ಮತ್ತೆ ಬಿಜೆಪಿ ಸೇರ್ಪಡೆಗೆ ರೆಡಿಯಾದ್ರ ಮಾಜಿ ಉಪ‌ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ.!

ಮತ್ತೆ ಬಿಜೆಪಿ ಸೇರ್ಪಡೆಗೆ ರೆಡಿಯಾದ್ರ ಮಾಜಿ ಉಪ‌ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ.!

ಅಶ್ವಸೂರ್ಯ/ಶಿವಮೊಗ್ಗ: ಬಿಜೆಪಿ ಪಕ್ಷದ ಒಂದು ಬಣ ಸಂಘ ಪರಿವಾರದ ನಾಯಕರ ಮೂಲಕ ಕೆ ಎಸ್ ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವಂತೆ ಅವಿರತ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಅದರೆ ಯಡಿಯೂರಪ್ಪ ಬಣ ಈಶ್ವರಪ್ಪ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ
 ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗ ಕಾಂತೇಶನಿಗೇ ಬಿಜೆಪಿಯಿಂದ ಟಿಕೆಟ್ ನೀಡದ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಹೀನಾಯ ಸೋಲು ಅನುಭವಿಸಿದ್ದರು. ಕೇವಲ ಮೂವತ್ತು ಸಾವಿರ ಚಿಲ್ಲರೆ ಮತ ಪಡೆದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಶಕ್ತಿ ಏನೆಂದು ಸ್ವತಃ ಈಶ್ವರಪ್ಪ ನವರಿಗೆ ಅರಿವಾಗಿತ್ತು.ಈ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು ಈಶ್ವರಪ್ಪ.! ಈಗ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಪುನಃ ಮಾತ್ರುಪಕ್ಷ ಸೇರ್ಪಡೆಗೆ ಈಗ ಪಕ್ಷದ ತೆರೆಮರೆಯಲ್ಲಿ ಲಾಭಿಗೆ ಮುಂದಾಗಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಇನ್ನೂ ಈ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಪಕ್ಷದ ಒಂದು ಬಣ ಸಂಘ-ಪರಿವಾರದ ನಾಯಕರ ಮೂಲಕ ಈ ಪ್ರಕ್ರಿಯೆ ಪ್ರಾರಂಭಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಖುದ್ದು ಈಶ್ವರಪ್ಪನವರೇ ಹಿರಿಯರ ಜತೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ವರಿಷ್ಠರು ಒಪ್ಪಿದರೆ ಶೀಘ್ರ ಪಕ್ಷಕ್ಕೆ ವಾಪಸ್ಸಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಬಿ.ಎಸ್‌. ಯಡಿಯೂರಪ್ಪ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ಈಶ್ವರಪ್ಪ ನವರನ್ನು ಪಕ್ಷದಿಂದ ದೂರವಿಡಲು ನಿರ್ಧರಿಸಿದೆ. ಪಕ್ಷದಿಂದ ಅಂದುಕೊಂಡಷ್ಟು ಸುಲಭವಾಗಿ ವಿವಾದ ಇತ್ಯರ್ಥವಾಗುವ ಸಾಧ್ಯತೆ ಕೂಡ ಕಡಿಮೆ ಇದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಈಶ್ವರಪ್ಪ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ.
ಯಡಿಯೂರಪ್ಪ ಹಾಗೂ ಕುಟುಂಬವರ್ಗದ ವಿರುದ್ಧ ಏಕಪಕ್ಷೀಯ ವಾಗ್ಧಾಳಿ ನಡೆಸಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಲವು ಅಸ್ತ್ರಗಳನ್ನು ಈಶ್ವರಪ್ಪ ಧಾರೆ ಎರೆದುಕೊಟ್ಟಿದ್ದರು ಎನ್ನಲಾಗಿದೆ.
ಹೀಗಾಗಿ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂಬುದು ಯಡಿಯೂರಪ್ಪ ಬಣದ ವಾದ. ಸಂಘ-ಪರಿವಾರದಲ್ಲೂ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡುವ ಹಿರಿಯರು ಈ ವಾದಕ್ಕೆ ಮನ್ನಣೆ ನೀಡುತ್ತಿದ್ದು ಈಶ್ವರಪ್ಪ ಪಕ್ಷೇತರ ಸ್ಪರ್ಧೆ ಮಾಡಿದ್ದು ಕೂಡ ಸ್ವಾರ್ಥಕ್ಕಾಗಿಯೇ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ರೀತಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿರಲಿಲ್ಲವೇ? ಎಂಬ ಮಾತು ಕೇಳಿ ಬಂದಿದೆ.

ಈ ಎರಡೂ ವಾದಗಳು ಏನೇ ಇದ್ದರೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಿದೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಈಶ್ವರಪ್ಪ ಪರ ನಿಲುವು ತೆಗೆದುಕೊಳ್ಳಬಹುದೆಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಬಿಎಸ್‌ವೈ ಮೇಲೆ ನನಗೆ ದ್ವೇಷವಿಲ್ಲ,

ನಾನು ಮಾತ್ರ ಯಡಿಯೂರಪ್ಪನವರ ವಿರುದ್ಧ ಮಾತ ನಾಡಿದ್ದೇನೆ. ಆದರೆ ನನ್ನ ಮಗ ಕಾಂತೇಶ್‌ ಎಲ್ಲಿಯೂ ಯಾರ ಬಗ್ಗೆಯೂ ಮಾತನಾಡಿಲ್ಲ. ಯಡಿಯೂರಪ್ಪ ವಿರುದ್ಧ ನನಗೆ ಯಾವುದೇ ದ್ವೇಷವೂ ಇಲ್ಲ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!