ಕೃಪಾಂಕ ನೀಡಲಾಗಿದ್ದ 1563 ವಿದ್ಯಾರ್ಥಿಗಳಿಗೆ ನೀಟ್ ಮರು ಪರೀಕ್ಷೆ : ಎನ್‌ಎಸ್‌ಯುಐ ಹೋರಾಟಕ್ಕೆ ಸಂದ ಜಯ

ಕೃಪಾಂಕ ನೀಡಲಾಗಿದ್ದ 1563 ವಿದ್ಯಾರ್ಥಿಗಳಿಗೆ ನೀಟ್ ಮರು ಪರೀಕ್ಷೆ : ಎನ್‌ಎಸ್‌ಯುಐ ಹೋರಾಟಕ್ಕೆ ಸಂದ ಜಯ

ಅಶ್ವಸೂರ್ಯ/ಶಿವಮೊಗ್ಗ: ಕೃಪಾಂಕ ನೀಡಲಾಗಿದ್ದ 1563 ವಿದ್ಯಾರ್ಥಿಗಳಿಗೆ ಜೂನ್ 23ರಂದು ನೀಟ್ ಮರು ಪರೀಕ್ಷೆ ನಡೆಸುತ್ತಿರುವುದು ಎನ್‌ಎಸ್‌ಯುಐ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಎನ್‌ಎಸ್‌ಯುಐ ನಗರಾಧ್ಯಕ್ಷ ಚರಣ್ ತಿಳಿಸಿದ್ದಾರೆ.
ನೀಟ್ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಎನ್‌ಎಸ್‌ಯುಐ ವಿದ್ಯಾರ್ಥಿಗಳ ಪರವಾಗಿ ರಾಜ್ಯಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿತ್ತು. ಕೃಪಾಂಕ ನೀಡಿರುವುದು ಹಾಗೂ ಒಂದೇ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಎನ್‌ಎಸ್‌ಯುಐ ವತಿಯಿಂದ ಪರೀಕ್ಷಾ ಅಕ್ರಮದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಕೃಪಾಂಕವನ್ನು ರದ್ದುಪಡಿಸಿದ್ದು, 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ. ಎನ್‌ಎಸ್‌ಯುಐ ಸಂಘಟನೆಯಿಂದ ಹೋರಾಟ ನಡೆಸಿದ ಪರಿಣಾಮವಾಗಿ ಜಯ ಸಿಕ್ಕಿದೆ ಎಂದು ಎನ್‌ಎಸ್‌ಯುಐ ನಗರಾಧ್ಯಕ್ಷ ಚರಣ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮದ ಕುರಿತು ಪ್ರತಿಭಟಿಸುತ್ತಿದ್ದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಾಕಿರುವ ಎಫ್‌ಐಆರ್ ಹಿಂಪಡೆಯಬೇಕು ಎಂದು ಕೂಡ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!