ತಮಿಳು ಚಿತ್ರರಂಗದ ಪ್ರಖ್ಯಾತ ನಟ ಪ್ರದೀಪ್ ಕೆ ವಿಜಯನ್ ಮನೆಯಲ್ಲಿ ಶವವಾಗಿ ಪತ್ತೆ.!

ತಮಿಳು ಚಿತ್ರರಂಗದ ಪ್ರಖ್ಯಾತ ನಟ ಪ್ರದೀಪ್ ಕೆ ವಿಜಯನ್ ಮನೆಯಲ್ಲಿ ಶವವಾಗಿ ಪತ್ತೆ.!

news.ashwasurya.in/Shivamogga

✍️ SUDHIR VIDHATA

ಅಶ್ವಸೂರ್ಯ/ಚೆನೈ: ಚೆನ್ನೈನಲ್ಲಿ ಪ್ರಖ್ಯಾತ ನಟ ತಮ್ಮ ನಿವಾಸದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.! ನಟನ ದಿಢೀರ್ ಸಾವಿನಿಂದ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಇದು ಆತ್ಮಹತ್ಯೆಯೋ? ಕೊಲೆಯೋ ಎನ್ನುವುದರ ಬಗ್ಗೆ ಚೆನ್ನೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
 ತಮಿಳು ಸಿನಿಮಾ ಥೇಗಿಡಿ, ಹೇ ಸಿನಾಮಿಕಾದಲ್ಲಿ ನಟಿಸಿದ್ದ ಪ್ರಖ್ಯಾತ ನಟ ಪ್ರದೀಪ್‌ ಕೆ ವಿಜಯನ್‌ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಮಿಳಿನ ಹಲವು ಸಿನಿಮಾಗಳಲ್ಲಿ ವಿಲನ್‌ ಹಾಗೂ ಕಾಮಿಡಿ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟ ಪ್ರದೀಪ್‌ ಕೆ ವಿಜಯನ್‌ ಬುಧವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಅವರ ಆತ್ಮೀಯರು ಎರಡು ದಿನಗಳಿಂದ ಫೋನ್‌ ಮೂಲಕ ಸಂಪರ್ಕ ಮಾಡಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಕೊನೆಗೆ ಅವರು ಮನೆಗೆ ಬಂದು ನೋಡಿದಾಗ ಪ್ರದೀಪ್‌ ಅವರ ಮೃತದೇಹ ಬಿದ್ದಿರುವುದು ಕಂಡಿದೆ.ತಕ್ಷಣವೇ ಪೋಲಿಸರಿಗೆ ಸುದ್ದಿಮುಟ್ಟಿಸಿ ಮನೆ ಒಳಪ್ರವೇಶಿಸಿ ನೋಡಿದಾಗ ನಟ ಪ್ರದೀಪ್ ಸತ್ತಿರುವುದು ಖಚಿತವಾಗಿದೆ.! ಸಾವಿಗೆ ಕಾರಣವೇನು.? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.

ನಟ ಪ್ರದೀಪ್ ಅವಿವಾಹಿತರಾಗಿದ್ದು, ಚೆನ್ನೈನ ಪಾಲವಕ್ಕಂನಲ್ಲಿರುವ ಶಂಕರಪುರಂ First Street ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಅವರು ಇತ್ತೀಚೆಗೆ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರಂತೆ.ಆತ್ಮೀಯರ ಬಳಿ ಹೇಳಿಕೊಙಡುದ್ದರ ಹೇಳಿಕೊಙಡುದ್ದರಂರೆ.! ಪ್ರದೀಪ್‌ಗೆ ಹಲವಾರು ಬಾರಿ ಕರೆ ಮಾಡಿದರೂ ಎರಡು ದಿನಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರ ಮನೆಗೆ ಹೋಗಿದ್ದರು.
ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಸ್ನೇಹಿತ ಸಾಕಷ್ಟು ಬಾರಿ ಫೋನ್‌ ಮಾಡಿದರೂ, ಉತ್ತರ ಬರದ ಹಿನ್ನಲೆಯಲ್ಲಿ ಪೊಲೀಸರಿಗೆ ಸ್ನೇಹಿತರು ಮಾಹಿತಿ ನೀಡಿದ್ದರು.  ಆ ಬಳಿಕ ನೀಲಂಕರೈ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಮನೆಯ ಬಾಗಿಲು ಒಡೆದಿದ್ದಾರೆ. ಈ ಹಂತದಲ್ಲಿ ಪ್ರದೀಪ್‌ ಅವರ ಶವ ಪತ್ತೆಯಾಗಿದ್ದು, ತಲೆಯ ಭಾಗದಲ್ಲಿ ಪೆಟ್ಟು ಕಾಣಿಸಿಕೊಂಡಿದೆ. ಪೊಲೀಸರು ಮೃತದೇಹವನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಎರಡು ದಿನಗಳ ಹಿಂದೆ ತಲೆಗೆ ಪೆಟ್ಟು ಬಿದ್ದು ಹೃದಯಾಘಾತದಿಂದ ಪ್ರದೀಪ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ನೀಲಂಕಾರೈ ಪೊಲೀಸರು ಸಾವಿನ ಕಾರಣವನ್ನು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಪ್ರದೀಪ್‌ ಅವರ ಸಾವಿನ ಬೆನ್ನಲ್ಲಿಯೇ ನಟ-ನಟಿಯರು ಆಘಾತ ವ್ಯಕ್ತಪಡಿಸಿದ್ದಾರೆ. ನಟಿ ಹಾಗೂ ಗಾಯಕಿ ಸೌಂದರ್ಯ ಬಾಲಾ ನಂದಕುಮಾರ್‌ ಟ್ವೀಟ್‌ ಮಾಡಿದ್ದು, ನಿಜಕ್ಕೂ ಇದು ಆಘಾತಕಾರಿ ವಿಚಾರ. ಒಬ್ಬ ಸಹೋದರನ ರೀತಿಯಲ್ಲಿ ನನಗೆ ಆಪ್ತರಾಗಿದ್ದರು. ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದಿದ್ದಾರೆ.

ಪ್ರದೀಪ್ ನಾಯರ್ ಪಪ್ಪು ಎಂದು ಜನಪ್ರಿಯವಾಗಿದ್ದ ಪ್ರದೀಪ್, 2013 ರ ಕೃಷ್ಣನ್ ಜಯರಾಜ್ ನಿರ್ದೇಶನದ ಸೊನ್ನ ಪುರಿಯಾತು ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪಿ ರಮೇಶ್ ಅವರ 2014 ರ ಅಶೋಕ್ ಸೆಲ್ವನ್ ಮತ್ತು ಜನನಿ-ನಟಿಸಿದ ತೇಗಿಡಿಯಲ್ಲಿ ಪೂರ್ಣಚಂದ್ರನ್ (ಸಡಗೋಪ್ಪನ್) ಪಾತ್ರದಿಂದ ಅವರು ಪ್ರಖ್ಯಾತಿಗೇರಿದ್ದರು. ಚಿತ್ರದಲ್ಲಿ ಅವರು ಪತ್ತೇದಾರಿ ಪಾತ್ರವನ್ನು ನಿವರ್ಹಿಸಿದ್ದರು. ರಾಘವ ಲಾರೆನ್ಸ್ ಅವರೊಂದಿಗೆ ಎಸ್ ಕತಿರೇಸನ್ ಅವರ 2023 ರ ಚಿತ್ರ ರುದ್ರನ್ ಅವರ ಕೊನೆಯ ಚಿತ್ರ. ಪ್ರದೀಪ್ ಪದವೀಧರರಾಗಿದ್ದು, ನಟನೆಯ ಮೇಲಿನ ಉತ್ಸಾಹದಿಂದಾಗಿ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!