ಶಿವಮೊಗ್ಗ, ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ: ನಾಮಪತ್ರ ಹಿಂಪಡೆದ ಏಳು ಜನ ಅಭ್ಯರ್ಥಿಗಳು

ಶಿವಮೊಗ್ಗ, ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ: ನಾಮಪತ್ರ ಹಿಂಪಡೆದ ಏಳು ಜನ ಅಭ್ಯರ್ಥಿಗಳು

ಜೂನ್28 ರಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ

ಅಶ್ವಸೂರ್ಯ/ಶಿವಮೊಗ್ಗ: ಡಿಸಿಸಿ‌ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಾಮಪತ್ರ ಹಿಂಪಡೆಯಲು ಇಂದು (22) ಕೊನೆಯ ದಿನವಾಗಿತ್ತು.ಈ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಏಳು ಜನ‌ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.

ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜೂ.20 ಕೊನೆಯ ದಿನವಾಗಿತ್ತು. ಒಟ್ಟು 
35 ಜನ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರ ಪರಿಶೀಲನೆ ಮುಗಿದಾಗಲೂ ಯಾರ ನಾಮಪತ್ರವೂ ತಿರಸ್ಕೃತವಾಗಿರಲಿಲ್ಲ.
ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಏಳು ಜನರು ತಮ್ಮ ನಾಮಪತ್ರವನ್ನು ಹಿಂಪಡೆದು ಸ್ಪರ್ಧೆಯಿಂದ ಹಿಂದೆಸರಿದಿದ್ದಾರೆ. ಈ ಕಾರಣದಿಂದ 35 ಜನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಳಲ್ಲಿ ಏಳು ಜನ ನಾಮಪತ್ರ ಹಿಂಪಡೆದು ಕೊಂಡಿದ್ದರಿಂದ ಅಂತಿಮವಾಗಿ 28 ಜನ ಮಾತ್ರ ಅಖಾಡದಲ್ಲಿ ಉಳಿದಿದ್ದಾರೆ. 28 ಜನರಲ್ಲಿ 13 ಜನರು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜೂ.28 ಶುಕ್ರವಾರ ಚುನಾವಣೆ ನಡೆಯಲಿದ್ದು ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ.

ಹೊಸನಗರದ ಪರಮೇಶ್ವರ್ ಒಬ್ಬರೇ ಅವಿರೋಧ ಆಯ್ಕೆಯಾಗಲಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದವರಲ್ಲಿ ಎಂ.ಶ್ರೀಕಾಂತ್, ಆರ್ ಸಿ ನಾಯ್ಕ್, ದುದ್ದೇಶ್, ಹೆಚ್ ಎನ್ ವಿಜಯಕುಮಾರ್, ಹೆಚ್ ಮಲ್ಲಿಕಾರ್ಜುನ್
ವಿಜಯ ಕುಮಾರ್(ಧನಿ), ಹೆಚ್ ಜಿ ಮಲ್ಲಯ್ಯ ನಾಮಪತ್ರವನ್ನು ಇಂದು ಹಿಂಪಡೆದಿದ್ದಾರೆ.

ದುಗ್ಗಪ್ಪಗೌಡ, ಆರ್ ಎಂ.ಮಂಜುನಾಥ್ ಗೌಡ,ಗೋಪಾಲಕೃಷ್ಣ ಬೇಳೂರು, ಎಸ್ ಕೆ ಮರಿಯಪ್ಪ, ಎಸ್ಪಿ ದಿನೇಶ್, ಯೋಗೀಶ್, ಡಿ.ಆನಂದ್, ಪರಮೇಶ್ವರ್, ಸೇರಿದಂತೆ 28 ಜನ ಚುನಾವಣೆಯ ಅಖಾಡದಲ್ಲಿ ಉಳಿದಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!