T20 world cup ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ಆಟಗಾರರ ಜೆರ್ಸಿಯಲ್ಲಿ ನಂದಿನಿ ಲೋಗೋ ಜೋತೆಗೆ ಹೆಸರು ಕನ್ನಡದಲ್ಲಿ ರಾರಾಜಿಸಲಿದೆ

T20 world cup ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ಆಟಗಾರರ ಜೆರ್ಸಿಯಲ್ಲಿ ನಂದಿನಿ ಲೋಗೋ ಜೋತೆಗೆ ಹೆಸರು ಕನ್ನಡದಲ್ಲಿ ರಾರಾಜಿಸಲಿದೆ

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು: ಬರಲಿರುವ ಟಿ–20 ವಿಶ್ವಕ‍ಪ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸಿಕೊಂಡಿದೆ.! ಈ ವಿಷಯವನ್ನು ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡಿದೆ. ಇದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.
ವೆಲ್‌ಕಂ ನಂದಿನಿ’ ಎಂದು ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಅಲ್ಲದೆ ತಂಡದ ಆಟಗಾರರ ಜೆರ್ಸಿಯ ಮೇಲೆ ನಂದಿನಿ ಲಾಂಛನ ಇರುವ ಚಿತ್ರವನ್ನೂ ಪ್ರಕಟಿಸಿದೆ ಅದು ಕನ್ನಡದಲ್ಲಿ.!

ಕರ್ನಾಟಕ ಹಾಲು ಒಕ್ಕೂಟವನ್ನು ನಮ್ಮ ಕ್ರಿಕೆಟ್ ಸಂಸ್ಥೆಗೆ ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಟಿ–20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಹರ್ಷಿಸುತ್ತೇವೆ ಎಂದು ಕ್ರಿಕೆಟ್ ಐರ್ಲೆಂಡ್‌ ಕ್ರಿಕೆಟ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಆ್ಯಂಡ್ರ್ಯೂ ಮೇ ಹೇಳಿದ್ದಾರೆ.

ನಮ್ಮ ತಂಡಕ್ಕೆ ‍‍ಪ್ರತಿಷ್ಠಿತ ಬ್ರ್ಯಾಂಡ್‌ ಒಂದು ಪ್ರಾಯೋಜಕತ್ವ ನೀಡಿರುವುದು ಮುಂದಿನ ಐರ್ಲೆಂಡ್ ಕ್ರಿಕೆಟ್‌ನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ. ನಾವು ಕೆಎಂಎಫ್‌ನ ಕೆ.ಎಂ ಜಗದೀಶ್ ಹಾಗೂ ನಂದಿನಿ ಹಾಲು ಒಕ್ಕೂಟಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೆಲಸ ಮಾಡುವುದಕ್ಕೆ ನಾವು ನಮ್ಮ ತಂಡ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಐರ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಂದಿನಿ ಪ್ರಾಡಕ್ಟ್ ನ ಶ್ರೇಷ್ಠತೆ ಮತ್ತು ಪ್ರತಿ ವಸ್ತುವಿನ ಶುದ್ಧತೆಯೊಂದಿಗೆ ಪ್ರತಿನಿಧಿಸುತ್ತಿದ್ದೇವೆ. ಕಳೆದ 40 ವರ್ಷಗಳಲ್ಲಿ ನಾವು ನಮ್ಮ ನಂದಿನಿಯ ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದೇವೆ.ಭಾರತದಲ್ಲಿ ಮನೆ ಮಾತಾಗಿರುವ ನಮ್ಮ ನಂದಿನಿ ಪ್ರಾಡಕ್ಟ್ ಗಳು ಇತ್ತೀಚೆಗೆ ವಿಶ್ವ ಮಾರುಕಟ್ಟೆಯಲ್ಲಿ ತನ್ನದೆ ಪ್ರಾಬಲ್ಯವನ್ನು ಹೊಂದಿದೆ.

ಈಗ ಐರ್ಲೆಂಡ್‌ ಕ್ರಿಕೆಟ್ ಸಂಸ್ಥೆಯೊಂದಿಗಿನ ನಮ್ಮ ಸಹಯೋಗವು ಕ್ರಿಕೆಟ್ ಅಭಿಮಾನಿಗಳ, ಪ್ರೇಕ್ಷಕರ ಜೋತೆಗೆ ಜಾಗತಿಕ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.

ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ವಿಸ್ತರಿಸುವಲ್ಲಿ ಇದು ಮಹತ್ವದ ಹೆಜ್ಜೆ ಯಾಗಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹೇಳಿದ್ದಾಗಿ ಐರ್ಲೆಂಡ್‌ ಕ್ರಿಕೆಟ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಕಾಟ್‌ಲೆಂಡ್‌ ಕ್ರಿಕೆಟ್ ತಂಡಕ್ಕೂ ನಂದಿನಿ ಸಹ ಪ್ರಾಯೋಜಕತ್ವ ವಹಿಸಿಕೊಂಡಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!