ಶಿವಣ್ಣನ ಬಗ್ಗೆ ಮನಬಂದಂತೆ ಮಾತನಾಡಿದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿಹ ನಟ ಶಿವರಾಜ್ ಕುಮಾರ್ ಅಭಿಮಾನಿಗಳು.!
news.ashwasurya.in
SUDHIR VIDHATA
ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದ ಮೇಲೆ ನಟ ಶಿವರಾಜ್ ಕುಮಾರ್ ಅಭಿಮಾನಿಗಳು ಶನಿವಾರ ಮುತ್ತಿಗೆ ಹಾಕಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಶಿವರಾಜಕುಮಾರ್ ಅವರು ಸೋತ ನಂತರದಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸೋಶಿಯಲ್ ಮೀಡಿಯಾ ಮೂಲಕ ಶಿವಣ್ಣ ಹಾಗೂ ಗೀತಾ ಬಗ್ಗೆ ಮನಸ್ಸಿಗೆ ಬಂದಂತೆ ಬರೆದಿದ್ದರು. ನನ್ನ ತಂಗಿಯ ಗಂಡ ಡಾ. ಶಿವರಾಜ್ ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ಕುಮಾರ್ ಬಂಗಾರಪ್ಪ ವ್ಯಂಗ್ಯವಾಗಿ ಬರೆದಿದ್ದಾರೆ. ಕುಮಾರ್ ಬಂಗಾರಪ್ಪನ ಈ ಸ್ಟೇಟಸ್ಸಿಗೆ ನಟ ಶಿವರಾಜಕುಮಾರ್ ಫ್ಯಾನ್ಸ್ ಕಿಡಿಕಾರಿದ್ದಾರೆ.ಸಿಟ್ಟಿಗೆದ್ದ ಅಭಿಮಾನಿಗಳು ಕುಮಾರ್ ಬಂಗಾರಪ್ಪನವರ ಮನೆಯ ಮೇಲೆ ಮುತ್ತಿಗೆಗೆ ಯತ್ನಿಸಿದ್ದಾರೆ.
ಕುಮಾರ್ ಬಂಗಾರಪ್ಪ ಶಿವಣ್ಣನ ಹತ್ತಿರ ಕ್ಷಮೆ ಹೇಳಬೇಕೆಂದು
ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ನಿವಾಸಕ್ಕೆ ನಟ ಶಿವರಾಜ್ ಕುಮಾರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಶಿವರಾಜ್ ಕುಮಾರ್ ಹಾಗೂ ರಾಜ್ ಕುಮಾರ್ ಕುಟುಂಬದ ಬಗ್ಗೆ ಕುಮಾರ್ ಬಂಗಾರಪ್ಪ ಲಘುವಾಗಿ ಮಾತಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕುಮಾರ್ ಬಂಗಾರಪ್ಪ ಹೊರಗೆ ಬಂದು ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದು ಮನೆಗೆ ನುಗ್ಗಲು ಮುಂದಾಗಿದ್ದರು.
ತಕ್ಷಣವೇ ಎಚ್ಚೆತ್ತುಕೊಂಡ ಪೋಲಿಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.
ಮನೆ ಗೇಟ್ ಒಳಗೆ ನುಗ್ಗಿ ಕುಮಾರ್ ಬಂಗಾರಪ್ಪನವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅನಾಹುತ ಆಗುವ ಮೊದಲೇ ಮುತ್ತಿಗೆ ಹಾಕಲು ಮುಂದಾಗಿದ್ದ ಶಿವಣ್ಣನ ಅಭಿಮಾನಿಗಳನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವಣ್ಣನ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.ತಕ್ಷಣವೇ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೀತಾ ಶಿವರಾಜಕುಮಾರ್ ವಿರುದ್ಧ ಲಘುವಾಗಿ ಮಾತನಾಡಿದ ಕುಮಾರ್ ಬಂಗಾರಪ್ಪ .!
ಶಿವಮೊಗ್ಗ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಯ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ , ಗೀತಾ ಶಿವರಾಜ್ಕುಮಾರ್ ವಿರುದ್ಧ ಕಿಡಿಕಾರಿದ್ದರು. ಕುಮಾರ್ ಬಂಗಾರಪ್ಪ ಸೋಶಿಯಲ್ ಮೀಡಿಯಾ ಪೋಸ್ಟ್ ಸಂಚಲನ ಮೂಡಿಸಿತ್ತು ಶಿವಣ್ಣನ ಆಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಕುಮಾರ್ ಬಂಗಾರಪ್ಪನವರ ವರ್ತನೆ.
ಯಾವುದೇ ಅಭ್ಯರ್ಥಿ ಸೋತ ತಕ್ಷಣ ಲಘುವಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಅದರಲ್ಲೂ ಕುಮಾರ್ ಬಂಗಾರಪ್ಪನವರಿಗೆ ಮೊದಲೇ ಇಲ್ಲಾ ಕಾರಣ ಅವರು ಕೂಡ ಸೋತವರೆ ಎಂದು ಅರಿವಿಗೆ ಬರಬೇಕಿತ್ತು. ತಾನು ಕೂಡ ಸೋಲಿನ ಮನೆಯಲ್ಲಿ ನಿಂತುಕೊಂಡು ಇನ್ನೊಬ್ಬರ ಸೋಲಿಗೆ ಖುಷಿಪಟ್ಟು ವ್ಯಂಗವಾಗಿ ಮಾತನಾಡುವುದು ಎಷ್ಟು ಸರಿ ಎನ್ನುವುದು ಶಿವಣ್ಣನ ಅಭಿಮಾನಿಗಳ ಪಶ್ನೆಯಾಗಿದೆ.?
ಅದೇನು ದುರಂತವೊ ದಿವಂಗತ ಎಸ್ ಬಂಗಾರಪ್ಪನವರ ಪ್ರತಿಷ್ಠಿತ ಕುಟುಂಬದ ಜಗಳ ಬಿದಿ ರಂಪವಾಗುತ್ತಿದೆ. ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕಾದ ವಿಷಯ ನಡು ಹಾದಿಯಲ್ಲಿ ಚರ್ಚೆಯಾಗುತ್ತಿದೆ. ಇದೆಲ್ಲಾ ಬೇಕಾ.? ದಯವಿಟ್ಟು ಇನ್ನಾದರು ಇದನ್ನು ಬಿಡಿ ಕಾರಣ ನಾವು ಕೂಡಾ ಜನಪ್ರಿಯ ನಾಯಕ ಬಡವರ ಬಂಧು ಎನಿಸಿಕೊಂಡ ಕರ್ನಾಟಕ ಕಂಡ ಧೀಮಂತ ರಾಜಕಾರಣಿ ದಿವಂಗತ ಎಸ್ ಬಂಗಾರಪ್ಪನವರ ಕಟ್ಟಾ ಅಭಿಮಾನಿಗಳು ಎಂದು ಎಸ್ ಬಂಗಾರಪ್ಪನವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ