ಶಿ.ಜು.ಪಾಶರ ಮಿಳಘಟ್ಟ ವಾರ್ಡಿನಲ್ಲಿ ಗೀತಾ ಶಿವರಾಜಕುಮಾರ್, ನಟ ಶಿವರಾಜ್ ಕುಮಾರ್ ಭರ್ಜರಿ ಮತಯಾತ್ರೆ
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ :ಇನ್ನೇನು ಮತದಾನಕ್ಕೆ ಕೆಲವೆ ದಿನ ಬಾಕಿ ಇರುವಂತೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಣ ರಂಗೆರಿದೆ. ದಿಢೀರ್ ಬೆಳವಣಿಗೆಯಲ್ಲಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.! ಸೈಲೆಂಟ್ ಆಗಿಯೆ ಮತ ಬೇಟೆಗೆ ಮುಂದಾದ ಕೆ ಎಸ್ ಈಶ್ವರಪ್ಪ ಮತದಾರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿವೆ ಎರಡು ಪಕ್ಷಗಳು ಶಿವಮೊಗ್ಗ ಕ್ಷೇತ್ರವ್ಯಾಪ್ತಿ ಬಿರುಸಿನ ಪ್ರಚಾರಕ್ಕೆ ಮುಂದಾಗಿವೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಜನಪ್ರಿಯ ಐದು ಗ್ಯಾರಂಟಿಗಳು ಮತವಾಗಿ ಕಾಂಗ್ರೆಸ್ ಪಕ್ಷದೇಡೆ ವಾಲಿದರೆ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ ಎನ್ನುವ ಮಾತು ಕ್ಷೇತ್ರದ ಎಲ್ಲೆಡೆ ಕೇಳಿ ಬರುತ್ತಿದೆ ಜೋತೆಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮತ್ತು ನಟ ಶಿವರಾಜಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ನವರು ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಮತ್ತು ನಾಯಕರು ಹಾಗೂ ಕಾರ್ಯಕರ್ತರ ದೊಡ್ಡ ಪಡೆಯೊಂದಿಗೆ ಬೂತ್ ಮಟ್ಟದಿಂದ ಪಟ್ಟಣ ಮತ್ತು ನಗರ ವ್ಯಾಪ್ತಿಯಲ್ಲಿ ಮನೆ ಮನೆಗೂ ತೆರಳಿ ಮತಯಾಚನೆಗೆ ಮುಂದಾಗಿದ್ದಾರೆ ಮೇಲು ನೋಟಕ್ಕೆ ಮತದಾರ ಕಾಂಗ್ರೆಸ್ ಪಕ್ಷದ ಪರವಾಗಿದ್ದರೂ ಬಿಜೆಪಿಯ ಮತಗಳು ಕಾಂಗ್ರೆಸ್ ಪಕ್ಷದ ಪರ ವಾಲುವುದು ಸುಲಭದ ಮಾತಲ್ಲ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ದಿಸಿರುವ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ನಿರ್ಣಾಯಕ ಪಾತ್ರವಹಿಸಿದರೆ ಆಶ್ಚರ್ಯವಿಲ್ಲ..!
ಅದೇನೇ ಇರಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಗೆಲುವಿಗಾಗಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ.
ಶಿವಮೊಗ್ಗ ನಗರದ ವಾರ್ಡ್ ನಂ 27 ರ ಮಿಳಘಟ್ಟ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಎಂ.ಶ್ರೀಕಾಂತ್, ವಿಧಾನಸಭಾ ಅಭ್ಯರ್ಥಿ ಆಗಿದ್ದ ಹೆಚ್ ಸಿ ಯೋಗೇಶ್,ಶಿ ಜು ಪಾಶ, ಯು.ಶಿವಾನಂದ್, ದಕ್ಷಿಣ ಬ್ಲಾಕ್, ಉತ್ತರ ಬ್ಲಾಕಿನ ಕಲೀಂ ಪಾಷ, ಶಿವಕುಮಾರ್, ಮಾಜಿ ಕೌನ್ಸಿಲರ್ ಮುನಿಸ್ವಾಮಿ, ವಾರ್ಡ್ ಅಧ್ಯಕ್ಷ ರಾಮನಾಥ್, ಸಲೀಂ, ವಸೀಂ, ರವರ ಉಪಸ್ಥಿತಿಯಲ್ಲಿ ಮತಯಾತ್ರೆ ನಡೆಯಿತು. ಈ ವಾರ್ಡಲ್ಲಿ ಬಹಳ ವಿಶೇಷವಾಗಿ ಗಮನ ಸೆಳೆಯಿತು.
ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಿವಣ್ಣನ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಾ ರೋಡ್ ಶೋನಲ್ಲಿ ಸಾಗಿದರು