ದೇಶದ ಅಭಿವೃದ್ದಿಗೆ ಮೋದಿಯೇ ಕಾರಣ :ಲೋಕಸಭಾ ಅಭ್ಯರ್ಥಿ ಸಂಸದ ಬಿ.ವೈ.ರಾಘವೇಂದ್ರ

ದೇಶದ ಅಭಿವೃದ್ದಿಗೆ ಮೋದಿಯೇ ಕಾರಣ :ಲೋಕಸಭಾ ಅಭ್ಯರ್ಥಿ ಸಂಸದ ಬಿ.ವೈ.ರಾಘವೇಂದ್ರ

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಶಿಕಾರಿಪುರ : ಗ್ರಾಮಪಂಚಾಯಿತಿ ಮಟ್ಟದಿಂದ ರಾಷ್ಟ್ರದ ರಾಜಧಾನಿ ನವದೆಹಲಿಯವರೆಗೆ ದೇಶದ ಅಭಿವೃದ್ದಿಯಾಗಿದ್ದು, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 10 ವರ್ಷದ ಆಡಳಿತ ವೈಖರಿಗೆ ಕಾರಣ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ತಾಲ್ಲೂಕಿನ ಈಸೂರು ಹಾಗೂ ಗಾಮವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಗ್ರಾಮಮಟ್ಟದಲ್ಲಿ ಅಭಿವೃದ್ದಿ ಕಾರ್ಯಗಳು ನಡೆದರೆ ಅದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಂತಾಗುತ್ತದೆ ಎಂಬ ಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಹಾಗೂ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡರು ಎಂದರು.

ಗ್ರಾಮದ ಪ್ರತಿಯೊಂದು ಮನೆಗೂ ಶುದ್ದ ಕುಡಿಯುವ ನೀರಿಗೂ ದೊರಕಿಸಿಕೊಡುವ ನಿಟ್ಟಿನಲ್ಲಿ ಜಲಜೀವನ ಮಿಷನ್ ಯೋಜನೆಯನ್ನು ರೂಪಿಸಿ ಪ್ರತಿ ಮನೆಮನೆಗೆ ನೀರು ಪೂರೈಕೆ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸ್ವಚ್ಚಭಾರತದ ಅಡಿಯಲ್ಲಿ 12 ಕೋಟಿ ಶೌಚಾಲಯವನ್ನು ನಿರ್ಮಿಸುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಗೌರವಯುತವಾಗಿ ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದಾರೆ ಎಂದು ಹೇಳಿದರು.


ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ರಾಷ್ಟ್ರದ ಹಿತದೃಷ್ಟಿಯಿಂದ ಅವಶ್ಯಕವಾಗಿದೆ. ಆದ್ದರಿಂದ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಕ್ರಮಸಂಖ್ಯೆ 2 ಕಮಲದ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಮತವನ್ನು ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್,ರುದ್ರೇಗೌಡ, ಚಿತ್ರನಟಿ ತಾರಾ, ಮುಖಂಡರಾದ ನಾಗರಾಜ್, ಪರಮೇಶ್ವರಪ್ಪ, ಹುಚ್ಚಪ್ಪ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!