ
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ 1ರಲ್ಲಿ ಮತ್ತು ಬುಕ್ಲಾಪುರ ಗ್ರಾಮ ಪಂಚಾಯತಿ 1 ರ ವ್ಯಾಪ್ತಿಯ ಅಪಾಯಕಾರಿ ಜಾಗಕ್ಕೆ ತಂತಿ ಬೇಲಿ ನಿರ್ಮಾಣ
ಅಶ್ವಸೂರ್ಯ/ತೀರ್ಥಹಳ್ಳಿ: ವರ್ಗ 1ರ ಅನುದಾನ ದಲ್ಲಿ ಮೇಲಿನ ಕುರುವಳ್ಳಿ 1 ಮತ್ತು ಬುಕ್ಲಾಪುರ 1 ರ ಸದಸ್ಯರ ಸಹಕಾರ ದಿಂದ ಮೇಲಿನ ಕುರುವಳ್ಳಿ -ಬುಕ್ಲಾಪುರ ಬಂಡೆ ಹತ್ತಿರ ಅಪಾಯಕಾರಿ ಜಾಗಕ್ಕೆ ತಂತಿ ಬೇಲಿ ನಿರ್ಮಾಣ ಮಾಡಿದ್ದು ಅಪಾಯಕಾರಿ ಜಾಗಕ್ಕೆ ಬೇಲಿ ನಿರ್ಮಾಣ ಮಾಡಿ ಕೊಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮೇಲಿನ ಕುರುವಳ್ಳಿ ವಾರ್ಡ್ 1 ಮತ್ತು ಬುಕ್ಲಾಪುರ ವಾರ್ಡ್ 1ರ ಸದಸ್ಯರು ಹಾಗು ಪಂಚಾಯತ್ ಅಭಿರುದ್ದಿ ಅಧಿಕಾರಿಗಳಿಗೆ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿರುತ್ತಾರೆ
ಮೇಲಿನ ಕುರುವಳ್ಳಿ ವಾರ್ಡ್ 1 ಮತ್ತು ಬುಕ್ಲಾಪುರ ವಾರ್ಡ್ 1ರಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಬೇಡಿಕೆ ಇದ್ದ ಕೆಲಸಕ್ಕೆ ಚಾಲನೆ.
ತೀರ್ಥಹಳ್ಳಿ: ಕಳೆದ ಮೂರು ನಾಲ್ಕು ವರ್ಷ ದಿಂದ ಬೇಡಿಕೆ ಇದ್ದ ಮಳೆಗಾಲದ ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ವಾಪ್ತಿ ಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಹಾಗು ರಸ್ತೆ ಮೇಲೆ ನೀರು ಹರಿದು ಸಾರ್ವಜನಿಕರು ಮತ್ತು ವಾಹನ ತಿರುಗಾಟ ಕ್ಕೆ ತೊಂದರೆ ತಪ್ಪಿಸಲು ಅನುಕೂಲ ವಾಗುವಂತೆ ಜೆ ಸಿ ಬಿ ಇಂದ ಚರಂಡಿ ಹುಳು ತೆಗೆದು ಕ್ಲಿನ್ ಮಾಡಿಸುವಂತೆ ಸಾರ್ವಜನಿಕರಿಂದ ಗ್ರಾಮ ಸಭೆ ವಾರ್ಡ್ ಸಭೆ ಮತ್ತು ಇತರೆ ಸಭೆಯಲ್ಲಿ ಹಾಗು ಆಡಳಿತ ಮಂಡಳಿ ಸದಸ್ಯರು ಸಾಮಾನ್ಯ ಸಭೆ ಯಲ್ಲಿ ಬೇಡಿಕೆ ಇಟ್ಟಿದ್ದು ಅದರಂತೆ ಈ ದಿನ ಮೇಲಿನ ಕುರುವಳ್ಳಿ ವಾರ್ಡ್ 1 ಮತ್ತು ಬುಕ್ಲಾಪುರ ವಾರ್ಡ್ 1ರ ಅಗತ್ಯ ವಾಗಿ ನಿರ್ವಹಿಸಬೇಕಾದ ಚರಂಡಿ ಕ್ಲಿನ್ ಕಾಮಗಾರಿ ಯನ್ನು ಜೆ ಸಿಬಿ ಮೂಲಕ ನಿರ್ವಹಿಸಿ ಚರಂಡಿ ಹೂಳನ್ನು ಟ್ರ್ಯಾಕ್ಟರ್ ಮೂಲಕ ಶಿಫ್ಟ್ ಮಾಡಲಾಗಿದ್ದು ಮಳೆ ಗಾಲಕ್ಕೂ ಮುಂಚೆ ಅಗತ್ಯವಾಗಿ ನಿರ್ವಹಿಸಬೇಕಾದ ಕಾಮಗಾರಿ ಮಾಡಿಸಿಕೊಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಆಯಾ ಭಾಗದ ಸದಸ್ಯರು ಮತ್ತು ಪಂಚಾಯತ್ ಅಭಿರುದ್ಧಿ ಅಧಿಕಾರಿ ಅವರಿಗೆ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿರುತ್ತಾರೆ