ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಆರ್ ಎಂ ಮಂಜುನಾಥ ಗೌಡ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಭೆ
news.ashwasurya.in/Shivamogga
SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ದಿನಾಂಕ,14,ಶುಕ್ರವಾರ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಆರ್ ಎಂ ಮಂಜುನಾಥ್ ಗೌಡರ ಅಧ್ಯಕ್ಷತೆಯಲ್ಲಿ ಮಲೆನಾಡು ವ್ಯಾಪ್ತಿಯ ಅಧಿಕಾರಿಗಳ ಅನುಷ್ಠಾನ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಗಳಿಂದ ಮಾಹಿತಿಯನ್ನು ಪಡೆದ ಅಧ್ಯಕ್ಷರು ಎಲ್ಲಾ ಜಿಲ್ಲೆಗಳ 2019, 2020, 2021, 2022, ಮತ್ತು 2023 ಸಾಲಿನ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಗುಣಮಟ್ಟದ ಬಗ್ಗೆ ಅದಷ್ಟು ಬೇಗ ತಿಳಿಸಿ ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ತಯಾರಿ ಮಾಡಿಕೊಂಡು ಮತ್ತು ಹಳೇ ಕಾಮಗಾರಿ ಹೊಸ ಕಾಮಗಾರಿಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದರು.
ಮತ್ತು ನಮ್ಮ ಈಗಿನ ಸರ್ಕಾರದ ಹೊಸ ಶಾಸಕರುಗಳ ಗಮನಕ್ಕೆ ತಂದು ಕಾಮಗಾರಿಗಳ ಬದಲಾವಣೆ ಇದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಒಟ್ಟಿನಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಾನ್ಯ ಮುಖಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರು ಮತ್ತು ನಮ್ಮ ಮಂಡಳಿಯ ಸಚಿವರಾದ ಡಿ ಸುಧಾಕರ್ ಅವರ ಮಾರ್ಗದರ್ಶನಲ್ಲಿ ಹತ್ತು ಹಲವು ಹೊಸ ಕಾಮಗಾರಿ ಮತ್ತು ನಮ್ಮ ಮಲೆನಾಡು ಭಾಗದ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ನಮ್ಮ ಗಮನ ಇರಲಿದ್ದು ನಿಮ್ಮೆಲ್ಲರ ಸಂಪೂರ್ಣ ಸಹಕಾರ ಹೆಚ್ಚು ಇರಬೇಕು ಎಂದು ಅನುಷ್ಠಾನ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಸಹ ಕಾರ್ಯದರ್ಶಿ ಹನುಮ ನಾಯಕ್ ಇಂಜಿನಿಯರ್ ಹೆಚ್ ವಿ ವಿಜಯ್ ಹಾಗೂ ಬಂಗಾರಪ್ಪ ಅವರು ಇದ್ದರು