ಹಾಸನದ ರೌಡಿಶೀಟರ್ ಚೈಲ್ಡ್ ರವಿ ಕೊಲೆ ಪ್ರಕರಣ ನಾಲ್ವರ ಬಂಧನ

ಹಾಸನದ ರೌಡಿಶೀಟರ್ ಚೈಲ್ಡ್ ರವಿ ಕೊಲೆ ಪ್ರಕರಣ: ನಾಲ್ವರ ಬಂಧನ

news.ashwasurya.in

✍️ ಸುಧೀರ್ ವಿಧಾತ

ಹಾಸನದಲ್ಲಿ ಹಾಡುಹಗಲೆ ನೆಡೆದ ನಟೋರಿಯಸ್ ರೌಡಿಶೀಟರ್ ಚೈಲ್ಡ್ ರವಿ ಕೊಲೆ ಪ್ರಕರಣ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೆನ್ಷನ್ ಮೊಹಲ್ಲ ಪೋಲಿಸು

ಅಶ್ವಸೂರ್ಯ/ಹಾಸನ : ಹಾಸನ ನಗರವನ್ನೇ ಬೆಚ್ಚಿ ಬೀಳಿಸಿದ್ದ ನಟೋರಿಯಸ್ ರೌಡಿಶೀಟರ್ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು ಈ ಪ್ರಕರದ ಕುರಿತು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಆರೋಪಿ ರಂಗೋಲಿ ಹಳ್ಳದ ಪ್ರೀತಂ ಅಲಿಯಾಸ್ ಗುಂಡಿಪ್ರೀತು (27), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ(26), ರಂಗನಾಥ್ ಅಲಿಯಾಸ್ ರಂಗ ಚೇತು(26) ಮತ್ತು ಅಮಿತ್ ಅಲಿಯಾಸ್ ಅಮ್ಮಿ (31) ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಚೈಲ್ಡ್ ರವಿ ಮತ್ತು ಪ್ರೀತಂ ಇಬ್ಬರೂ ಒಂದು ಕಾಲದ ಸ್ನೇಹಿತರಾಗಿದ್ದರು ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಈ ನಡುವೆ ಚೈಲ್ಡ್ ರವಿ ಆಗಾಗ ಪ್ರೀತಂಗೆ ಕರೆ ಮಾಡಿ ಆವಾಜ್ ಹಾಕುತ್ತಿದ್ದನಂತೆ. ಇದೇ ಕಾರಣಕ್ಕೆ ಚೈಲ್ಡ್ ರವಿಯ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ ಎಂದರು.

ಇದಲ್ಲದೇ ಇನ್ನಾವ ಕಾರಣಕ್ಕೆ ಮರ್ಡರ್ ಮಾಡಲಾಗಿದೆ ಎಂಬುದರ ಬಗ್ಗೆ ಹಾಗೂ ಆಡಿಯೋ ಸಂಭಾಷಣೆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ರವಿ ಅವರ ಪತ್ನಿ ನೀಡಿದ ದೂರಿನ ಆಧರಾದ ಮೇಲೆ ಆರೋಪಿಗಳನ್ನು ಬಂಧಿಸಲು ಎಎಸ್ಪಿ ವೆಂಕಟೇಶ್‌ನಾಯ್ಡು ಮತ್ತು ಡಿವೈಎಸ್ಪಿ ಮುರಳಿಧರ್ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ನಮ್ಮ ತಂಡ ಕಳೆದ ರಾತ್ರಿ 8 ಗಂಟೆ ವೇಳೆ ಹಾಸನ ತಾಲೂಕಿನ ಗ್ಯಾರಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ವಶಕ್ಕೆ ಪಡೆದಿದ್ದರೆ. ಇದೀಗ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಕೃತ್ಯ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ನಮ್ಮ ಅಧಿಕಾರಿಗಳು ಹಾಗೂ ತಂಡದ ಕಾರ್ಯವೈಖರಿ ಪ್ರಶಂಸನಾರ್ಹ ಎಂದು ಅಭಿನಂದಿಸಿದರು. 

ಚೈಲ್ಡ್ ರವಿ ವಿರುದ್ಧ 2020 ರಲ್ಲಿ ದಾಖಲಾಗಿದ್ದ 394, 504 ಪ್ರಕರಣವೇ ಕೊನೆ, ಆದರೆ ಪ್ರೀತಂ ವಿರುದ್ಧ 13 ಕೇಸ್ ಇವೆ. ಇವುಗಳಲ್ಲಿ 10 ಖುಲಾಸೆ ಯಾಗಿದ್ದು, 3 ವಿಚಾರಣೆ ಹಂತದಲ್ಲಿವೆ.
ಅನೇಕ ಸಲ ಜೈಲು ಸೇರಿದ್ದ ಈತ, ಹೊರ ಬಂದ ನಂತರ ಅದೇ ಚಾಳಿ ಮುಂದುವರಿಸಿದ್ದ ಎಂದು ಎಸ್ಪಿ ಹೇಳಿದರು.
ಪ್ರೀತಮ್ ಕೂಡ ನಟೋರಿಯಸ್ ಆಗಿದ್ದು ಇವನ ಮೇಲೆ ರೌಡಿಶೀಟ್ ತೆರೆಯಲಾಗಿದೆ. ಹಾಸನದ ರೌಡಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಪ್ರೀತಮ್ ಇತ್ತೀಚೆಗೆ ಪಾತಕ ಲೋಕದಲ್ಲಿ ಸಕ್ರಿಯನಾಗಿದ್ದ ತನ್ನದೆ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಹಾಸನದಲ್ಲಿ ಹಾವಳಿಮಾಡುತ್ತಿದ್ದ. ತನ್ನದೆ ಮಾಜಿ ಗೆಳೆಯನನ್ನು ಕೊಂದು ಜೈಲು ಸೇರಿದ್ದಾನೆ

Leave a Reply

Your email address will not be published. Required fields are marked *

Optimized by Optimole
error: Content is protected !!