ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ERSS -112 ಪೋಲಿಸ್ ಸಿಬ್ಬಂದಿ : ಇವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,ಮಾನ್ಯ ಪೊಲೀಸ್ ಅಧೀಕ್ಷಕರು,
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಮೇ18 ರಂದು ರಾತ್ರಿ ಸವಳಂಗ ಹೋಗುವ ರಸ್ತೆಯ ಕೊಮ್ಮನಾಳು ಗ್ರಾಮದ ಸಮೀಪ ಮಳೆ ಜೋರಾಗಿ ಬರುತ್ತಿದ್ದ ಸಮಯದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಜೋರಾಗಿ ಹರಿಯುತ್ತಿದ್ದ ಮಳೆಯ ನೀರಿನ ಸೆಳೆತಕ್ಕೆ ಬೈಕಿನಿಂದ ರಸ್ತೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಅ ಸಮಯದಲ್ಲಿ ಅಲ್ಲೆ ಇದ್ದಂತ ಕೇಲವರು ತಕ್ಷಣ ಸಹಾಯಕ್ಕಾಗಿ ERSS – 112 ತುರ್ತು ಸಹಾಯವಾಣಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾದ ERSS – 112 ವಾಹನದ ಸಿಬ್ಬಂದಿಳಾದ ಶ್ರೀ ರಂಗನಾಥ್, ಹೆಚ್. ಸಿ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶ್ರೀ ಪ್ರಸನ್ನ ಕುಮಾರ್, ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರು ತಕ್ಷಣವೇ ಸ್ಥಳಕ್ಕೆ ಹೋಗಿ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಪ್ರಾಮಾಣಿಕ ಕರ್ತವ್ಯವನ್ನು ಮೆಚ್ಚಿ ಸ್ಥಳೀಯರು ಕೊಂಡಾಡಿದ್ದಾರೆ. ಒಂದು ಜೀವವನ್ನು ಉಳಿಸಿದ ಹೆಮ್ಮೆ ERSS -122 ನ ಸಿಬ್ಬಂದಿಗಳಾದರೆ ಇವರ ಕಾರ್ಯ ವೈಖರಿಯನ್ನು ಮೆಚ್ಚಿದ ಅಧಿಕಾರಿಗಳು ಗೌರವಿಸಿದ್ದಾರೆ.
ಮೇ 21 ರಂದು ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶ್ರೀ ರಂಗನಾಥ್ ಹೆಚ್. ಸಿ ಮತ್ತು ಶ್ರೀ ಪ್ರಸನ್ನ ಕುಮಾರ್ ಎ.ಹೆಚ್.ಸಿ ರವರ ಉತ್ತಮವಾದ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಿರುತ್ತಾರೆ.