ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೆಗೌಡರ ನಿವಾಸದಲ್ಲಿ
ಎಚ್ ಡಿ ರೇವಣ್ಣ ಬಂಧನ..!!
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಹಾಸನ:ಹಾಸನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್ ಡಿ ರೇವಣ್ಣ ವಿರುದ್ಧ ಎಸ್ಐಟಿ ತನಿಖೆ ಚುರುಕುಗೊಂಡಿದೆ
ಇಂದು ರೇವಣ್ಣ ಮನೆಗೆ ಎಸ್ಐಟಿ ತಂಡ ಸಂತ್ರಸ್ತ ಮಹಿಳೆಯನ್ನು ಸ್ಥಳ ಮಹಜರಿಗೆ ಕರೆತಂದಿದ್ದಾರೆ. ಮಹಿಳೆಯನ್ನು ರೇವಣ್ಣ ಅವರ ಹೊಳೆನರಸೀಪುರ ದ ಮನೆಗೆ ಕರೆತಂದು ಸ್ಥಳ ಮಹಜರು ಮಾಡಿದ್ದಾರೆ. ಈ ವೇಳೆ ಮಾಧ‍್ಯಮಗಳು, ಸಾರ್ವಜನಿಕರು ಮನೆಯ ಒಳಗೆ ಪ್ರವೇಶಿಸಿದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಲ್ಯಾಪ್ ಟಾಪ್, ಸ್ಕ್ಯಾನರ್, ಪ್ರಿಂಟರ್ ಗಳನ್ನೂ ಎಸ್ಐಟಿ ತಂಡ ತೆಗೆದುಕೊಂಡುಬಂದಿದೆ. ಪೊಲೀಸರ ತಂಡ ರೇವಣ್ಣ ಮನೆಯಲ್ಲಿ ತೀವ್ರ ಶೋಧ ನಡೆಸಿದೆ. ಈ ಪ್ರಿಂಟರ್ ಗಳನ್ನು ತೆಗೆದುಕೊಂಡು ಬಂದಿದ್ದರ ಹಿಂದಿನ ಕಾರಣವೇನೆಂದು ತಿಳಿದುಬಂದಿಲ್ಲ.
ಇನ್ನೊಂದೆಡೆ ಎಚ್ ಡಿ ರೇವಣ್ಣ ವಿರುದ್ಧ ಮನೆ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ, ಓರ್ವ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದೆ. ಹೀಗಾಗಿ ಎಚ್ ಡಿ ರೇವಣ್ಣ ಬಂಧನಕ್ಕೆ ಕ್ಷಣಗಣನೆ ಶುರುವಾಗಿ ಬಂಧನಕ್ಕೆ ಪೋಲಿಸರು ಭಲೇ ಬಿಸಿದ್ದಾರೆ.ಅದರೆ ಹೆಚ್ ಡಿ ರೇವಣ್ಣ ಪೋಲಿಸರ ಕೈಗೆ ಸಿಗದೆ ಎಲ್ಲಿ ಅಡಗಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಇದರ ಬೆನ್ನಿಗೆ ಎಸ್ಐಟಿ ಅಧಿಕಾರಿಗಳು ಹೆಚ್ ಡಿ ರೇವಣ್ಣ ಅವರು ಹೆಚ್ ಡಿ ದೇವೆಗೌಡರ ಪದ್ಮನಾಭ ನಗರದ ಮನೆಗೆಯಲ್ಲಿ ಇರಬಹುದು ಎನ್ನುವ ಅನುಮಾನದಲ್ಲಿ ಸರ್ಚ್ ವಾರೆಂಟ್ ನೊಂದಿಗೆ ಈಗಾಗಲೇ ಹೋಗಿದ್ದಾರೆ.! ಅದರೆ ದೇವಗೌಡರ ಮನೆಯ ಬಾಗಿಲು ಬಂದ್ ಆಗಿದೆ. ಬಾಗಿಲು ತೆರೆಯದೆ ಎಸ್ಐಟಿ ಅಧಿಕಾರಿಗಳನ್ನು ಬಾಗಿಲಲ್ಲೆ ಕಾಯಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಪಡೆದು ರೇವಣ್ಣನನ್ನು ಬಂಧಿಸಲು ಎಸ್ಐಟಿ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ವಜಾ ಅದ ಬೆನ್ನಿಗೆ ಎಸ್ಐಟಿ ಅಧಿಕಾರಿಗಳಿಂದ ಈ ಬೆಳವಣಿಗೆಯಾಗಿದೆ ಇದೀಗ ಬಂದ ಸುದ್ಧಿಯಂತೆ ಕೊನೆಗೂ ರೇವಣ್ಣರನ್ನು ಪ್ರಧಾನಿ ದೇವೆಗೌಡರ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.!!