ಗೋಪಾಲಗೌಡ ಬಡಾವಣೆಯಲ್ಲಿ ಮಹಾನಗರ ಪಾಲಿಕೆಯ ಹಾಗೂ ಖಾಸಗಿ ನಿವೇಶನಗಳ ಅತಿಕ್ರಮಣ ತೆರವುಗೊಳಿಸಲು ಒತ್ತಾಯ:ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ
ಅಶ್ವಸೂರ್ಯ/ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 17 ನೇ ವಾರ್ಡಿನ ಗೋಪಾಲಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಮಹಾನಗರ ಪಾಲಿಕೆ ಸೇರಿದ ಸಾಕಸ್ಟು ಖಾಲಿ ನಿವೇಶನಗಳು ಇದ್ದು. ಇದಕ್ಕೆ ಹೊಂದಿಕೊಂಡಂತೆ ಈ ಹಿಂದೆ ಪಾಲಿಕೆ ಕಸ ವಿಲೇವಾರಿ ಘಟಕ ತೆರೆದಿದ್ದು ಉಳಿದ ನಿವೇಶನದ ಜಾಗಕ್ಕೆ ಯಾವುದೇ ತಡೆಗೋಡೆ ನಿರ್ಮಿಸಿರುವುದಿಲ್ಲ. ಇದನ್ನು ಗಮನಿಸಿದ ಮಾಜಿ ಜನಪ್ರತಿನಿಧಿಗಳು ಹಾಗೂ ಪ್ರಭಾವಿ ಮುಖಂಡರು ಹಾಲಿ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಮಹಾನಗರ ಪಾಲಿಕೆಯ ಆಸ್ಥಿ ಕಬಳಿಸಲು ಹೊಂಚು ಹಾಕಿದ್ದು, ಪಾಲಿಕೆಗೆ ಸೇರಿದ ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ಖಾತೆ ಇರುವ ನಿವೇಶನಗಳಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿಕೊಳ್ಳಲು ಯತ್ನಿಸಿರುತ್ತಾರೆ. ಇದನ್ನು ಗಮನಿಸಿ ಸಾರ್ವಜನಿಕರು ಹಾಗೂ ಖಾಸಗಿ ನಿವೇಶನದ ಮಾಲಿಕರುಗಳು ಆಕ್ಷೇಪ ವ್ಯಕ್ತಪಡಿಸಿ ಮಾನ್ಯ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಮನವಿ ಮೇರೆಗೆ ಮಾನ್ಯ ರಕ್ಷಣಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಕ್ರಮವಾಗಿ ಖಾಸಗಿ ನಿವೇಶನಗಳಿಗೆ ಬೇಲಿ ನಿರ್ಮಿಸಿರುವುದನ್ನು ತೆರವುಗೊಳಿಸಿದ್ದು, ಉಳಿದ ಮಹಾನಗರ ಪಾಲಿಕೆಗೆ ಸೇರಿದ ಜಾಗದ ಒತ್ತುವರಿ ಇನ್ನೂ ತೆರವುಗೊಳಿಸಿರುವುದಿಲ್ಲ.
ಆದ್ದರಿಂದ ತಾವುಗಳು ಖುದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮವಾಗಿ ಮಹಾನಗರ ಪಾಲಿಕೆಯ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿರುವ ಭೂ ಕಬಳಿಕೆದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.
ಹಾಗೂ ಈ ಖಾಲಿ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕ್/ ಉದ್ಯಾನವನ ಅಥವ ಕ್ರೀಡಾಂಗಣ ನಿರ್ಮಿಸಿ ಸ್ಥಳಿಯ ನಿವಾಸಿಗಳಿಗೆ ಅನುಕೂಲವಾಗುವಂತೆ ಬಹುದಿನದ ಬೇಡಿಕೆಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಎಂದು ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.
ಅತಿಕ್ರಮಣ ತೆರವು ಗೊಳಿಸಲು ಒತ್ತಾಯಿಸಿದ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು : ಜಿ.ಡಿ ಮಂಜುನಾಥ್, ಟಿ.ಡಿ. ಗಿತೇಂದ್ರ ಗೌಡ, ಆರ್ ರಾಜಶೇಕರ್, ಜಿ.ಎಸ್ ಶಿವಕುಮಾರ್, ಬಿ.ಆರ್. ರವಿ, ಬಿ. ರುದ್ರಪ್ಪ, ಈ ಟಿ ಕಿರಣ್ ಕುಮಾರ್, ಹೆಚ್. ಬಸವರಾಜ್, ಎನ್.ಆರ್ ಮುರುಳಿ, ನಾಗೇಶ್, ಕೆ.ಪಿ ಸುಬ್ಬಣ್ಣ. ಎಂ ಬಿ ರವಿಕುಮಾರ್, ಸತೀಶ್ ಚಂದ್ರ ಪ್ರಜ್ವಲ್, ಅಜಯ್ ಸುಧಾಕರ್ ಶೆಟ್ಟಿ, ಅರವಿಂದ್, ಎ ಪಿ ಜಯಣ್ಣ ಮತ್ತು ಶಿವಾನಂದ್.
ಮಹಾನಗರ ಪಾಲಿಕೆಯ ಆಯುಕ್ತರು ಈ ಕೂಡಲೇ ಗಮನಿಸಬೇಕಿದೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದು ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಗೆ ಸಂಭಂಧಿಸಿದ ಆಸ್ತಿಪಾಸ್ತಿಗಳ ದಾಖಲಾತಿ ವಿಭಾಗದಲ್ಲಿ ಅಧಿಕಾರಿಯಾಗಿರುವ ಮಹಾನುಭಾವ ಯಾರು.? ಈ ಅಕ್ರಮದ ಹಿಂದೆ ಇವನ ಕೈವಾಡ ಇದಿಯಾ
? ಈತನ ಹಿನ್ನಲೆ ಏನು? ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಅಷ್ಟೂ ವಾರ್ಡ್ ಗಳಲ್ಲಿ ಮಹಾನಗರ ಪಾಲಿಕೆಯ ಒಟ್ಟು ಆಸ್ತಿ ಏಷ್ಟು.? ಈ ಮಹಾನಗರ ಪಾಲಿಕೆಗೆ ಸಂಭಂಧಿಸಿದ ಆಸ್ತಿಪಾಸ್ತಿಗಳಲ್ಲಿ ಎಷ್ಟು ಯಾರ ಯಾರ ಹೇಸರಿಗೆ ಬಿಕರಿಯಾಗಿದೆ.!? ಹಿಂದೆ ಇದ್ದ ಒಟ್ಟು ಆಸ್ತಿ ಎಷ್ಟು.? ಈಗ ಉಳಿದಿರುವ ಆಸ್ತಿ ಎಷ್ಟು.? ಅ ಮಂಜುನಾಥನೆ ಬಲ್ಲ !? ನಿರೀಕ್ಷಿಸಿ……