ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿಗಳ ಆದೇಶ

ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿಗಳ ಆದೇಶ

ಶಿವಮೊಗ್ಗ/ಬೆಂಗಳೂರು:ಬೆಂಗಳೂರಿನ ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಸಾಮಾಜಿಕ ಹೋರಾಟಗಾರ್ತಿ ಕೆ.ಆರ್.ಸೌಮ್ಯ ಎಂಬುವವರು ತಮ್ಮ ಪುತ್ರಿ ಪ್ರಬುದ್ಧ ಹತ್ಯೆ ವಿಚಾರದಲ್ಲಿ ಪೊಲೀಸರಿಂದ ನಮಗೆ ನ್ಯಾಯಸಿಗುತ್ತಿಲ್ಲ. ನಾನು ಅದೆಷ್ಟೋ ಜನರ ಪರವಾಗಿ ಹೋರಾಟ ಮಾಡಿದ್ದ ನನಗೆ ನನ್ನ ಮಗಳ ಹತ್ಯೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸುಬ್ರಹ್ಮಣ್ಯಪುರ ಪೊಲೀಸರು ನನಗೆ ನ್ಯಾಯ ಕೊಡುವ ಬದಲು ಆರೋಪಿಗಳೊಂದಿಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ಸಿಐಡಿ ತನಿಖೆ ವಹಿಸಿ ಆದೇಶ ಹೊರಡಿಸಿದ್ದಾರೆ.

ಪ್ರಬುದ್ದ ಹತ್ಯೆಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು.

ಮೇ 15 ರಂದು ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ ಅನುಮಾನಸ್ಪದ ರೀತಿಯಲ್ಲಿ ಹೆಣವಾಗಿದ್ದಳು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತಾದರೂ, ಮರಣೋತ್ತರ ಪರೀಕ್ಷೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಹಾಗೆ ದೇಹವನ್ನು ಇರಿಸಿ ಬಿಂಬಿಸಲಾಗಿತ್ತು ಎಂದು ತಿಳಿದುಬಂದಿತ್ತು.

ಹತ್ಯೆಯಾದ ಪುತ್ರಿ ಪ್ರಬುದ್ಧ ಮತ್ತು ಹೋರಾಟಗಾರ್ತಿ ತಾಯಿ ಕೆ.ಆರ್.ಸೌಮ್ಯ

ಆರೋಪಿಗಳನ್ನು ಬಂಧಿಸಿದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿ ಕಡೆಯವರು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿಯೇ ಬಾರ್‌ ನಡೆಸಿಕೊಂಡು ಪೊಲೀಸರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ಧಾರೆ. ನಾನೊಬ್ಬಳು ಹೋರಾಟಗಾರ್ತಿ ಯಾಗಿದ್ದರು ನ್ಯಾಯ ಸಿಗುತ್ತಿಲ್ಲ.

ಈ ಪ್ರಕರಣದಲ್ಲಿ ಮಗಳನ್ನು ಕಳೆದುಕೊಂಡಿದ್ದೇನೆ. ನನಗೆ ಹಾಗೂ ನನ್ನ ತಾಯಿಗೂ ಜೀವ ಬೆದರಿಕೆಯಿದೆ. ಒಂಟಿ ಪೋಷಕಳಾದ ನನಗೆ ನ್ಯಾಯ ಕೊಡಿಸಿ ಎಂದು ಸೌಮ್ಯ ಮನವಿ ಮಾಡಿದ್ದಾರೆ.

ಪ್ರಕರಣ ಹಿನ್ನಲೆ ?

ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಸರಹದ್ದಿನ ಮನೆಯೊಂದರ ಬಾತ್‌ ರೂಂನಲ್ಲಿ ಮೇ 15ರ ಮಧ್ಯಾಹ್ನ ಬಾಲಕಿ ಪ್ರಬುದ್ಧ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕುತ್ತಿಗೆ ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದು ಆತ್ಮಹತ್ಯೆ ಎಂದು‌ ಬಿಂಬಿತವಾದರು ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಮೈಮೇಲೆ ಬಿದ್ದ ಬಲವಾದ ಹೊಡೆತದಿಂದ ಹತ್ಯೆಯಾಗಿರುವ ಹಿನ್ನಲೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.!

Leave a Reply

Your email address will not be published. Required fields are marked *

Optimized by Optimole
error: Content is protected !!