ಸಹೋದ್ಯೋಗಿಗೆ ಮುಖ್ಯ ಮಹಿಳಾ ಪೇದೆಗೆ ಗನ್ ತೋರಿಸಿ ಅತ್ಯಾಚಾರ: ಪೊಲೀಸ್ ಅಧಿಕಾರಿಯ ಬಂಧನ.!!

ಸಹೋದ್ಯೋಗಿಗೆ ಮುಖ್ಯ ಮಹಿಳಾ ಪೇದೆಗೆ ಗನ್ ತೋರಿಸಿ ಅತ್ಯಾಚಾರ: ಪೊಲೀಸ್ ಅಧಿಕಾರಿಯ ಬಂಧನ.!!

ಅಶ್ವಸೂರ್ಯ/ಶಿವಮೊಗ್ಗ: ಜಯಶಂಕರ್ ಭೂಪಾಲ್ ಪಲ್ಲಿ (ತೆಲಂಗಾಣ): ಮುಖ್ಯ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಗನ್ ತೋರಿಸಿ ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿರುವ ತೆಲಂಗಾಣ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಬುಧವಾರ ಸೇವೆಯಿಂದ ವಜಾಗೊಳಿಸಲಾಗಿದೆ.
ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಜಯಶಂಕರ್ ಭೂಪಾಲ್ ಪಲ್ಲಿ ಜಿಲ್ಲೆಯ ಕಾಳೇಶ್ವರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪಿ.ವಿ.ಎಸ್.ಭವಾನಿ ಸೇನ್ ಗೌಡ್ ಅವರನ್ನು ಬಂಧಿಸಿ, ನಂತರ ನ್ಯಾಯಾಂಗ ವಶಕ್ಕೆ ಕಳಿಸಲಾಗಿದೆ.

ಕಾಳೇಶ್ವರಂ ಪ್ರಾಜೆಕ್ಟ್ ನ ಪಂಪ್ ಹೌಸ್ ಬಳಿಯಿರುವ ಹಳೆಯ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಜೂನ್ 15ರಂದು ಸಂತ್ರಸ್ತ ಮಹಿಳಾ ಪೇದೆಯ ಮೇಲೆ ಅತ್ಯಾಚಾರವೆಸಗಲಾಗಿತ್ತು. ತನ್ನ ಮೇಲೆ ಅತ್ಯಾಚಾರವೆಸಗುವುದಕ್ಕೂ ಮುನ್ನ, ಆರೋಪಿ ಪೊಲೀಸ್ ಅಧಿಕಾರಿಯು ತನಗೆ ರಿವಾಲ್ವರ್ ತೋರಿಸಿ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ಮಹಿಳಾ ಪೇದೆಯು ಆರೋಪಿಸಿದ್ದಾರೆ. ಅಲ್ಲದೆ, ಈ ಘಟನೆಯ ಕುರಿತು ಯಾರ ಬಳಿಯಾದರೂ ಬಹಿರಂಗಪಡಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಪೊಲೀಸ್ ಅಧಿಕಾರಿ ಬೆದರಿಕೆಯನ್ನೂ ಒಡ್ಡಿದ್ದರು ಎನ್ನಲಾಗಿದೆ.

42 ವರ್ಷದ ಸಂತ್ರಸ್ತ ಮಹಿಳಾ ಪೇದೆಯ ದೂರನ್ನು ಆಧರಿಸಿ, ಆರೋಪಿ ಸಬ್ ಇನ್ಸ್ ಪೆಕ್ಟರ್ ಅವರ ಸರ್ವೀಸ್ ರಿವಾಲ್ವರ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ನಂತರ ಅವರನ್ನು ತಮ್ಮ ವಶಕ್ಕೆ ಪಡೆದಿದ್ದರು. ಆರೋಪಿ ಭವಾನಿ ಸೇನ್ ಗೌಡ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2), (ಎ) (ಬಿ), 324, 449 ಹಾಗೂ 506 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತೆಲಂಗಾಣ ರಾಜ್ಯದ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿದ್ದು. ಕಾಳೇಶ್ವರಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭವಾನಿ ಸೇನ್, ಜಯಶಂಕರ್ ಎಂಬವರು ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರವೆಸಗಿದ್ದರು. ಬಂದೂಕು ತೋರಿಸಿ ಕ್ರೌರ್ಯ ಮೆರೆದಿದ್ದರು.
ಇದೀದ ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರನ್ನು ಬಂಧಿಸಿ 14 ದಿನಗಳ ಕಾಲ ರಿಮಾಂಡ್​ಗೆ ನೀಡಲಾಗಿದೆ. ಈ ಹಿಂದೆಯೂ ಎಸ್‌ಐ ತನ್ನ ಹುದ್ದೆಯ ದೌಲತ್ತಿನಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಇದ್ದು ಪ್ರಕರಣ ಕೂಡ ದಾಖಲಿಸಲಾಗಿದೆಯಂತೆ.! ಕೊನೆಗೂ ನೀಚ ಅಧಿಕಾರಿಯ ಕರ್ಮಕಾಂಡ ಬಯಲಾಗಿದೆ ತಾನು ಮಾಡಿದ ಪಾಪದ ಕೆಲಸಕ್ಕೆ ಸರಿಯಾದ ಬೇಲೆ ತೆರಬೇಕಾಗಿದೆ…..

ಈ ಘಟನೆಯ ಬೆನ್ನಿಗೇ ಆರೋಪಿ ಸಬ್ ಇನ್ಸ್ ಪೆಕ್ಟರ್ ಇನ್ನೂ ಮೂವರು ಮಹಿಳಾ ಪೊಲೀಸ್ ಪೇದೆಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಗಳು ಬೆಳಕಿಗೆ ಬಂದಿವೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಮಹಾ ನಿರೀಕ್ಷಕ ಎ.ವಿ.ರಂಗನಾಥ್ ಅವರು ಗೌಡ್ ರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!