ಮೈಸೂರು ನಗರ ಕಾಂಗ್ರೆಸ್ ನಾಯಕಿ, ಸಹ ನಟಿ ವಿದ್ಯಾರನ್ನು ಬರ್ಬರವಾಗಿ ಹತ್ಯೆಮಾಡಿದ ಪತಿರಾಯ.!
ASHWASURYA/SHIVAMOGGA
SUDHIR VIDHATA
ಶಿವಮೊಗ್ಗ/ಮೈಸೂರು: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೇ ತನ್ನ ಮಡದಿಯನ್ನು ಹತ್ಯೆ ಮಾಡಿರುವ ಘಟನೆ ಬನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನ ತುರಗನೂರಿನ ನಿವಾಸಿ ಕಾಂಗ್ರೆಸ್ ಪಕ್ಷದ ನಾಯಕಿಯಾದ ವಿದ್ಯಾ ಕೊಲೆಯಾಗಿರುವ ಮಹಿಳೆ. ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ಸಹ ನಟಿಯಾಗಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಕ್ರೀಯವಾಗಿದ್ದರು.
ಮೈಸೂರು ಜಿಲ್ಲಾ ರಕ್ಷಣಾ ಅಧಿಕಾರಿ ಸೀಮಾ ಲಾಟ್ಕರ್
ಮೈಸೂರಿನ ಶ್ರೀರಾಂಪುರ ನಿವಾಸಿ ವಿದ್ಯಾ ಅವರು ನಂದೀಶ್ ಅವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿರುವುದಲ್ಲದೆ ಹಲವಾರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ದಂಪತಿ ನಡುವೆ ಸಾಮರಸ್ಯ ಇರಲಿಲ್ಲವೆಂದು ತಿಳಿದುಬಂದಿದೆ.
ನಿನ್ನೆ ತಡರಾತ್ರಿ ವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ತೆರಳಿದ್ದಾರೆ. ಆ ವೇಳೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಈ ವೇಳೆ ಕೋಪಗೊಂಡಿದ್ದ ಪತಿ ನಂದೀಶ್ ಪತ್ನಿ ತಲೆಗೆ ಥಳಿಸಿ ಹತ್ಯೆಗೈದು ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ಪಿ ನಂದಿನಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡೆಸಿದ್ದಾರೆ . ಪತ್ನಿಯನ್ನು ಹತ್ಯಗೈದು ಎಸ್ಕೇಪ್ ಆಗಿರುವ ಆರೋಪಿ ಪತಿ ನಂದೀಶನ ಬಂಧನಕ್ಕೆ ಬನ್ನೂರು ಠಾಣೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.ವಿದ್ಯಾರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.