ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ


ಅಶ್ವಸೂರ್ಯ/ಶಿವಮೊಗ್ಗ: ದಿನಾಂಕ 26-06-2024 ರಂದು ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜು ಮತ್ತು ಕಟೀಲ್ ಅಶೊಕ್ ಪೈ ಮೊಮೋರಿಯಲ್ ಕಾಲೇಜು ಮಲ್ಲಿಗೇನಹಳ್ಳಿ ಶಿವಮೊಗ್ಗದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಸಂತೋಶ್ ಎಂ ಎಸ್, ಮಾನ್ಯ ನ್ಯಾಯಾಧೀಶರು, ಡಿ ಎಲ್ ಎಸ್ ಎ ಮತ್ತು ಸೀನಿಯರ್ ಸಿವಿಲ್ ಜಡ್ಜ್ ಶಿವಮೊಗ್ಗ ರವರು ಕಟೀಲ್ ಅಶೊಕ್ ಪೈ ಮೊಮೋರಿಯಲ್ ಕಾಲೇಜಿನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದು, ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ಎರಡೂ ಕಾಲೇಜಿನ ಕಾರ್ಯಕ್ರಮಗಳಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ವಿಧ್ಯಾರ್ಥಿಗಳ ಕುರಿತು ಈ ಕೆಳಕಂಡಂತೆ ಮಾತನಾಡಿದರು.

1) 1980ರ ದಶಕದಲ್ಲಿ ಲ್ಯಾಟಿನ್ ಅಮೇರಿಕಾ ಹಾಗೂ ಇತರೆ ಮುಂದುವರೆದ ದೇಶಗಳಲ್ಲಿ ಮಾದಕ ದ್ರವ್ಯದ ಬಳಕೆ / ವ್ಯಸನಿಗಳು ಹೆಚ್ಚಾಗಿ, ಇಡೀ ದೇಶವೇ ಮಾದಕದ್ರವ್ಯಗಳ ದುಷ್ಪರಿಣಾಮಗಳಿಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಜಗತ್ತಿನಿಂದ ಮಾದಕ ದ್ರವ್ಯವನ್ನು ಅಳಿಸಿ ಹಾಕುವ ಏಕೋದ್ದೇಶದಿಂದ ಎಲ್ಲಾ ದೇಶಗಳು ಸೇರಿ 1989 ರಿಂದ ಪ್ರತೀ ವರ್ಷದ ಜೂನ್ 26ನೇ ತಾರೀಖನ್ನು ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.

2) ಮಾದಕ ದ್ರವ್ಯದ ವ್ಯಸನಕ್ಕೆ ಹೆಚ್ಚಿನದಾಗಿ ಯುವಕರೇ ಬಲಿಯಾಗುತ್ತಿದ್ದು, ಆಯ್ಕೆಯ ವಿಚಾರದಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟು ಸುಲಭವಾಗಿ ಮಾದಕ ದ್ರವ್ಯಗಳ ಸುಳಿಗೆ ಸಿಲುಕುತ್ತಾರೆ. ಯುವಕರು ಮೊದ ಮೊದಲು ಬೇರೆಯವರನ್ನು ನೋಡಿ, ಮೋಜಿಗಾಗಿ, ಸ್ನೇಹಿತರನ್ನು ಅನುಸರಿಸಿ ಅಥವಾ ಮತ್ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಇಲ್ಲವೇ ತಾತ್ಕಾಲಿಕ ಖುಷಿ/ ಸುಖವನ್ನು ಪಡೆಯಲು ಮಾದಕ ದ್ರವ್ಯ ಅಥವಾ ದುಷ್ಚಟಗಳನ್ನು ಶುರು ಮಾಡುತ್ತಾರೆ. ಆದರೆ ಮಾದಕ ದ್ರವ್ಯಗಳು ಅವರ ಅರಿವಿಗೆ ಬಾರದೇ ಸಂಪೂರ್ಣವಾಗಿ ಅವರನ್ನು ಆವರಿಸಿಕೊಂಡು, ಕ್ಷಣಿಕ ಸುಖಕ್ಕಾಗಿ ಶುರು ಮಾಡಿದ ವ್ಯಸನವು ಮುಂದೆ ಅವರನ್ನೇ ಬಲಿ ಪಡೆಯುತ್ತದೆ. ಆದ್ದರಿಂದ ಯುವಕರು ಈ ವಯಸ್ಸಿನಲ್ಲಿ ಎಚ್ಚರಿಕೆ ವಹಿಸಿ ಹೆಜ್ಜೆ ಇಡುವುದು ತುಂಬಾ ಮುಖ್ಯವಾಗಿರುತ್ತದೆ.

3) ಮಾದಕ ದ್ರವ್ಯ ವ್ಯಸನಿಗಳು ತಮ್ಮ ಆರೋಗ್ಯದ ಜೊತೆಗೆ ಸಮಾಜ ಮತ್ತು ಕುಟುಂಬದ ಸ್ವಾಸ್ಥ್ಯವನ್ನು ಸಹಾ ಹಾಳು ಮಾಡುತ್ತಾರೆ. ಮಾದಕ ದ್ರವ್ಯಗಳ ಸೇವನೆ, ದುಷ್ಚಟಗಳು ಅಥವಾ ಕುಡಿತದ ಚಟಗಳಿಗೆ ಒಳಗಾದ ಯಾವುದೇ ವ್ಯಕ್ತಿಯು ಸಮಾಜದಲ್ಲಿ ಉತ್ತಮ ವ್ಯಕ್ತಿ ಅಥವಾ ಜವಾಬ್ದಾರಿಯುತ ನಾಗರೀಕನಾಗಿ ತನ್ನ ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿರುವ ಯಾವುದೇ ಉದಾಹರಣೆ ಇಲ್ಲ. ಮಾದಕ ದ್ರವ್ಯದ ದುಷ್ಪರಿಣಾಮದಿಂದ ವ್ಯಕ್ತಿಯ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಮೇಲೆ ನೇರ ಪರಿಣಾಮ ಬೀರಿ ವ್ಯಕ್ತಿ ಅದಃಪತನದ ಕಡೆಗೆ ಸಾಗುತ್ತಾನೆ.

4) ಗಾಂಜಾ / ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ, ಸಂಗ್ರಹಣೆ, ಸೇವನೆ ಹಾಗೂ ಗಾಂಜಾ ಬೆಳೆಯುವುದು NDPS ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಸದರಿ ಪ್ರರಕಣಗಳಲ್ಲಿ ಭಾಗಿಯಾಗುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.

5) ದಿನಾಂಕಃ 05-06-2024 ರಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, ಜಿಲ್ಲೆಯಾದ್ಯಂತ ಶಾಲಾ ಕಾಲೇಜಿನ ಸುತ್ತಮುತ್ತ, ಹೊರ ವಲಯ ಹಗೂ ಮಾದಕ ವಸ್ತುಗಳ ಮಾರಾಟ ಸಾಗಾಣಿಕೆ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಸ್ಥಳಗಳಲ್ಲಿ ದಾಳಿ ನಡೆಸಿ NDPS ಕಾಯ್ದೆಯಡಿ ಒಟ್ಟು 61 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

6) ಆಶ್ಚರ್ಯಕರ ವಿಚಾರವೆಂದರೆ NDPS ಪ್ರಕರಣಗಳ ಆರೋಪಿಗಳಲ್ಲಿ ಹೆಚ್ಚಿನವರು ಯುವಕರೇ ಆಗಿರುವುದು ವಿಶಾದನೀಯ ಸಂಗತಿಯಾಗಿರುತ್ತದೆ. ಮಾದಕ ದ್ರವ್ಯದ ವ್ಯಸನಕ್ಕೆ ಹೆಚ್ಚಾಗಿ ವಿಧ್ಯಾವಂತರು ಬಲಿಯಾಗುತ್ತಿದ್ದು, ಸಮಾಜದಲ್ಲಿ ಜೀವನ ನಡೆಸಲು ಕೇವಲ ವಿಧ್ಯಾರ್ಜನೆ ಸಾಕಾಗುವುದಿಲ್ಲ. ಇದರ ಜೊತೆಗೆ ತಪ್ಪು ಮತ್ತು ಸರಿಯಾದ ವಿಚಾರಗಳ ಬಗ್ಗೆ ಅರಿವು ಇರುವುದು ಸಹಾ ಮುಖ್ಯವಾಗಿರುತ್ತದೆ.

7) ಅರಿವು ಕಾರ್ಯಮಗಳನ್ನು ಹೆಚ್ಚಿನದಾಗಿ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಹಿಂದಿನ ಉದ್ದೇಶವೇನೆಂದರೆ, ನೀವು ಕುಟುಂಬದ ಜೊತೆ, ಸಮಾಜದಲ್ಲಿ, ಸ್ನೇಹಿತರ ಜೊತೆ ಹೆಚ್ಚಿನದಾಗಿ ಬೆರೆಯಲಿದ್ದು, ಮುಂದೆ ಜೀವನದಲ್ಲಿ ಉನ್ನತ ಸ್ಥಾನಗಳಿಗೂ ಸಹಾ ಹೋಗುವವರಿದ್ದೀರಿ, ನಿಮಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಇದ್ದಾಗ ನೀವು ಈ ವಿಚಾರಗಳನ್ನು ಇತರರಿಗೂ ಸಹಾ ತಿಳಿಸಿ, ಅವರಲ್ಲಿ ಅರಿವು ಮೂಡಿಸಿದಾಗ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿರುತ್ತದೆ.

8) ನಿಮ್ಮ ಸುತ್ತ ಮುತ್ತ ಮಾದಕ ವಸ್ತುಗಳ ಸಾಗಾಟ, ಮಾರಾಟ, ಸಂಗ್ರಹಣೆ, ಸೇವನೆ ಮತ್ತು ಬೆಳೆಯುತ್ತಿರುವ ಬಗ್ಗೆ ಮಾಹಿತಿ ಇದ್ದಲ್ಲಿ, ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಇ.ಆರ್.ಎಸ್.ಎಸ್-112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಪೊಲೀಸ್ ಇಲಾಖೆಯು ಸದಾ ನಿಮ್ಮ ಸೇವೆಗೆ ಸಿದ್ದವಿರುತ್ತದೆ ನಿಮ್ಮ ಸುರಕ್ಷತೆ ನಮ್ಮ ಹೊಣೆ.

9) ಮಾದಕ ವಸ್ತುವಿನ ಪಿಡುಗನ್ನು ನಿರ್ಮೂಲನೆ ಮಾಡಲು ಎಲ್ಲರೂ ಸೇರಿ ಕೈ ಜೋಡಿಸಿ ತೊಂದರೆಯಲ್ಲಿರುವ ವ್ಯಕ್ತಿಗಳ ಜೀವನವನ್ನು ಉಳಿಸೋಣವೆಂದು ಕರೆ ನೀಡಿ, ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲು, ಅದರಿಂದಾಗುವ ಅಪಾಯಗಳ ಬಗ್ಗೆ ಇತರರಿಗೆ ಅರಿವು ಮೂಡಿಸಲು ಹಾಗೂ ಮಾದಕ ದ್ರವ್ಯದ ದುರುಪಯೋಗದ ಹಿಡಿತದಿಂದ ಮುಕ್ತವಾದ ಸಮಾಜವನ್ನು ನಿಮಾಣ ಮಾಡುವ ಪ್ರತಿಜ್ಞೆ ಸ್ವೀಕರಿಸಲಾಯಿತು.

ನಾವು ಶುಧ್ಧ ಮತ್ತು ಸ್ವಚ್ಚವಾಗಿದ್ದಾಗ ನಮ್ಮ ಸುತ್ತಲಿನ ಸಮಾಜದ ಸ್ವಾಸ್ಥ್ಯವನ್ನು ಸಹಾ ಕಾಪಾಡಲು ಸಾಧ್ಯವಿರುತ್ತದೆ.

      ಕಟೀಲ್ ಅಶೊಕ್ ಪೈ ಮೊಮೋರಿಯಲ್ ಕಾಲೇಜು ಮಲ್ಲಿಗೇನಹಳ್ಳಿ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಡಾ|| ಸಂಧ್ಯಾ ಕಾವೇರಿ ಪ್ರಾಂಶುಪಾಲರು, ಶ್ರೀಮತಿ ಲತಾ ಪ್ರಾಜೆಕಟ್ಟ್ ಡೈರೆಕ್ಟರ್ ಹಾಗೂ  ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀ  ಸನಾವುಲ್ಲಾ, ಪ್ರಾಂಶುಪಾಲರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ, ಡಾ|| ಮಂಜುನಾಥ್, ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳು, ಸಹ್ಯಾದ್ರಿ ಕಾಲೇಜು ಶೀವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಕೊಪ್ಪದ್, ಪಿಎಸ್ಐ ಕೋಟೆ ಪೊಲೀಸ್ ಠಾಣೆ ಹಾಗೂ ಕಾಲೇಜಿನ ಪ್ರಾಧ್ಯಾಪಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!