ರಾಷ್ಟ್ರಧ್ವಜ ಕೈಯಲ್ಲಿ ಹಿಡಿದೆ ಪ್ರಾಣ ಬಿಟ್ಟ ಯೋಧ..! ಅಲ್ಲೆ ಇದ್ದ ವಿದ್ಯಾರ್ಥಿಗಳ ಅರಿವಿಗೆ ಬಾರದೆ ಹೋಯಿತು ಯೋಧನ ಸಾವು !

.The retired soldier, Balwinder Singh Chhabra, had suffered a heart attack and he died on the spot. A video shows Chhabra dancing to the song ‘Maa Tujhe Salaam’ at a free yoga camp organised by a group called the Aastha Yoga Kranti Abhiyan at Agrasen Dham in the city’s Futi Kothi area

ರಾಷ್ಟ್ರಧ್ವಜ ಕೈಯಲ್ಲಿ ಹಿಡಿದೆ ಪ್ರಾಣ ಬಿಟ್ಟ ಯೋಧ..!ಅಲ್ಲೆ ಇದ್ದ ವಿದ್ಯಾರ್ಥಿಗಳ ಅರಿವಿಗೆ ಬಾರಲೆ ಇಲ್ಲ ಯೋಧನ ಸಾವು !

news.ashwasurya.in/Shivamogga

Sudhir Vidhata

ಅಶ್ವಸೂರ್ಯ/ಇಂದೋರ್: ಅದೊಂದು ಯೋಗ ಶಿಬಿರ ಕಾರ್ಯಕ್ರಮ ವಿದ್ಯಾರ್ಥಿಗಳು ಕುಳಿತಿದ್ದರು.ಗಣ್ಯರು ಇದ್ದರು ವೇದಿಕೆಗೆ ಆಗಮಿಸಿದ ಕಾರ್ಯಕ್ರಮದ ಆಹ್ವಾನಿತ ನಿವೃತ್ತ ಯೋಧ ಮಾ ತುಜೆ ಸಲಾಂ ಹಾಡನ್ನು ಹಾಡುತ್ತ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ ಒಂದು ಕಡೆ ದೇಶ ಭಕ್ತಿಯಿಂದ ಯೋಧನ ಬಾಯಿಯಿಂದ ಹೊರಹೊಮ್ಮಿದ ಹಾಡು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಇಳಿ ವಯಸ್ಸಿನಲ್ಲೂ ಹೆಜ್ಜೆಹಾಕಿದ್ದಾರೆ ಅದರೆ ವಿಧಿ ಆಟವೆ ಬೇರೆಯಾಗಿದೆ ಕುಸಿದು ಬಿದ್ದು ಉಸಿರು ಚಲ್ಲಿದ್ದಾರೆ.! ಆದರೆ ವಿದ್ಯಾರ್ಥಿಗಳು, ನೆರೆದಿದ್ದ ಸಿಬ್ಬಂದಿಗಳಿಗೆ ಯೋಧ ಗಡಿಯಲ್ಲಿನ ಚಿತ್ರಣವನ್ನು ನಟನೆ ಮೂಲಕ ವೇದಿಕೆಯಲ್ಲಿ ಮಾಡಿ ತೋರಿಸುತ್ತಿದ್ದಾರೆ ಎಂದುಕೊಂಡಿದ್ದಾರೆ. 

 ಭಾರತೀಯ ಸೇನೆಯ ನಿವೃತ್ತ ಯೋಧ ತಿರಂಗ ಹಿಡಿದು ಮಾ ತುಜೆ ಸಲಾಂ ಹಾಡುತ್ತಲೇ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಆದರೆ ಚಪ್ಪಾಳೆ ತಟ್ಟುತ್ತಿದ್ದ ವಿದ್ಯಾರ್ಥಿಗಳಿಗೆ,ನೆರೆದಿದ್ದವರಿಗೆ ಯೋಧನ ಸಾವು ಅರಿವಿಗೆ ಬಾರಲೆ ಇಲ್ಲ.! ಕುಸಿದು ಬಿದ್ದು ಸಾವಿನ ಮನೆ ಸೇರಿದ ಯೋಧನ ಸಾವು ಯಾರಿಗೂ ಗೊತ್ತಾಗಲೇ ಇಲ್ಲ.ದೇಶ ಸೇವೆಗಾಗಿ ಎದೆಕೊಟ್ಟು ನಿಂತ ಯೋಧ ನಿವೃತ್ತಿಯ ನಂತರ ಕಾರ್ಯಕ್ರಮ ಒಂದರ ವೇದಿಕೆಯ ಮೇಲೆ ತನ್ನ ಬದುಕಿನ ಅಂತ್ಯ ಮುಗಿಸಿದರೆ ಇತ್ತ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಮಾ ತುಜೆ ಹಾಡನ್ನು ಗುನುಗಿದ್ದಾರೆ. ನೆರೆದಿದ್ದವರೂ ನಿವೃತ್ತ ಯೋಧ ಹಾಡಿಗೆ ನಟನೆ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದುಕೊಂಡಿದ್ದಾರೆ. ಹಾಡು ಮುಗಿದರೂ ಯೋಧ ಮೇಲೆಳೆದಾಗ ಸಿಬ್ಬಂದಿಗಳು ಓಡೋಡಿ ಬಂದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟರಲ್ಲೇ ಯೋಧನ ಪ್ರಾಣ ಪಕ್ಷಿ ಹಾರಿ ಹೋಗಿದೆ..!!

ಯೋಧನ ಕೊನೆ ಕ್ಷಣದ ವಿಡಿಯೋ…

ಈ ಘಟನೆ ನೆಡೆದದ್ದು ಮಧ್ಯಪ್ರದೇಶದಲ್ಲಿ. ಮಧ್ಯಪ್ರದೇಶದ ಅಗ್ರಸೇನ್ ಧಾಮದಲ್ಲಿ ಯೋಗ ಶಿಬಿರ ಸಂಸ್ಥೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅದೇ ಊರಿನ ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಚಬ್ರಾಗೆ ಆಹ್ವಾನ ನೀಡಿದ್ದರು. ವಿದ್ಯಾರ್ಥಿಗಳು, ಯೋಗ ಶಿಬಿರಾರ್ಥಿಗಳು ಕುಳಿತಿದ್ದರು. ಹಲವು ಚಟುವಟಿಕಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿವೃತ್ತ ಯೋಧ ಬಲ್ವಿಂದರ್, ತಿರಂಗ ಹಿಡಿದು ವೇದಿಕೆ ಆಗಮಿಸಿದ್ದಾರೆ. ಬಳಿಕ ಮಾ ತುಜೆ ಸಲಾಂ ಹಾಡು ಹಾಡಿದ್ದಾರೆ.

ವೇದಿಕೆ ಹತ್ತಿ ಬಂದ ಬೆನ್ನಲ್ಲೇ ಹೃದಯಾಘಾತವಾಗಿದೆ.
ಯೋಧ ಬಲ್ವಿಂದರ್ ಸಿಂಗ್ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಲೇ ಮಾ ತುಜೆ ಸಲಾಂ ಹಾಡನ್ನು ಮುಂದುವರಿಸಿದ್ದಾರೆ. ಇತ್ತ ಸಿಬ್ಬಂದಿಯೊಬ್ಬರು ಬಂದು ಕೆಳಮುಖವಾಗಿ ಬಿದ್ದಿದ್ದ ತಿರಂಗ ಎತ್ತಿ ಹಿಡಿದು ಹಾರಿಸಿದ್ದಾರೆ. ವಿದ್ಯಾರ್ಥಿಗಳ ಮಾ ತುಜೆ ಸಲಾಂ ಹಾಡು ಹಾಗೂ ಚಪ್ಪಾಳೆಗೆ ತಕ್ಕಂತೆ ತಿರಂಗ ಹಾರಾಡಿಸಿದ್ದಾರೆ. 
ಮಾ ತುಜೆ ಸಲಾಂ ಹಾಡು ಮುಗಿದರೂ ನಿವೃತ್ತ ಯೋಧ ಬಲ್ವಿಂದರ್ ಮೇಲೆಳಲೇ ಇಲ್ಲ. ಈ ವೇಳೆ ಅನುಮಾನ ಹೆಚ್ಚಾಗಿದೆ. ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ. ಆದರೆ ಬಲ್ವಿಂದರ್ ದೇಹದಿಂದ ಯಾವುದೇ ಸ್ಪಂದನ ಇರಲಿಲ್ಲ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಯಾವೂದು ಸಾಧ್ಯವಾಗಿಲ್ಲ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 
ತಪಾಸಣೆ ನಡೆಸಿದ ವೈದ್ಯರು ಬಲ್ವಿಂದರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 2008ರಲ್ಲಿ ಬಲ್ವಿಂದರ್ ಸಿಂಗ್ ಅವರು ಬೈಪಾಸ್ ಸರ್ಜರಿ ಮಾಡಿಸಿದ್ದರು. ಇದೀಗ ಮಾ ತುಜೆ ಸಲಾಂ ಹಾಡು ಹಾಡುತ್ತಲೆ ತಿರಂಗ ಹಿಡಿದುಕೊಂಡೆ ಪ್ರಾಣಬಿಟ್ಟಿದ್ದಾರೆ ಯೋಧ ಬಲ್ವಿಂದರ್ ಸಿಂಗ್.!

Leave a Reply

Your email address will not be published. Required fields are marked *

Optimized by Optimole
error: Content is protected !!