Headlines

ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ದಾನವಾಡಿಯ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಅವರಣ ಸ್ವಚ್ಚತೆ

ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ 2023-24 ರ ವಿಶೇಷ ವಾರ್ಷಿಕ ಶಿಬಿರ

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದಪದ ಪ್ರತಿಷ್ಠಿತ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ 2023-24 ರ ವಿಶೇಷ ವಾರ್ಷಿಕ ಶಿಬಿರವನ್ನು ಭದ್ರಾವತಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ದಿನಾಂಕ 15 ರಿಂದ 21 ರ ವರೆಗೆ ಆಯೋಜಿಸಲಾಗಿತ್ತು ಸದರಿ ಶಿಬಿರದಲ್ಲಿ ದಿನಾಂಕ ಜೂನ್ 17 ಸೋಮವಾರದಂದು ದಾನವಾಡಿಯ ರಂಗನಾಥ ಸ್ವಾಮಿ ಬೆಟ್ಟಕ್ಕೆ ಚಾರಣ ತೆರಳಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ದೇವಸ್ಥಾನದ ಆವರಣ ಮತ್ತು ಬೆಟ್ಟದ ರಸ್ತೆಯ ಅಕ್ಕಪಕ್ಕದಲ್ಲಿ ಶುಚಿಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಘಟಕ ಅಧಿಕಾರಿಗಳು,ಊರಿನ ಗ್ರಾಮಸ್ಥರು ಹಾಗೂ 120 ಸ್ವಯಂ ಸೇವಕರು ಹಾಜರಿದ್ದರು.

ದಾನವಾಡಿಯ ರಂಗನಾಥ ಸ್ವಾಮಿ ದೇವಾಲಯ

ಶಿಬಿರದಲ್ಲಿ ಪಾಲ್ಗೊಂಡು ರಂಗನಾಥ ಸ್ವಾಮಿಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದ ವಿಧ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿದರು.

Leave a Reply

Your email address will not be published. Required fields are marked *

Optimized by Optimole
error: Content is protected !!