ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಕ್ಷಣ ಗಣನೆ : ಸಿಎಂ ಸಿದ್ದರಾಮಯ್ಯ
ಅಶ್ವಸೂರ್ಯ/ಮೈಸೂರು: ಆದಷ್ಟೂ ಬೇಗ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯನ್ನು ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಚುನಾವಣೆ ಯಾವಾಗ ನಡೆಸುತ್ತೀರಿ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ ಅವರು, ಆದಷ್ಟು ಬೇಗನೆ ಎರಡು ಚುನಾವಣೆಯನ್ನು ನಡೆಸುತ್ತೇವೆ ಎಂದರು.
ಸೇಡಿನ ರಾಜಕಾರಣ ಮಾಡಲ್ಲ ಕಾಂಗ್ರೆಸ್ ನಿಂದ ಯಡಿಯೂರಪ್ಪ ಟಾರ್ಗೆಟ್ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ನನ್ನನ್ನು ಸೇರಿದಂತೆ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಹಾಗಾದರೆ ಇದನ್ನು ಏನೆಂದು ಹೇಳಬೇಕು. ನಾವು ಕ್ರಮ ಕೈಗೊಂಡರೇ ಟಾರ್ಗೆಟ್ ಎನ್ನುತ್ತಾರೆ. ಅವರು ಮಾಡುತ್ತಿರುವುದು ಏನು ಎಂದು ಪ್ರಶ್ನೆ ಮಾಡಿದರು ನಮಗೆ ಸೇಡಿನ ರಾಜಕಾರಣ ಮಾಡಿ ಗೊತ್ತಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಇಂದು ಮತ್ತೊಮ್ಮೆ ಹೇಳುತ್ತಿದ್ದೇನೆ. ನಾವು ಸೇಡಿನ ರಾಜಕಾರಣ ಮಾಡುವುದಿಲ್ಲ. ದ್ವೇಷ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಅದು ಏನಿದ್ದರೂ ಬಿಜೆಪಿಯವರ ಕೆಲಸ.
ಹೆದರಿಸಿ ಬೆದರಿಸೋದು ಬಿಜೆಪಿ ಸಂಸ್ಕೃತಿ.ನಮ್ಮದಲ್ಲ ಈ ಕಾರಣದಿಂದಲೇ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿಲ್ಲ ಎಂದರು. ತನ್ನ ದುರಹಂಕಾರದಿಂದ ಬಿಜೆಪಿ 240ಕ್ಕೆ ತೃಪ್ತಿಪಡುವಂತಾಗಿದೆ. ಆರ್ ಎಸ್ ಎಸ್ ನಾಯಕರ ಹೇಳಿಕೆ ವಿಚಾರಕ್ಕೆ ಮಾತನಾಡಿದ, ಬಿಜೆಪಿ ಆರ್ ಎಸ್ಎಸ್ ನ ಮುಖವಾಡ. ಇವರು ಏನೇ ಮಾಡಿದರೂ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದರು.
ನೀಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಬಗ್ಗೆ ಮಾತನಾಡಿ, ನಡೆದಿರುವ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು. ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಬೇಕು. ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಬಾರದು ಎಂದು ಸಿ ಎಂ ಹೇಳಿದರು