Shimoga Zilla Panchayat ex president Balkish Banu MLC ticket.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಲ್ಕಿಷ್ ಬಾನು ಅವರಿಗೆ ಒಲಿದ ಎಂಎಲ್‌ಸಿ ಟಿಕೆಟ್.!ಇಂದು ನಾಮಪತ್ರ ಸಲ್ಲಿಕೆ
news.ashwasurya.in/Shivamogga
Sudhir Vidhata
ಶಿವಮೊಗ್ಗ/ಬೆಂಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ನಿನ್ನೆ ಏಳು ಸ್ಥಾನಗಳ ಜೊತೆಗೆ ಮುಂಬರುವ ಪರಿಷತ್ ಉಪ ಚುನಾವಣೆಗೂ ಕೂಡ ಅಭ್ಯರ್ಥಿ ಘೋಷಿಸಿದೆ. ಅಲ್ಪಸಂಖ್ಯಾತ ಕೋಟಾ ದಡಿ ಭದ್ರಾವತಿಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಬಲ್ಕಿಷ್ ಬಾನು ಎಂಬ ಅಲ್ಪಸಂಖ್ಯಾತ ಮಹಿಳೆಗೆ ಕಾಂಗ್ರೆಸ್ ವಿಧಾನ ಪರಿಷತ್ಗೆ ಟಿಕೆಟ್ ನೀಡಿದೆ.
ಬಲ್ಕಿಷ್ ಬಾನು ಯಾರು.?
ಬಲ್ಕಿಷ್ ಬಾನು ಭದ್ರಾವತಿ ತಾಲ್ಲೂಕಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬಲ್ಕಿಷ್ ಬಾನು ಅವರು ನಂತರ ರಾಜಕೀಯದ ಅಂಗಳದಲ್ಲಿ ಹೆಜ್ಜೆ ಹಾಕಿದರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿಯಲು ಆರಂಭಿಸಿದ ಬಾನು ಅವರು ಇಂತಿರುಗಿ ನೋಡಲಿಲ್ಲಿ ನಿಧಾನವಾಗಿ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಪಕ್ಷದ ನಿಷ್ಠಾವಂತ ಅಲ್ಪಸಂಖ್ಯಾತ ನಾಯಕಿಯಾಗಿ ಪ್ರಬಲವಾಗಿ ಬೆಳೆದು ನಿಂತರು.ತನ್ನ ನಾಯಕತ್ವದಲ್ಲಿ ಭದ್ರಾವತಿಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕ ದುಡಿದು ಉತ್ತಮ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.
ಜನತಾದಳದಲ್ಲಿ ಮೊದಲು ಗುರುತಿಸಿಕೊಂಡ ಇವರು ಜನತಾದಳದಲ್ಲಿ ಇದ್ದಾಗ ಶಿವಮೊಗ್ಗ ಜಿಲ್ಲಾ ಪಂಚಾಯತ್ಗೆ 1994-95 ರಲ್ಲಿ ಅಧ್ಯಕ್ಷರಾಗಿದ್ದರು. ಬಳಿಕ 2014 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.ಈಗ ಕಾಂಗ್ರೆಸ್ ಪಕ್ಷದ ವರಿಷ್ಠರು ಬಲ್ಕಿಷ್ ಬಾನು ಅವರೀಗೆ ಈ ಬಾರಿ ಎಂಎಲ್‌ಸಿ ಟಿಕೆಟ್ ನೀಡಿದೆ ಇವರು ಎಂಎಲ್‌ಸಿ ಆಗಿ ಆಯ್ಕೆಯಾಗಲಿದ್ದಾರೆ.
ಪಕ್ಷಕ್ಕಾಗಿ ದುಡಿದ ನನ್ನನ್ನು ಗುರುತಿಸಿ ನನಗೆ ಎಂಎಲ್‌ಸಿ ಟಿಕೆಟ್ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಲ್ಕಿಷ್ ಬಾನು ಅಭಿನಂದನೆ ಸಲ್ಲಿಸಿದ್ದಾರೆ. ನಾನು ಜಿಲ್ಲಾ ಪರಿಷತ್ ಸದಸ್ಯಳಾಗಿದ್ದಾಗಿನಿಂದಲೂ ತಳಮಟ್ಟದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಇಂದು ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು ಪಕ್ಷ ಹೊಸ ಜವಾಬ್ದಾರಿ ನೀಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬಲ್ಕಿಷ್ ಬಾನು ಹೇಳಿದ್ದಾರೆ.
ಬಲ್ಕಿಷ್ ಬಾನು ಅವರು ಇಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ